ಇಂದಿನ ರಾಶಿ ಭವಿಷ್ಯ : 29-07-2020, ಬುಧವಾರ

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ : ಹೊಸ ಜಾಗ ಖರೀದಿಸಿ ಮನೆ ಕಟ್ಟುವ ಯೋಗ, ಸಾಂಸಾರಿಕ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಹರಿಸಿಕೊಳ್ಳಬೇಕು, ಶುಭಕಾರ್ಯಗಳಿಗಾಗಿ ಓಡಾಟ, ಆಗಾಗ ಧನಾಗಮನದಿಂದ ಕಾರ್ಯಸಿದ್ಧಿ, ವೃತ್ತಿರಂಗದಲ್ಲಿ ಮುನ್ನಡೆಯುವ ಸಾಧ್ಯತೆ ಇದೆ

# ವೃಷಭ : ರಾಜಕೀಯದಲ್ಲಿರುವವರಿಗೆ ಗೊಂದಲದ ವಾತಾವರಣ, ಹಿರಿಯರ ವರ್ತನೆಯಿಂದ ಮನಸ್ಸಿಗೆ ಬೇಸರ, ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವರ ಕಿರುಕುಳ, ಸಾಂಸಾರಿಕವಾಗಿ ಹೊಂದಾಣಿಕೆ ಇದ್ದಲ್ಲಿ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ

# ಮಿಥುನ: ಆರ್ಥಿಕ ವ್ಯವಹಾರಗಳಲ್ಲಿ ಮುನ್ನಡೆ ಇರು ತ್ತದೆ, ಆಗಾಗ ಶುಭವಾರ್ತೆಗಳಿಂದ ಸಂತಸ ಉಂಟಾಗಲಿದೆ, ಬಂಧು-ಬಳಗದವರೊಂದಿಗೆ ಮನಸ್ತಾಪ, ಆದಾಯ ಉತ್ತಮವಿದ್ದರೂ ಖರ್ಚು- ವೆಚ್ಚಗಳು ಅಧಿಕವಾಗಿರುತ್ತವೆ.

# ಕಟಕ: ಸಾಂಸಾರಿಕವಾಗಿ ಹೊಂದಾಣಿಕೆಯಿದ್ದರೂ ಸಂತೃಪ್ತಿ, ಮನಸ್ಸಿಗೆ ಸಮಾಧಾನ ಸಿಗದು, ಆಗಾಗ ಕಾರ್ಯವಿಪತ್ತು ಕಾಣಿಸ ಬಹುದು, ಮಾನಸಿಕ ನೆಮ್ಮದಿ ಇರದು, ಮಿತ್ರರ ಆಗಮನದಿಂದ ಸಂತಸ, ವಿದ್ಯುದುಪಕರಣಗಳ ತಯಾರಕರಿಗೆ ಧನವ್ಯಯ

# ಸಿಂಹ: ಆರ್ಥಿಕವಾಗಿ ಅಭಿವೃದ್ಧಿ ಯಿದ್ದರೂ ಕೈಯಲ್ಲಿಹಣ ಉಳಿಯದು, ಅವಿವಾಹಿತರಿಗೆ ಇಷ್ಟಾರ್ಥ ಸಿದ್ಧಿ ಸೂಚನೆ, ಆತ್ಮವಿಶ್ವಾಸಗಳು ಮುನ್ನಡೆಗೆ ಸಾಧಕವಾಗಲಿವೆ, ವ್ಯಾಪಾರ-ವ್ಯವಹಾರಗಳು ಸರಾಗವಾಗಿ ನಡೆಯಲಿವೆ

# ಕನ್ಯಾ: ವಿದ್ಯಾರಂಗದಲ್ಲಿ ನಿರುತ್ಸಾಹ, ಅತಿಥಿಗಳ ಆಗಮನ,ಕಿರು ಸಂಚಾರದಿಂದ ಧನವ್ಯಯ, ಕ್ರಿಯಾಶೀಲತೆಯಲ್ಲಿ ಪ್ರಯತ್ನಬಲ, ಹಣದ ವ್ಯವಹಾರಗಳಲ್ಲಿ ಚೇತರಿಕೆ ಇದ್ದರೂ ವಂಚನೆಗೊಳಗಾಗುವಿರಿ

# ತುಲಾ: ನಿರೀಕ್ಷಿತ ಕಾರ್ಯ ಸಾಧನೆಗಾಗಿ ದೂರ ಸಂಚಾರವಿದೆ, ಹಿರಿಯರಿಗೆ ಪುಣ್ಯಕ್ಷೇತ್ರ ಗಳ ದರ್ಶನ ಭಾಗ್ಯವಿದೆ, ಬುದ್ಧಿಜೀವಿಗಳು ಅವಮಾನಕ್ಕೆ ಈಡಾಗಲಿದ್ದಾರೆ

# ವೃಶ್ಚಿಕ : ನಿರುದ್ಯೋಗಿಗಳಿಗೆ ಸ್ವಂತ ವ್ಯಾಪಾರದ ಅವಕಾಶಗಳಿವೆ, ಅಧಿಕಾರಿ ವರ್ಗದವರ ಮತಭೇದದಿಂದ ಕಾರ್ಯ ವಿಳಂಬ, ದೂರ ಪ್ರಯಾಣ, ತೋಟಗಾರಿಕೆ, ಹೈನುಗಾರಿಕೆ ವೃತ್ತಿಯವರಿಗೆ ಲಾಭಾಂಶವಿದೆ, ವಾಹನ ಖರೀದಿಗೆ ಸಕಾಲ

# ಧನುಸ್ಸು: ವಿದ್ಯಾರ್ಥಿಗಳ ಸತತ ಪ್ರಯತ್ನಬಲಕ್ಕೆ ನಿಶ್ಚಿತ ಫಲವಿದೆ, ರಾಜಕೀಯ ವಲಯದವರಿಗೆ ತುಸು ಚೇತರಿಕೆ ಆದರೂ ಒಮ್ಮೊಮ್ಮೆ ಅಧೈರ್ಯದ ಹೆಜ್ಜೆಯಿಂದ ಆತಂಕ, ಕಾರ್ಯಾನುಕೂಲಕ್ಕೆ ವಿಳಂಬ, ಅಡೆತಡೆಗಳಿರುತ್ತವೆ

# ಮಕರ: ವಾದ-ವಿವಾದಗಳಿಗೆ ಕಾರಣರಾಗದಿರಿ, ಸಾಂಸಾರಿಕವಾಗಿ ಸಹವರ್ತಿಗಳ ಸಹಕಾರ ಸಿಗಲಿದೆ, ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ, ದೇವತಾ ಕಾರ್ಯಗಳಿಗೆ ಖರ್ಚು ಮಾಡಿದರೂ ನಾನಾ ರೀತಿಯಲ್ಲಿ ಧನಾಗಮನದಿಂದ ನೆಮ್ಮದಿ ಇರುತ್ತದೆ

# ಕುಂಭ: ಕೌಟುಂಬಿಕವಾಗಿ ಹಿರಿಯರ ಅಸಹಕಾರದಿಂದ ಮನಸ್ಸಿಗೆ ಕಿರಿಕಿರಿ, ಯಂತ್ರ ರಿಪೇರಿಗಾಗಿ ಖರ್ಚು ಮಾಡುವಿರಿ, ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿವೆ, ಮಕ್ಕಳ ವಿಚಾರದಲ್ಲಿ ಜಾಗ್ರತೆಯಿಂದಿರಿ

# ಮೀನ: ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿವೆ, ಮಕ್ಕಳ ವಿಚಾರದಲ್ಲಿ ಜಾಗ್ರತೆಯಿಂದಿರಿ, ಸಾಂಸಾರಿಕ ಜೀವನ ತೃಪ್ತಿಕರ ವಾಗಿ ಸಾಗುತ್ತದೆ, ರಾಜಕೀಯ ವರ್ಗದವರಿಗೆ ಗೊಂದಲದ ಪರಿಸ್ಥಿತಿ, ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ

Facebook Comments

Sri Raghav

Admin