ಇಂದಿನ ರಾಶಿ ಭವಿಷ್ಯ (27-08-2020, ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಂಕಟದಲ್ಲಿರುವವರನ್ನು ಕಂಡು ಅನುಕಂಪದಿಂದ ಯಥಾಶಕ್ತಿ ಅವರಿಗೆ ಸಹಾಯ ಮಾಡುವುದು ಮಾನವ ಧರ್ಮ.  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 27.08.2020
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ಬೆ.01.57 / ಚಂದ್ರ ಅಸ್ತ ರಾ.01.36
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ
ತಿಥಿ: ನವಮಿ, (ಬೆ.09.26) / ನಕ್ಷತ್ರ: ಜ್ಯೇಷ್ಠಾ (ಮ.12.37) / ಯೋಗ: ವಿಷ್ಕಂಭ
(ಸಾ.05.37) / ಕರಣ: ಕೌಲವ-ತೈತಿಲ (ಬೆ.09.26-ರಾ.08.59) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ, ತೇದಿ: 11

# ಮೇಷ: ಮುಖ್ಯ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ, ದೇವರ ಮೇಲೆ ನಂಬಿಕೆ ಇರಲಿ, ಮೈ-ಕೈ ನೋವಿನಿಂದ ಬಳಲುವ ನೀವು ಎಚ್ಚರಿಕೆಯಿಂದ ಹೊರಗೆ ಕಾಲಿಡುವುದು ಒಳಿತು

# ವೃಷಭ: ಹೆಂಡತಿ-ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಆರೋಗ್ಯ ಉತ್ತಮವಾಗಿರುವುದು, ಮನೆಯಲ್ಲಿ ವಿಶೇಷ ಕಾರ್ಯಕ್ಕೆ ಸಿದ್ಧತೆ

# ಮಿಥುನ: ಧೈರ್ಯದಿಂದ ಮುನ್ನುಗ್ಗಿದರೆ ಕೆಲಸದಲ್ಲಿ ಜಯ ದೊರೆಯುತ್ತದೆ. ಹೊಸ ವಸ್ತು ಖರೀದಿಸುವಿರಿ, ಸ್ತ್ರೀಯರಿಗೆ ಅನಾರೋಗ್ಯ ಉಂಟಾಗಬಹುದು

# ಕಟಕ: ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು, ನಿಮ್ಮ ಹಲವು ದಿನಗಳ ಕಾರ್ಯಕ್ಕೆ ಯಶಸ್ವಿ ಪ್ರತಿಫಲ ದೊರೆಯಲಿದೆ. ಅನಿರೀಕ್ಷಿತ ಧನಾಗಮನ

# ಸಿಂಹ: ಸ್ಥಿರಾಸ್ತಿ ವಿಷಯದಲ್ಲಿ ಗುಪ್ತ ಮಾತುಕತೆ ನಡೆಯುತ್ತದೆ, ಒಂಟಿಯಾಗಿ ದೂರ ಪ್ರಯಾಣ ಮಾಡದಿರಿ

# ಕನ್ಯಾ: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆಯಾಗಬಹುದು, ನಿಮ್ಮ ಕೆಲಸ- ಕಾರ್ಯಕ್ಕೆ ಹಲವು ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಲಿದೆ

# ತುಲಾ: ಉನ್ನತ ವ್ಯಕ್ತಿಗಳ ಪರಿಚಯದಿಂದ ಲಾಭವಾಗಬಹುದು, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಹೆಚ್ಚು ಮೌನವಾಗಿರುವುದು ಒಳ್ಳೆಯದು

# ವೃಶ್ಚಿಕ: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ. ಶತ್ರುಗಳಿಂದ ತೊಂದರೆ, ಅತಿಯಾದ ಆತಂಕ ಅನಾರೋಗ್ಯಕ್ಕೆ ಕಾರಣವಾಗಲಿದೆ

# ಮಕರ : ಗುರು-ಹಿರಿಯರನ್ನು ಗೌರವಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಎಲ್ಲರೂ ತಲೆದೂಗುತ್ತಾರೆ, ನೀವಾಡುವ ಮಾತುಗಳು ಪರಿಣಾಮ ಕಾರಿ ಮತ್ತು ಅಪಾಯಕಾರಿಯಾಗಿಯೂ ಇರುತ್ತವೆ

# ಧನುಸ್ಸು: ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮಕರ: ಇತರರಿಗೆ ನೀವು ತಲೆಬಾಗುವುದಿಲ್ಲ, ಅಮೂಲ್ಯ ವಸ್ತು ವನ್ನು ಕಳೆದುಕೊಳ್ಳುವ ಸಾಧ್ಯತೆ

# ಕುಂಭ: ಸದಸ್ಯರೊಡನೆ ಸಮಾಧಾನದಿಂದ ವರ್ತಿoಜಿ, ಹಿರಿಯರ ಸಲಹೆ, ಮಾರ್ಗದರ್ಶನವಿಲ್ಲದೆ ಹೆಚ್ಚಿನ ಕೆಲಸ ಮಾಡಲು ಮುಂದಾಗದಿರಿ

# ಮೀನ: ಏಕಾಗ್ರತೆ ಕಡಿಮೆಯಾಗುತ್ತದೆ, ಹಲವು ದಿನಗಳಿಂದ ಚಿಂತಿಸುತ್ತಿದ್ದ ವಿಚಾರಕ್ಕೆ ಸ್ಪಷ್ಟನೆ ಸಿಗುವುದು.ಉತ್ತಮ ದಿನ

Facebook Comments

Sri Raghav

Admin