ಇಂದಿನ ರಾಶಿ ಭವಿಷ್ಯ (25-08-2020, ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಂಧುವೆಂಬ ಪಕ್ಷಪಾತ ಕಾಲಕ್ಕೆ ಇಲ್ಲ. ಕಾಲವನ್ನು ತಡೆಯಲು ಯಾವ ಉಪಾಯವೂ ಇಲ್ಲ. ಅದರ ವಿಷಯದಲ್ಲಿ ಪರಾಕ್ರಮವು ನಡೆಯದು. ಮಿತ್ರರ ಅಥವಾ ಬಂಧುಬಳಗಗಳ ಸಹಾಯವು ಕಾಲವನ್ನೆದುರಿಸಲು ನೆರವಾಗದು. ಅದು ನಮಗೆ ವಶವಾಗತಕ್ಕದಲ್ಲ.
ಪಂಚಾಂಗ : ಮಂಗಳವಾರ, 25-08-2020
ಸೂರ್ಯ ಉದಯ ಬೆ.6.08 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ಬೆ.11.59 / ಚಂದ್ರ ಅಸ್ತ ರಾ.11.50
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ (ಮ.12.22) / ನಕ್ಷತ್ರ:ವಿಶಾಖ (ಮ.1.59) / ಯೋಗ: ಇಂದ್ರ (ರಾ.9.49) / ಕರಣ: ವಣಿಜ್-ಭದ್ರೆ (ಮ.12.22-ರಾ.11.28) / ತೇದಿ:9
ಮೇಷ: ಕೋರ್ಟಿನಲ್ಲಿ ಜಯ ಸಾಸುವಿರಿ, ಅಣ್ಣ-ತಮ್ಮಂದಿರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು, ಆರೋಗ್ಯ ಉತ್ತಮವಾಗಿರುವುದು

ವೃಷಭ: ಪ್ರಯತ್ನಿಸಿದ ಕಾರ್ಯಗಳಿಗೆ ಅಡ್ಡಿ, ಪ್ರಯತ್ನಿಸಿದ ಕಾರ್ಯದಲ್ಲಿ ನಿಧಾನವಾಗಿ ಜಯ ಸಿಗುತ್ತದೆ, ಕಲಾವಿದರಿಗೆ, ವ್ಯಾಪಾರಿಗಳಿಗೆ ಸಕಾಲ

ಮಿಥುನ: ಆಕಸ್ಮಿಕ ಪ್ರಯಾಣ ಮಾಡಬಹುದು, ಸರ್ಕಾರಿ ನೌಕರರಿಗೆ ಉತ್ತಮವಾಗಿರುವುದಿಲ್ಲ

ಕಟಕ: ನಿಮ್ಮ ಬುದ್ಧಿ ಚಾತುರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಆಕಸ್ಮಿಕ ಧನಲಾಭವಾಗುವುದು, ಸ್ತ್ರೀ ಮೂಲಕ ಹಣ ವ್ಯಯವಾಗುವುದು

ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ, ಕೆಲವರಿಗೆ ಸನ್ಮಾನ ಸಮಾರಂಭಗಳು ನಡೆಯಬಹುದು

ಕನ್ಯಾ: ನೆರೆಹೊರೆಯವರಿಂದ ಹೆಚ್ಚಿನ ಸಹಾಯ ದೊರೆಯುತ್ತದೆ, ನ್ಯಾಯಾಲಯದ ವ್ಯವ ಹಾರ ಮಾಡದಿರುವುದೇ ಒಳಿತು

ತುಲಾ: ಗುರು-ಹಿರಿಯರ ಮಾತನ್ನು ತಿರಸ್ಕರಿಸುವುದರಿಂದ ತೊಂದರೆಯಲ್ಲಿ ಸಿಲುಕುವಿರಿ, ಕುಟುಂಬದಲ್ಲಿನ ಕಿರಿಕಿರಿ ಶಾಂತವಾಗುತ್ತದೆ

ವೃಶ್ಚಿಕ: ತಂದೆ-ತಾಯಿ, ಬಗ್ಗೆ ಅಪಾರ ಗೌರವ ಹೊಂದಿರುತ್ತೀರಿ, ಹೆಚ್ಚು ಹಣ ಗಳಿಸುವುದಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ

ಧನುಸ್ಸು: ಭಿನ್ನಾಭಿಪ್ರಾಯ ನಿವಾರಣೆಯಾಗುತ್ತದೆ, ಮಿತ್ರರು ಧನ ಸಹಾಯ ಮಾಡಬಹುದು

ಮಕರ: ಮನಃಶಾಂತಿಗಾಗಿ ದೇವಾಲಯಗಳ ದರ್ಶನ ಮಾಡುವಿರಿ.ಕಾನೂನು ಸಮಸ್ಯೆಗಳು ಕಾಡಬಹುದು, ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿರಿ

ಕುಂಭ: ಅನ್ಯ ಜನರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ, ಸಹೋದರ, ಸಹೋದರಿಯರಲ್ಲಿ, ಅಕ್ಕಪಕ್ಕದವರಲ್ಲಿ ವೈಮನಸ್ಸು ಕಂಡುಬರುತ್ತದೆ

ಮೀನ: ಕೀರ್ತಿ-ಗೌರವ, ಪ್ರತಿಷ್ಠೆ ದೊರೆಯಲಿದೆ.ಗುಪ್ತ ಶತ್ರುಗಳಿಂದ ತೊಂದರೆಯಾಗಲಿದೆ

Facebook Comments

Sri Raghav

Admin