ಇಂದಿನ ಪಂಚಾಗ ಮತ್ತು ರಾಶಿಫಲ (21-07-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವೈರಿಯನ್ನು ಬುಡಸಹಿತ ನಾಶ ಮಾಡಬೇಕು. ಇಲ್ಲವೆ, ಅವನನ್ನು ಕೆಣಕಬಾರದು. ಹಾಗಿಲ್ಲದಿದ್ದರೆ ಕಾಲಿನಿಂದ ತುಳಿಯಲ್ಪಟ್ಟ ಹಾವಿನಂತೆ ನಮ್ಮ ವಿನಾಶಕ್ಕೆ ಕಾರಣನಾಗುತ್ತಾನೆ.  -ಭಾರತಮಂಜರೀ

# ಪಂಚಾಂಗ : ಭಾನುವಾರ, 21.07.2019
ಸೂರ್ಯ ಉದಯ ಬೆ.06.03/ ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.10.06 / ಚಂದ್ರ ಅಸ್ತ ಬೆ.09.28
ವಿಕಾರಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ
(ಬೆ.11.40) ನಕ್ಷತ್ರ: ಶತಭಿಷ (ಬೆ.07.25) ಯೋಗ: ಸೌಭಾಗ್ಯ (ಬೆ.06.18) ಕರಣ: ಬಾಲವ-ಕೌಲವ
(ಬೆ.11.40-ರಾ.12.53) ಮಳೆ ನಕ್ಷತ್ರ: ಪುಷ್ಯ ಮಾಸ: ಕಟಕ ತೇದಿ: 05

#ರಾಶಿ ಭವಿಷ್ಯ
ಮೇಷ: ಬಂಧು-ಮಿತ್ರರು ಶತ್ರುಗಳಾಗುವರು
ವೃಷಭ: ಚಿಕ್ಕ ವಿಷಯವೊಂದು ಭೂತಾಕಾರ ತಳೆದು ದೊಡ್ಡ ಸಮಸ್ಯೆಯನ್ನೇ ತರುವ ಸಾಧ್ಯತೆ ಇರುತ್ತದೆ
ಮಿಥುನ: ಹಣದ ತೊಂದರೆ ಇಲ್ಲದೆ ಹೋದರೂ ಸಹ ಸಾಲ ಮಾಡುವ ಸಂದರ್ಭಗಳು ಬರುವುದು
ಕಟಕ: ವಾಗ್ವಾದದಲ್ಲಿ ನಿಮ್ಮನ್ನು ಯಾರೂ ಗೆಲ್ಲಲಾರರು
ಸಿಂಹ: ಪ್ರಯಾಣವನ್ನು ಆದಷ್ಟು ಮುಂದೂಡುವುದು ಒಳಿತು
ಕನ್ಯಾ: ಹಣವನ್ನು ಕೂಡಿಡಲು ಪ್ರಯತ್ನ ಮಾಡುವಿರಿ
ತುಲಾ: ಅನೇಕ ರೀತಿಯಾದ ಕೆಲಸ ಕಾರ್ಯಗಳನ್ನು ಮಾಡಿ ಹೆಚ್ಚು ಹಣ ಸಂಪಾದನೆ ಮಾಡುವಿರಿ
ವೃಶ್ಚಿಕ: ಸಮಾಜದಲ್ಲಿ ಗೌರವ ದೊರೆಯುವುದು
ಧನುಸ್ಸು: ಮಕ್ಕಳಾಟ ಕಿರಿಕಿರಿ ತಂದೊಡ್ಡುವ ಸಾಧ್ಯತೆ
ಮಕರ: ಮನಸ್ಸು ಚಂಚಲವಾಗಿರುವುದು
ಕುಂಭ: ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ
ಮೀನ: ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments