ಇಂದಿನ ಪಂಚಾಗ ಮತ್ತು ರಾಶಿಫಲ (14-08-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನೆಗಳಾಗಲಿ, ವಸ್ತ್ರಗಳಾಗಲಿ, ಸುತ್ತಲಿರುವ ಕೋಟೆಗಳಾಗಲಿ, ಮೇಲುಮುಸುಕುಗಳಾಗಲಿ ಸ್ತ್ರೀಯರ ಮರ್ಯಾದೆಯನ್ನು ರಕ್ಷಿಸಲಾರವು. ಈ ಬಗೆಯ ರಾಜ ಮರ್ಯಾದೆಗಳೂ ಅಲ್ಲ. ಸ್ತ್ರೀಯರಿಗೆ ಶೀಲವೇ ಮರ್ಯಾದೆಯನ್ನು ರಕ್ಷಿಸುವ ಆಭರಣ.  –ರಾಮಾಯಣ

# ಪಂಚಾಂಗ : ಬುಧವಾರ, 14.08.2019
ಸೂರ್ಯ ಉದಯ-ಬೆ.06.07 / ಸೂರ್ಯ ಅಸ್ತ-ಸಂ.06.41
ಚಂದ್ರ ಉದಯ-ಸಂ.06.02/ ಚಂದ್ರ ಅಸ್ತ-ರಾ.05.48
ವಿಕಾರಿ ಸಂವತ್ಸರ / ದಕ್ಷಿಣಾಯಣ / ಋತು -ಶ್ರಾವಣ ಮಾಸ ಶುಕ್ಲ ಪಕ್ಷ / ತಿಥಿ: ಚತುರ್ದಶಿ
(ಮ.03.46) ನಕ್ಷತ್ರ: ಶ್ರವಣ (ದಿನಪೂರ್ತಿ) ಯೋಗ: ಆಯುಷ್ಮಾನ್ (ಬೆ.11.13)
ಕರಣ: ವಣಿಜ್-ಭದ್ರೆ (ಮ.03.46-ರಾ.04.51) ಮಳೆ ನಕ್ಷತ್ರ: ಆಶ್ಲೇಷಾ ಮಾಸ: ಕಟಕ ತೇದಿ: 29

# ರಾಶಿ ಭವಿಷ್ಯ
ಮೇಷ: ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ
ವೃಷಭ: ಕಚೇರಿಯಲ್ಲಿನ ಕಾರ್ಯ ಒತ್ತಡಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ
ಮಿಥುನ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶ ಗಳು ಒಂದಲ್ಲ ಒಂದು ರೀತಿಯಲ್ಲಿ ಒದಗಿ ಬರಲಿವೆ
ಕಟಕ: ಸಾಂಸಾರಿಕವಾಗಿ ಧರ್ಮ ಪತ್ನಿಯ ಸಹಕಾರದಿಂದ ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ
ಸಿಂಹ: ಹೊಸ ಕಾರ್ಯಾ ರಂಭಕ್ಕೆ ಹಿರಿಯರ ಸಲಹೆ- ಸೂಚನೆಗಳನ್ನು ಪಡೆಯಿರಿ
ಕನ್ಯಾ: ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿಯಾಗಲಿದೆ
ತುಲಾ: ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ
ವೃಶ್ಚಿಕ: ವ್ಯಾಪಾರಿಗಳ ಆದಾಯ ಹೆಚ್ಚಾಗಲಿದೆ
ಧನುಸ್ಸು: ಆಗಾಗ ಹಣದ ಸಮಸ್ಯೆ ಬಾಧಿಸಲಿದೆ
ಮಕರ: ಅಪವಾದ ಭೀತಿಗೆ ಒಳಗಾಗದಿರಿ
ಕುಂಭ: ಅಲಕ್ಷ್ಯದಿಂದ ಸಮಸ್ಯೆಗಳು ಬರಲಿವೆ
ಮೀನ: ಕಾರ್ಯಸಾಧನೆಗೆ ಅನುಕೂಲವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments