ಇಂದಿನ ರಾಶಿ ಭವಿಷ್ಯ (28-7-2020- ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ರಾಜನು ಉಗ್ರನೂ, ಅಲ್ಪವೇತನ ಕೊಡತಕ್ಕ ವನೂ, ಮೈಮರೆತವನೂ, ಗರ್ವಿತನೂ, ವಂಚಕನೂ ಆಗಿದ್ದರೆ ಅವನಿಗೆ ವಿಪತ್ಕಾಲ ಬಂದಾಗ ಯಾವ ಪ್ರಜೆಗಳು ಸಹಾಯಕ್ಕೆ ಬರುವುದಿಲ್ಲ.  – ರಾಮಾಯಣ, ಅರಣ್ಯ

# ಮೇಷ: ಯಾವುದೇ ತೊಂದರೆ ಇಲ್ಲದೆ ಗುರಿ ತಲುಪುತ್ತೀರಿ, ಕೆಲಸ-ಕಾರ್ಯಗಳಲ್ಲಿ ಅಡಚಣೆಗಳಿದ್ದರೂ ಕಾರ್ಯಾನುಕೂಲವಾಗಲಿದೆ, ಅತಿಥಿಗಳ ಆಗಮನ, ವೃತ್ತಿರಂಗದಲ್ಲಿ ಹಿರಿಯ ವರ್ಗದವರಿಗೆ ಮುನ್ನಡೆ

# ವೃಷಭ: ಯಾರ ಮೇಲೂ ಅವಲಂಬಿತರಾಗಬೇಡಿ.ಯಾವುದೇ ರೀತಿಯ ಪತ್ರಗಳಿಗೆ ಸಹಿ ಹಾಕು ವಾಗ ಜಾಗ್ರತೆ ಅಗತ್ಯವಿದೆ, ಮಾತಿನಲ್ಲಿ ಮತಿ ತಪ್ಪದಿರಿ, ಅವಿವಾಹಿತರ ಆಸೆಗಳು ಫಲಿಸಲಿವೆ, ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ, ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು .

# ಮಿಥುನ: ಸ್ತ್ರೀ ಮೂಲಕ ಹಣ ವ್ಯಯವಾಗಬಹುದು, ಬಂಧು-ಮಿತ್ರರೊಂದಿಗೆ ಸಾಮರಸ್ಯವಿರಲಿ, ದೇವತಾ ಹಾಗೂ ಕಾರ್ಯಗಳಿಗಾಗಿ ಸಾಮಾಜಿಕ ಕಾರ್ಯಗಳಿಗಾಗಿ ಹೆಚ್ಚು ಓಡಾಟವಿರುತ್ತದೆ

# ಕಟಕ: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ ಆಗಬಹುದು. ಕಾರ್ಯರಂಗದಲ್ಲಿ ಶತ್ರು ಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೈರ್ಯ ನಿಮ್ಮಲ್ಲಿರುವುದು, ಹಿರಿಯರಿಂದ ಸೂಕ್ತ ಸಲಹೆಗಳು ದೊರೆಯಲಿವೆ

# ಸಿಂಹ: ಸ್ಥಿರಾಸ್ತಿ ವಿಷಯದಲ್ಲಿ ಗುಪ್ತ ಮಾತುಕತೆ ನಡೆಯುತ್ತದೆ, ರಾಜಕೀಯದವರಿಗೆ ಕಾರ್ಯ ಒತ್ತಡ, ಆರೋಗ್ಯದಲ್ಲಿ ಏರುಪೇರಾಗಬಹುದು, ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ನಿರುತ್ಸಾಹ, ದೂರ ಸಂಚಾರದಿಂದ ಸಂತೃಪ್ತಿ

#ಕನ್ಯಾ: ದೂರ ಪ್ರಯಾಣ ಸಾಧ್ಯತೆ , ಗೃಹ ನಿರ್ಮಾಣದ ಕನಸು ನನಸಾಗಲಿದೆ, ವೃತ್ತಿರಂಗದಲ್ಲಿ ಮುಂಬಡ್ತಿ, ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಾಡಬಹುದು

# ತುಲಾ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ, ಕೆಲಸ-ಕಾರ್ಯಗಳು ವಿಳಂಬಗತಿ ನಡೆಯಲಿವೆ, ಆರ್ಥಿಕ ಖರ್ಚು-ವೆಚ್ಚ ಗಳು ಆತಂಕ ಉಂಟುಮಾಡಲಿವೆ

# ವೃಶ್ಚಿಕ: ಉನ್ನತ ವ್ಯಕ್ತಿಗಳ ಪರಿಚಯದಿಂದ ನಿಮಗೆ ಲಾಭವಾಗಬಹುದು, ಗೃಹಿಣಿಯರಿಗೆ ಅಲಂಕಾ ರಿಕ ವಸ್ತುಗಳ ಖರೀದಿಯಿಂದ ಸಂತಸ ಸಿಗಲಿದೆ, ವ್ಯಾಪಾರ-ವ್ಯವಹಾರ ಗಳಲ್ಲಿ ಹೆಚ್ಚಿನ ಹೂಡಿಕೆ ಲಾಭಕರ

# ಧನುಸ್ಸು: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ, ಪ್ರತಿಷ್ಠಿತ ಜನರ ಸಹಕಾರದಿಂದ ಕಾರ್ಯಸಿದ್ಧಿ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ತುಸು ಸಮಾಧಾನ ತರಲಿದೆ, ಅವಿವಾಹಿತರಿಗೆ ಕಿರಿಕಿರಿ

# ಮಕರ: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ, ದೂರ ಸಂಚಾರ ಮಾಡುವ ಸಾಧ್ಯತೆಗಳಿವೆ, ವಾಹನ, ಭೂ ಖರೀದಿಯಲ್ಲಿ ವಂಚನೆಗೊಳಗಾಗುವಿರಿ

# ಕುಂಭ: ಪತಿ-ಪತ್ನಿಯರ ನಡುವೆ ಸಾಮರಸ್ಯ ಕಡಿಮೆ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ದೇವ ಸ್ಥಾನಕ್ಕೆ ಭೇಟಿ ನೀಡುವಿರಿ, ಶುಭ ಸುದ್ದಿ ಕೇಳುವಿರಿ, ಸಣ್ಣ ಸಣ್ಣ ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಹರಿಸಿರಿ, ಸಾಂಸಾರಿಕವಾಗಿ ಭಿನ್ನಾಭಿಪ್ರಾಯ

# ಮೀನ: ಧೈರ್ಯದಿಂದ ಮುನ್ನುಗ್ಗಿದರೆ ಕೆಲಸದಲ್ಲಿ ಜಯ, ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉತ್ತಮ ಫಲಿತಾಂಶ, ಆರ್ಥಿಕವಾಗಿ ನೆಮ್ಮದಿ ಇರುವುದಿಲ್ಲ

Facebook Comments

Sri Raghav

Admin