ಇಂದಿನ ಪಂಚಾಗ ಮತ್ತು ರಾಶಿಫಲ (15-08-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇನ್ನೊಬ್ಬರ ದೋಷವನ್ನು ಹುಡುಕುವುದರಲ್ಲಿ ಮನಸ್ಸು, ಇನ್ನೊಬ್ಬರ ಸುದ್ದಿಯನ್ನು ಕೇಳುವುದರಲ್ಲಿ ಕಿವಿ, ಇನ್ನೊಬ್ಬರಿಗೆ ಮರ್ಮಭೇದಕವಾಗುವ ಮಾತು- ಈ ಮೂರನ್ನು ದುರ್ಜನರಿಗಾಗಿ ಬ್ರಹ್ಮನು ಸೃಷ್ಟಿಸಿದ್ದಾನೆ. -ಕಲಿವಿಡಂಬನ

# ಪಂಚಾಂಗ : ಗುರುವಾರ, 15.08.2019
ಸೂರ್ಯ ಉದಯ-ಬೆ.06.07 / ಸೂರ್ಯ ಅಸ್ತ-ಸಂ.06.41
ಚಂದ್ರ ಉದಯ-ಸಂ.06.46/ ಚಂದ್ರ ಅಸ್ತ-ಬೆ.06.36
ವಿಕಾರಿ ಸಂವತ್ಸರ / ದಕ್ಷಿಣಾಯಣ / ಋತು -ಶ್ರಾವಣ ಮಾಸ ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ
(ಸಾ.05.59) ನಕ್ಷತ್ರ: ಶ್ರವಣ (ಬೆ.08.02) ಯೋಗ: ಸೌಭಾಗ್ಯ (ಬೆ.11.59) ಕರಣ: ಭವ
(ಸಾ.05.59) ಮಳೆ ನಕ್ಷತ್ರ: ಆಶ್ಲೇಷಾ ಮಾಸ: ಕಟಕ ತೇದಿ: 30

# ರಾಶಿ ಭವಿಷ್ಯ
ಮೇಷ: ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರುತ್ತವೆ. ದೂರ ಸಂಚಾರದಿಂದ ಆಯಾಸವಾಗಲಿದೆ
ವೃಷಭ: ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕಂಕಣಬಲಕ್ಕೆ ಪೂರಕವಾಗುತ್ತವೆ
ಮಿಥುನ: ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು
ಕಟಕ: ವ್ಯಾಪಾರ-ವ್ಯವಹಾರ ಗಳಲ್ಲಿ ಲಾಭಾಂಶ ಹೆಚ್ಚಿಸುವುದು
ಸಿಂಹ: ಕಿರಿಕಿರಿಯಿಂದ ಕಾರ್ಯ ಸಾಧನೆಗೆ ಅಡ್ಡಿಯಾಗಲಿದೆ
ಕನ್ಯಾ: ದೇವತಾ ಕಾರ್ಯಗಳಿಗೆ ಓಡಾಟ-ಖರ್ಚು ಇರುತ್ತದೆ
ತುಲಾ: ವೈಯಕ್ತಿಕವಾಗಿ ಗೃಹ ದಲ್ಲಿ ಅಶಾಂತಿಯ ವಾತಾವರಣ
ವೃಶ್ಚಿಕ: ಆಗಾಗ ಮಾನಸಿಕ ಸ್ಥಿತಿ ಕದಡಿ ನೆಮ್ಮದಿ ಇಲ್ಲದಾಗಲಿದೆ
ಧನುಸ್ಸು: ದೇಹಾರೋಗ್ಯದಲ್ಲಿ ಸುಧಾರಣೆ ಕಂಡು ಬಂದರೂ ಉದಾಸೀನತೆ ತೋರಿಸುವುದು ಬೇಡ
ಮಕರ: ಹೂಡಿಕೆಗಳ ಬಗ್ಗೆ ಜಾಗ್ರತೆ ವಹಿಸಬೇಕು
ಕುಂಭ: ಶೀತ, ಕಫ ಬಾಧೆಗಳಿಂದ ಅನಾರೋಗ್ಯ
ಮೀನ: ಹೆಂಡತಿ-ಮಕ್ಕಳಿಂದ ನೆಮ್ಮದಿ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments