ಇಂದಿನ ಪಂಚಾಗ ಮತ್ತು ರಾಶಿಫಲ (23-07-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹೆಂಡತಿಗೆ ಸಂತೋಷವಿಲ್ಲ, ಕಷ್ಟದಲ್ಲಿ ಬಾಂಧವರು ದೂರವಾಗಿದ್ದಾರೆ, ಸ್ನೇಹಿತರು ಉಪಕಾರ ಮಾಡುತ್ತಿಲ್ಲ. ಪರಿಜನರು ಹಣವಿಲ್ಲದೆ ಕಂಗಾಲಾಗಿದ್ದಾರೆ. ಮನಸ್ಸಿಗೆ ಸಂತೋಷವಿಲ್ಲ, ಈ ಜೀವನ ವಜ್ರ ಕಠಿಣವಾಗಿದೆ, ದೈವವು ಪ್ರತಿಕೂಲವಾಗಿದೆ. ಆದಾಗ್ಯೂ ಮನಸ್ಸು ಸುಖವನ್ನೇ ಬಯಸುತ್ತದಲ್ಲಾ..!  -ಸುಭಾಷಿತಸುಧಾನಿಧಿ

# ಪಂಚಾಂಗ : ಮಂಗಳವಾರ, 23.07.2019
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.11.21 / ಚಂದ್ರ ಅಸ್ತ ಬೆ.10.59
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ
(ಸಾ.04.16) ನಕ್ಷತ್ರ: ಉತ್ತರಾಭಾದ್ರ (ಮ.01.14) ಯೋಗ: ಅತಿಗಂಡ (ಬೆ.08.09)
ಕರಣ: ವಣಿಜ್-ಭದ್ರೆ (ಸಾ.04.16-ರಾ.05.14) ಮಳೆ ನಕ್ಷತ್ರ: ಪುಷ್ಯ ಮಾಸ: ಕಟಕ ತೇದಿ: 07

# ರಾಶಿ ಭವಿಷ್ಯ
ಮೇಷ: ಬಂಧು-ಮಿತ್ರರೊಂದಿಗೆ ಆದಷ್ಟು ಎಚ್ಚರಿಕೆಯಿಂದ ವ್ಯವಹರಿಸಿ. ಮೋಸ ಹೋಗದಿರಿ
ವೃಷಭ: ಶ್ರಮದ ಜೀವನ ನಡೆಸುವಿರಿ
ಮಿಥುನ: ಪದೇ ಪದೇ ಜಗಳಗಳು ಸುತ್ತಿಕೊಳ್ಳು ತ್ತಿವೆ ಎಂಬುದನ್ನು ಗಮನಿಸಿ ಆದಷ್ಟು ತಾಳ್ಮೆಯಿಂದ ಇರಿ
ಕಟಕ: ದೊಡ್ಡ ತಾಪತ್ರಯ ವೊಂದು ಬಗೆಹರಿಯಲಿದೆ
ಸಿಂಹ: ಚಿಕ್ಕ ವಿಷಯವನ್ನು ಅಲಕ್ಷ್ಯ ಮಾಡದಿರಿ
ಕನ್ಯಾ: ಅನೇಕ ವಿಧದಲ್ಲಿ ಧನಾಗಮನವಿರುವುದು
ತುಲಾ: ಬಹಳ ಹಿಡಿತದಿಂದ ಹಣ ಖರ್ಚು ಮಾಡುವಿರಿ
ವೃಶ್ಚಿಕ: ದಾನ, ಧರ್ಮ ಮಾಡಿದರೂ ಶತ್ರುಗಳಿಗೆ ಅಂಜಬೇಕಾಗುವುದು. ದೈವವನ್ನು ದೂಷಿಸುವಿರಿ
ಧನುಸ್ಸು: ನಿಮ್ಮ ರಟ್ಟೆಯಲ್ಲಿ ವಿಶ್ವಾಸವಿರಲಿ
ಮಕರ: ನೆರೆಹೊರೆಯವರೊಡನೆ ಸೌಹಾರ್ದದಿಂದಿರಿ
ಕುಂಭ: ಪ್ರಗತಿಗೆ ದಾರಿಯು ಸುಲಲಿತವಾಗಿದೆ
ಮೀನ: ಗುರುವಿನ ಅನುಗ್ರಹವಾಗಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments