ಇಂದಿನ ಪಂಚಾಗ ಮತ್ತು ರಾಶಿಫಲ (22-08-2019-ಗುರುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗ್ರಾಮ್ಯಭೋಗಗಳಲ್ಲಿ ಆಸಕ್ತನಾಗಿ ಮನಬಂದಂತೆ ನಡೆಯುವ ಸುಖಲೋಲುಪನಾದ ರಾಜನನ್ನು ಪ್ರಜೆಗಳು ಗೌರವಿಸುವುದಿಲ್ಲ. ಮಸಣದ ಬೆಂಕಿಯನ್ನು ಕಂಡಂತೆ ಹೀನನಾಗಿ ಕಾಣುತ್ತಾರೆ.  -ರಾಮಾಯಣ

# ಪಂಚಾಂಗ : 22.08.2019, ಗುರುವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.37
ಚಂದ್ರ ಉದಯ ರಾ.11.16 / ಚಂದ್ರ ಅಸ್ತ ಬೆ.11.16
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ಷಷ್ಠಿ (ಬೆ.7.06)
ನಕ್ಷತ್ರ: ಭರಣಿ(ರಾ.2.36) ಯೋಗ: ವೃದ್ಧಿ(ಸಾ.5.03) ಕರಣ: ವಣಿಜ್-ಭದ್ರೆ (ಬೆ.7.06-ರಾ.7.42)
ಮಳೆ ನಕ್ಷತ್ರ: ಮಖ  ಮಾಸ: ಸಿಂಹ, ತೇದಿ: 05

# ರಾಶಿ ಭವಿಷ್ಯ
ಮೇಷ: ಸರ್ಕಾರಿ ನೌಕರರಿಗೆ ಮುಂಬಡ್ತಿ
ವೃಷಭ: ಆರೋಗ್ಯದ ಬಗ್ಗೆ ಗಮನಹರಿಸಿ
ಮಿಥುನ: ಮನೆಯಲ್ಲಿ ನೆಮ್ಮದಿ ಇದ್ದರೂ ಉದ್ಯೋಗ ರಂಗದಲ್ಲಿ ಸಮಾಧಾನವಿಲ್ಲ
ಕಟಕ: ಆರ್ಥಿಕವಾಗಿ ನಾನಾ ರೀತಿಯಲ್ಲಿ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತ ಹೋಗಲಿದೆ
ಸಿಂಹ: ವ್ಯವಹಾರಗಳನ್ನು ಜಾಗ್ರತೆ ಯಿಂದ ನಡೆಸಿಕೊಂಡು ಹೋಗಬೇಕು
ಕನ್ಯಾ: ವ್ಯಾಪಾರ,ವ್ಯವಹಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ
ತುಲಾ: ಶುಭ ಕಾರ್ಯಗಳ ಚಿಂತನೆ ಕಾರ್ಯಗತ
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಜಾಗ್ರತೆವಹಿಸಿರಿ.
ಧನುಸ್ಸು: ಅನಿರೀಕ್ಷಿತ ತಿರುವುಗಳು ನಡೆಯಲಿವೆ
ಮಕರ: ಆದಾಯದ ಮೂಲ ಹೆಚ್ಚಲಿದೆ
ಕುಂಭ: ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಿರಿ
ಮೀನ: ಅತಿಥಿಗಳ ಆಗಮನದಿಂದ ಅಧಿಕ ಖರ್ಚು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments