ಇಂದಿನ ಪಂಚಾಗ ಮತ್ತು ರಾಶಿಫಲ (26-08-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜನರು ಪುಣ್ಯ ಕೆಲಸಗಳನ್ನು ಮಾಡಲು ಇಷ್ಟ ಪಡುವುದಿಲ್ಲ. ಆದರೆ, ಪುಣ್ಯದ ಫಲ ಸಿಕ್ಕುವ ಹಾಗಿದ್ದರೆ ತೆಗೆದು ಕೊಳ್ಳಲು ಆಸೆ ಪಡುತ್ತಾರೆ. ಇವರಿಗೆ ಪಾಪದ ಫಲ ಬೇಡ. ಆದರೆ ಪ್ರಯತ್ನ ಪೂರ್ವಕವಾಗಿ ಪಾಪದ ಕೆಲಸಗಳನ್ನು ಮಾಡುತ್ತಾರೆ. -ಮಹಾಭಾರತ

# ಪಂಚಾಂಗ : 26.08.2019, ಸೋಮವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.02.39/ ಚಂದ್ರ ಅಸ್ತ ಮ.02.54
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ/ ಕೃಷ್ಣ ಪಕ್ಷ / ತಿಥಿ: ದಶ-ಏಕಾದಶಿ
(ಬೆ.07.03-ರಾ.05.10) ನಕ್ಷತ್ರ: ಆರಿದ್ರಾ (ರಾ.02.56) ಯೋಗ: ವಜ್ರ (ಮ.12.10)
ಕರಣ: ಭದ್ರೆ-ಭವ-ಬಾಲವ (ಬೆ.07.03-ಸಾ.06.12-ರಾ.05.10) ಮಳೆ ನಕ್ಷತ್ರ: ಮಖ  ಮಾಸ: ಸಿಂಹ ತೇದಿ: 09

# ರಾಶಿ ಭವಿಷ್ಯ
ಮೇಷ: ಕೆಲಸ-ಕಾರ್ಯಗಳು ಹಂತ ಹಂತವಾಗಿ ಪೂರ್ಣ ಗೊಳ್ಳಲಿವೆ. ಸಂಚಾರದಲ್ಲಿ ಜಾಗ್ರತೆ ಇರಲಿ
ವೃಷಭ: ವ್ಯಾಪಾರ-ವ್ಯವಹಾರಗಳ ಹೂಡಿಕೆ ಲಾಭಕರ
ಮಿಥುನ: ಅನಾವಶ್ಯಕ ಅಪವಾದಗಳು ಬರುವ ಸಾಧ್ಯತೆಗಳಿವೆ
ಕಟಕ: ದೂರಾಲೋಚನೆಯಿಂದ ಕಾರ್ಯತಂತ್ರ ರೂಪಿಸಿದರೆ ಒಳಿತು
ಸಿಂಹ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ
ಕನ್ಯಾ: ಅಲಂಕಾರಿಕ ವಸ್ತುಗಳ ಖರೀದಿಗೆ ನಾನಾ ರೀತಿಯಲ್ಲಿ ಧನವ್ಯಯವಾಗಲಿದೆ
ತುಲಾ: ಆಸ್ತಿ ಖರೀದಿಗಾಗಿ ಧನವ್ಯಯವಾಗಲಿದೆ
ವೃಶ್ಚಿಕ: ಕೆಲಸ-ಕಾರ್ಯಗಳು ಸಹವರ್ತಿಗಳ ಅಡಚಣೆಗಳಿಂದಲೇ ಮುಂದುವರಿಯಲಿವೆ
ಧನುಸ್ಸು: ಬಂಧು-ಬಳಗದವರಿಂದ ಕಿರಿಕಿರಿ ಸಾಧ್ಯತೆ
ಮಕರ: ಅನಿರೀಕ್ಷಿತವಾಗಿ ಶುಭ ಸುದ್ದಿ ಕೇಳುವಿರಿ
ಕುಂಭ: ಧನಾಗಮನದಿಂದ ಮನಸ್ಸಿಗೆ ಸಂತಸ
ಮೀನ: ಆರ್ಥಿಕ ಅಡಚಣೆ ಕಡಿಮೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments