ಇಂದಿನ ಪಂಚಾಗ ಮತ್ತು ರಾಶಿಫಲ (16-07-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲ ವಿಧವಾದ ಏರಿಳಿತಗಳು ಅದೃಷ್ಟ ಮತ್ತು ಮನುಷ್ಯ ಪ್ರಯತ್ನಗಳನ್ನು ಅವಲಂಬಿಸಿವೆ. ಅವುಗಳಲ್ಲಿ ಅದೃಷ್ಟದ ಗತಿಯನ್ನು ಮನುಷ್ಯನ್ನು ತಿಳಿಯಲಾರ. ಮಾನುಷ ಯತ್ನವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.  -ಮನುಸ್ಮೃತಿ

# ಪಂಚಾಂಗ : ಮಂಗಳವಾರ, 16.07.2019
ಸೂರ್ಯ ಉದಯ ಬೆ.06.01/ ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಸಂ.06.31/ ಚಂದ್ರ ಅಸ್ತ ಬೆ.06.11
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ
(ರಾ.03.08) ನಕ್ಷತ್ರ: ಪೂರ್ವಾಷಾಢ (ರಾ.08.43)ಯೋಗ: ವೈಧೃತಿ, (ರಾ.03.21)
ಕರಣ: ಭದ್ರೆ-ಭವ (ಮ.02.25-ರಾ.03.08) ಮಳೆ ನಕ್ಷತ್ರ: ಪುನರ್ವಸು  ಮಾಸ: ಮಿಥುನ, ತೇದಿ: 31

#ರಾಶಿ ಭವಿಷ್ಯ
ಮೇಷ: ಉಪಯೋಗಕ್ಕೆ ಬಾರದ ಮಾತುಗಳನ್ನು ಆಡುತ್ತಾ ಸಮಯ ವ್ಯರ್ಥ ಮಾಡದಿರಿ
ವೃಷಭ: ಅಡೆತಡೆಗಳನ್ನು ಎದುರಿಸಿ ಮೆಟ್ಟಿ ನಿಲ್ಲು ವಂತಹ ಶಕ್ತಿಯು ತನ್ನಿಂದ ತಾನೇ ಲಭ್ಯವಾಗಲಿದೆ
ಮಿಥುನ: ನಿಮ್ಮ ಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ನಂಬದಿರಿ
ಕಟಕ: ಸಂಘ-ಸಂಸ್ಥೆ ಸರ್ಕಾರದ ಮೂಲಗಳಿಂದ ಗೌರವ ಪಡೆಯುವಿರಿ
ಸಿಂಹ: ಸಂಗೀತ, ಕಲೆಗಳಿಗೆ ಪ್ರೋತ್ಸಾಹ ನೀಡುವಿರಿ
ಕನ್ಯಾ: ಆರೋಗ್ಯದಲ್ಲಿ ಏರು ಪೇರು ಆಗುವ ಸಾಧ್ಯತೆಗಳಿವೆ
ತುಲಾ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
ವೃಶ್ಚಿಕ: ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ
ಧನುಸ್ಸು: ಸುಖವಾಗಿ ಜೀವಿಸಲು ಪ್ರಯತ್ನ ಮಾಡಿ
ಮಕರ: ಆದಷ್ಟು ಸಾಲಕ್ಕೆ ಕೈ ಚಾಚದಿರಿ
ಕುಂಭ: ಚಮತ್ಕಾರವಾಗಿ ಮಾತನಾಡುವಿರಿ
ಮೀನ: ಕುಟುಂಬದಲ್ಲಿ ಸೌಖ್ಯ ಕಡಿಮೆಯಾಗುವುದು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments