ಇಂದಿನ ಪಂಚಾಗ ಮತ್ತು ರಾಶಿಫಲ (22-07-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯ ಸ್ನೇಹಿತನ ಲಕ್ಷಣ- ಪಾಪದ ಕೆಲಸ ಮಾಡುವುದನ್ನು ತಪ್ಪಿಸುತ್ತಾನೆ, ಒಳ್ಳೆಯ ದಾರಿಯಲ್ಲಿ ನಡೆಸುತ್ತಾನೆ, ಗುಟ್ಟನ್ನು ಬಚ್ಚಿಡುತ್ತಾನೆ, ಗುಣಗಳನ್ನು ಪ್ರಕಟಿಸುತ್ತಾನೆ, ಕಷ್ಟದಲ್ಲಿರುವಾಗ ಬಿಟ್ಟುಹೋಗುವುದಿಲ್ಲ, ಸಮಯದಲ್ಲಿ (ಹಣ ಮುಂತಾದ್ದನ್ನು) ಕೊಡುತ್ತಾನೆ- ಎಂದು ಸತ್ಪುರುಷರು ಹೇಳುತ್ತಾರೆ. -ನೀತಿಶತಕ

# ಪಂಚಾಂಗ : ಸೋಮವಾರ, 22.07.2019
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯರಾ.10.44 / ಚಂದ್ರ ಅಸ್ತ ಬೆ.10.13
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ
(ಮ.02.04) / ನಕ್ಷತ್ರ: ಪೂರ್ವಾಭಾದ್ರ (ಬೆ.10.24) / ಯೋಗ: ಶೋಭನ (ಬೆ.07.17) / ಕರಣ: ತೈತಿಲ-ಗರಜೆ (ಮ.02.04-ರಾ.03.13) / ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 06

# ರಾಶಿ ಭವಿಷ್ಯ
ಮೇಷ: ದೇವತಾ ಕಾರ್ಯಗಳು ಸಮಾಧಾನ ತರಲಿವೆ
ವೃಷಭ: ವೃತ್ತಿರಂಗದಲ್ಲಿ ಉದ್ಯೋಗ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಮಿಥುನ: ಸಾಂಸಾರಿಕವಾಗಿ ಸಮಾಧಾನಕರವಾದ ವಾತಾವರಣ ಇರುತ್ತದೆ. ಉತ್ತಮವಾದ ದಿನ
ಕಟಕ: ಆಗಾಗ ಧನಾಗಮನ ವಿದ್ದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ
ಸಿಂಹ: ಕಾರ್ಯಸಾಧನೆಗೆ ಪ್ರಯತ್ನಬಲದ ಅಗತ್ಯವಿದೆ
ಕನ್ಯಾ: ಧನಾಗಮನದಲ್ಲಿ ವಿಳಂಬವಾಗಲಿದೆ
ತುಲಾ: ನಿರುದ್ಯೋಗಿಗಳಿಗೆ ಆಗಾಗ ಅವಕಾಶಗಳು ಸಿಗಲಿವೆ
ವೃಶ್ಚಿಕ: ಕಾರ್ಯಸಾಧನೆಗೆ ನೆರೆಹೊರೆಯವರ ಅಡಚಣೆ ಇರುತ್ತದೆ
ಧನುಸ್ಸು: ದೇಹಾರೋಗ್ಯದ ಬಗ್ಗೆ ಜಾಗ್ರತೆ
ಮಕರ: ಅಡಚಣೆಗಳಿಂದಲೇ ಕಾರ್ಯಸಾಧನೆ
ಕುಂಭ: ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ
ಮೀನ: ಸಂಚಾರದಲ್ಲಿ ಜಾಗ್ರತೆ ಬೇಕು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin