ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (24-09-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಸಾಹಿತ್ಯ ಎಂಬುದು ಮನುಷ್ಯನ ಚಾರಿತ್ರ್ಯ ನಿರ್ಮಾಣಕ್ಕೆ ಬುನಾದಿ ಇದ್ದಂತೆ. ಸಂತೋಷ ನೀಡುವುದಷ್ಟೇ ಸಾಹಿತ್ಯದ ಗುರಿಯಲ್ಲ. ಅದರ ಗುರಿ ಆತ್ಮ ಸಾಕ್ಷಾತ್ಕಾರವಾಗ ಬೇಕು.-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 24.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ಬೆ.01.46 / ಚಂದ್ರ ಅಸ್ತ ರಾ.01.23
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ (ರಾ.07.02)
ನಕ್ಷತ್ರ: ಮೂಲ(ಸಾ.06.10) ಯೋಗ: ಸೌಭಾಗ್ಯ (ರಾ.09.54) ಕರಣ: ಭದ್ರೆ-ಭವ (ಬೆ.07.25-ರಾ.07.02)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 08

ಮೇಷ: ಬಂಧು-ಮಿತ್ರರಲ್ಲಿ ಸಣ್ಣಪುಟ್ಟ ಕಲಹ ವಾಗಬಹುದು. ದುಷ್ಟ ಜನರಿಂದ ತೊಂದರೆ
ವೃಷಭ: ಆಪ್ತಮಿತ್ರರು ಮೋಸ ಮಾಡಬಹುದು
ಮಿಥುನ: ಪ್ರತಿಷ್ಠಿತ ವ್ಯಕ್ತಿಗಳಿಂದ ಸಹಾಯ ಸಿಗಲಿದೆ
ಕಟಕ: ಅತಿಥಿಗಳ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ
ಸಿಂಹ: ಬಡ್ಡಿ ವ್ಯಾಪಾರಸ್ಥರಿಗೆ ಲಾಭದಾಯಕವಾದ ದಿನ

ಕನ್ಯಾ: ಬೇರೆಯವರಿಗೆ ಸಹಾಯ ಮಾಡುತ್ತೀರಿ
ತುಲಾ: ಪತಿ-ಪತ್ನಿಯರ ಮಧ್ಯೆ ಇದ್ದ ವಿರಸ ಕಡಿಮೆಯಾಗುತ್ತದೆ
ವೃಶ್ಚಿಕ: ವಿದ್ಯಾ ವ್ಯಾಸಂಗದಲ್ಲಿ ಗುರಿ ಮೀರಿ ಸಾಧನೆ ಮಾಡುವಿರಿ
ಧನುಸ್ಸು: ಹಣ ಗಳಿಸುವುದಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ

ಮಕರ: ಶುಭ ವಾರ್ತೆಯನ್ನು ಕೇಳುವಿರಿ
ಕುಂಭ: ಪ್ರೇಮಿಗಳಿಗೆ ಪೋಷಕರಿಂದ ತೊಂದರೆ
ಮೀನ: ಸಾಲದಿಂದ ಋಣ ಮುಕ್ತರಾಗುವಿರಿ

Facebook Comments