ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (28-08-2020 ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :
ಧರ್ಮವು ಯಾವ ಕಾರ್ಯವನ್ನು ಮಾಡಬೇಕು,
ಯಾವ ಕಾರ್ಯವನ್ನು ಮಾಡಬಾರದು,
ಯಾವುದು ಸಮಾಜಕ್ಕೆ ಹಿತವಾದುದು,
ಯಾವುದು ಅಹಿತವಾದುದು,
ಯಾವುದು ಪಾಪ, ಯಾವುದು ಪುಣ್ಯ ಮುಂತಾದ
ವಿವೇಕವನ್ನು ನೀಡಿ ಪಾಪಕಾರ್ಯಗಳನ್ನು ನಿಷೇಸುತ್ತದೆ;ಪುಣ್ಯಕಾರ್ಯಗಳನ್ನು ವಿಸಿ ಸಮಾಜವನ್ನು
ಸರಿಯಾದ ದಾರಿಯಲ್ಲಿ ನಡೆಸುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ, 28.08.2020
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ಬೆ.02.54 / ಚಂದ್ರ ಅಸ್ತ ರಾ.02.31
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ
ತಿಥಿ: ದಶಮಿ, (ಬೆ.08.39) / ನಕ್ಷತ್ರ: ಮೂಲ (ಮ.12.37) / ಯೋಗ: ಪ್ರೀತಿ
(ಸಾ.04.04) / ಕರಣ: ಗರಜೆ-ವಣಿಜ್ (ಬೆ.08.39-ರಾ.08.25) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 12

ಮೇಷ: ಸ್ವಜನ ಮತ್ತು ಪರರ ಜನರೊಡನೆ ವಿಶ್ವಾಸ ಗಳಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ, ನಿಮ್ಮ ಸಾಧನೆಯನ್ನು ಕುಟುಂಬಸ್ಥರು ಮತ್ತು ಬಂಧುಗಳು ಕೊಂಡಾಡುವರು

ವೃಷಭ: ಪರೋಪಕಾರ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಶತ್ರುಗಳು ಮಿತ್ರರಾಗುವರು, ಬಾಸ್ ಜತೆ ಜಗಳ ಮಾಡುವುದನ್ನು ಬಿಡಿ, ಮನೆಯಲ್ಲಿ ಅಶಾಂತಿ ವಾತಾವರಣ ಮೂಡುವುದು, ಬಂಧುಗಳ ಭೇಟಿ ಯಿಂದ ಕಲಹ ಉಂಟಾಗಲಿದೆ, ಕೆಲಸ-ಕಾರ್ಯ ಗಳನ್ನು ಒತ್ತಡದಿಂದ ಮಾಡ ಬೇಕಾದ ಪರಿಸ್ಥಿತಿ ಬರಲಿದೆ

ಮಿಥುನ: ಪಾಲುಗಾರಿಕೆಯಲ್ಲಿ ಹಣ ಹೂಡದಿರುವುದೇ ಉತ್ತಮ, ವೃತ್ತಿಯಲ್ಲಿ ನೆಮ್ಮದಿ ಸಿಗಲಿದೆ, ಮಗನೊಡನೆ ಜಗಳ ಸಂಭವಿಸಬಹುದು, ಧೈರ್ಯವಿದ್ದರೂ ಹಣದ ಕೊರತೆ ಎದುರಿಸುವ ಸಂದರ್ಭಗಳು ಎದುರಾಗಲಿವೆ, ಸರ್ಕಾರಿ ಕೆಲಸದಲ್ಲಿ ಜಯ ಸಿಗಲಿದೆ

ಕಟಕ: ವಶ್ಯಕ ವಸ್ತುಗಳ ಖರೀದಿ ಯಿಂದ ಸಂತೋಷವಾಗುವುದು, ಎಲ್ಲಾ ವಿಷಯಗಳಲ್ಲೂ ತಪ್ಪು ಹುಡುಕಬೇಡಿ, ಪತ್ನಿ ಹಾಗೂ ಮಕ್ಕಳು ಅನಾರೋಗ್ಯ ದಿಂದ ನೆಮ್ಮದಿ, ಕಳೆದುಕೊಳ್ಳುವ ಸೂಚನೆಗಳಿವೆ, ಹೃದಯದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ, ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ, ಹೆಂಡತಿ-ಮಕ್ಕಳ ಆರೋಗ್ಯದ ಕಡೆ ಗಮನವಿ ರಲಿ, ನಿಮ್ಮ ಆರೋಗ್ಯ ಉತ್ತಮವಾಗಿರುವುದು

ಸಿಂಹ: ವಿವಾಹ ಮುಂತಾದ ಶುಭ ಕಾರ್ಯಗಳನ್ನು ಮಾಡುತ್ತೀರಿ, ನಿಮ್ಮ ಆತುರದ ಸ್ವಭಾವದಿಂದಾಗಿ ಆತ್ಮ ವಿಶ್ವಾಸ ಕಳೆದುಕೊಳ್ಳುವಿರಿ, ಅಜೀರ್ಣ ವ್ಯಾಧಿ, ಜ್ವರದ ಬಾಧೆ ನಿಮ್ಮನ್ನು ಕಾಡಬಹುದು ಎಚ್ಚರಿಕೆಯಿಂದಿರಿ, ಶುಭ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ, ಮನೆಯಲ್ಲಿ ದೇವತಾ ಕಾರ್ಯಗಳು ಜರುಗುವುವು

ಕನ್ಯಾ: ಗೃಹದಲ್ಲಿ ಸುಖ- ಸಂತೋಷ ತುಂಬಿರುತ್ತದೆ, ಕೆಲವು ವಿಚಾರಗಳಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವಿರಿ, ಅಧಿಕಾರಿಗಳಿಂದ ಅತೃಪ್ತಿ ಉಂಟಾಗಲಿದೆ, ಹೆಂಡತಿ ಮನೆಯ ವರ ಕೆಲಸಗಳನ್ನು ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ

ತುಲಾ: ಸಾಲಗಾರರಿಂದ ಮುಕ್ತಿ ದೊರೆಯುತ್ತದೆ, ಮೇಲಾಧಿಕಾರಿಗಳ ಒಲುಮೆ ಗಳಿಸುವುದು ಅತಿ ಮಹತ್ವದ ಕೆಲಸವಾಗಿರುತ್ತದೆ, ದಾಂಪತ್ಯದಲ್ಲಿ ನಿರಾಸೆ ಉಂಂಟಾಗಲಿದೆ, ದುಷ್ಟರ ಸಹವಾಸ ದಿಂದ ದೂರವಿರುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ

ವೃಶ್ಚಿಕ: ಸತಿ-ಪತಿಯರ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ನೆಮ್ಮದಿ ಕಾಣುವಿರಿ, ನಿಮ್ಮ ಮೇಲಧಿಕಾರಿಗಳ ಬಗ್ಗೆ ಸಹೋದ್ಯೋಗಿಗಳ ಜತೆ ಮಾತನಾಡುವಿರಿ

ಧನುಸ್ಸು: ಸಜ್ಜನರ ಸಹವಾಸ ಮಾಡುವಿರಿ, ಅನ್ಯರು ನಿಮ್ಮ ದಾರಿ ತಪ್ಪಿಸುವರು, ಉನ್ನತ ಅಧಿಕಾರಿಗಳಿಂದ ತೊಂದರೆಯಾಗುವ ಸೂಚನೆಗಳಿವೆ, ದೂರದ ಬಂಧುಗಳನ್ನು ಭೇಟಿ ಮಾಡು ವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ

ಮಕರ: ಆರೋಗ್ಯದ ಬಗ್ಗೆ ನಿಗಾ ವಹಿಸಿ, ಸ್ಥಿರಾಸ್ತಿ ಖರೀದಿಸಲು ಮನಸ್ಸು ಮಾಡುವಿರಿ, ಬರಹಗಾರರು, ಮುದ್ರಕರು, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ, ಗೌರವ, ಕೀರ್ತಿ ಲಭಿಸಲಿದೆ, ಕೋರ್ಟ್ ವ್ಯವಹಾರದಲ್ಲಿ ಜಯ ಸಾಧಿಸುವಿರಿ

ಕುಂಭ: ಸಾಲಕ್ಕೆ ಯಾರಿಗೂ ಸಾಕ್ಷಿ ಹಾಕಬೇಡಿ ಮೀನ: ಬಂಧುಗಳಿಗೆ ಸಹಾಯ ಮಾಡುವಿರಿ, ಮಹತ್ವದ ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ, ಮುಖ್ಯ ವಿಷಯ ಗಳಲ್ಲಿ ಪ್ರಗತಿ ಸಾಧಿಸುವಿರಿ,  ಮಕ್ಕಳ ಆರೋಗ್ಯ ದಲ್ಲಿ ಏರುಪೇರಾಗಲಿದೆ, ಖರ್ಚು ಹೆಚ್ಚುವುದು, ಕೆಲವರಿಗೆ ಆಭರಣದಿಂದ ಲಾಭವಿದೆ

ಮೀನ: ಆಪ್ತ ಸ್ನೇಹಿತರನ್ನು ಬೆಂಬಲಿಸುವಿರಿ, ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ, ಅವಿವಾಹಿತರಿಗೆ ವಿವಾಹ ಯೋಗವಿದೆ, ಹೆಂಡತಿ ಜತೆ ಜಗಳ ಸಂಭವಿಸ ಬಹುದು, ಎಚ್ಚರಿಕೆಯಿಂದಿರುವುದು ಒಳಿತು, ಅತಿಯಾದ ಕೋಪ ದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ, ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ

Facebook Comments

Sri Raghav

Admin