ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-08-2020, ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೇವಲ ಗುರು ದರ್ಶನದಿಂದ ಪ್ರಯೋಜನವಿಲ್ಲ ಶ್ರೀ ಗುರು ವಾಣಿಯನ್ನು ಅರಿತು
ಅನುಷ್ಠಾನಕ್ಕೆ ತರುವುದರಿಂದ ಎಲ್ಲರಿಗೂ ಒಳಿತಾಗುತ್ತದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ
ಪಂಚಾಂಗ : ಶನಿವಾರ, 29.08.2020
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ಬೆ.03.49 / ಚಂದ್ರ ಅಸ್ತ ರಾ.03.28
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಏಕಾದಶಿ, (ಬೆ.08.18) / ನಕ್ಷತ್ರ: ಪೂರ್ವಾಷಾಢ (ಮ.01.03) / ಯೋಗ: ಆಯುಷ್ಮಾನ್ (ಮ.02.51) / ಕರಣ: ಭದ್ರೆ-ಭವ (ಬೆ.08.18-ರಾ.08.17) / ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 13

# ಮೇಷ: ನಿಮ್ಮದು ಚಂಚಲ ಮನಸ್ಸು, ಅಜೀರ್ಣ ವ್ಯಾಧಿ, ಜ್ವರದ ಬಾಧೆ ನಿಮ್ಮನ್ನು ಕಾಡಬಹುದು ಎಚ್ಚರಿಕೆಯಿಂದಿರಿ, ಶುಭ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ, ಮನೆಯಲ್ಲಿ ದೇವತಾ ಕಾರ್ಯಗಳು ಜರುಗುವುವು

# ವೃಷಭ: ದುಷ್ಟರಿಂದ ಕೆಟ್ಟ ಕೆಲಸಕ್ಕೆ ಬೋಧನೆ ಆಗಲಿದೆ. ಖರ್ಚು ಹೆಚ್ಚುವುದು, ದಾಂಪತ್ಯದಲ್ಲಿ ನಿರಾಸೆ ಉಂಂಟಾಗಲಿದೆ, ದುಷ್ಟರ ಸಹವಾಸ ದಿಂದ ದೂರವಿರುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ

# ಮಿಥುನ: ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವಿರಿ. ಚಿಂತೆ ನಿಮ್ಮನ್ನು ಕಾಡಲಿದೆ, ಬರಹಗಾರರು, ಮುದ್ರಕರು, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ, ಗೌರವ, ಕೀರ್ತಿ ಲಭಿಸಲಿದೆ, ಕೋರ್ಟ್ ವ್ಯವಹಾರದಲ್ಲಿ ಜಯ ಸಾಧಿಸುವಿರಿ

# ಕಟಕ: ಸ್ನೇಹಿತರ ಜೊತೆ ಎಚ್ಚರಿಕೆಯಿಂದ ಇರಿ, ಮಗನೊಡನೆ ಜಗಳ ಸಂಭವಿಸಬಹುದು, ಧೈರ್ಯವಿದ್ದರೂ ಹಣದ ಕೊರತೆ ಎದುರಿಸುವ ಸಂದರ್ಭಗಳು ಎದುರಾಗಲಿವೆ, ಸರ್ಕಾರಿ ಕೆಲಸದಲ್ಲಿ ಜಯ ಸಿಗಲಿದೆ

# ಸಿಂಹ: ದಾಂಪತ್ಯ ಜೀವನ ಸುಖಮಯವಾಗಿರುವುದು, ಮನೆಯಲ್ಲಿ ಅಶಾಂತಿ ವಾತಾವರಣ ಮೂಡುವುದು, ಬಂಧುಗಳ ಭೇಟಿ ಯಿಂದ ಕಲಹ ಉಂಟಾಗಲಿದೆ, ಕೆಲಸ-ಕಾರ್ಯ ಗಳನ್ನು ಒತ್ತಡದಿಂದ ಮಾಡ ಬೇಕಾದ ಪರಿಸ್ಥಿತಿ ಬರಲಿದೆ

# ಕನ್ಯಾ: ಅಪಘಾತವಾಗುವ ಸಂಭವವಿದೆ. ಎಚ್ಚರಿಕೆಯಿಂದಿರಿ, ಮುಖ್ಯ ವಿಷಯ ಗಳಲ್ಲಿ ಪ್ರಗತಿ ಸಾಧಿಸುವಿರಿ,  ಮಕ್ಕಳ ಆರೋಗ್ಯ ದಲ್ಲಿ ಏರುಪೇರಾಗಲಿದೆ, ಖರ್ಚು ಹೆಚ್ಚುವುದು, ಕೆಲವರಿಗೆ ಆಭರಣದಿಂದ ಲಾಭವಿದೆ

# ತುಲಾ: ಅವಿವಾಹಿತರಿಗೆ ವಿವಾಹದಿಂದ ಆನಂದ ಉಂಟಾಗುವುದು, ಉನ್ನತ ಅಧಿಕಾರಿಗಳಿಂದ ತೊಂದರೆಯಾಗುವ ಸೂಚನೆಗಳಿವೆ, ದೂರದ ಬಂಧುಗಳನ್ನು ಭೇಟಿ ಮಾಡು ವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ

# ವೃಶ್ಚಿಕ: ನಿಮ್ಮ ಆರೋಗ್ಯದ ಕಡೆ ಗಮನವಿರಲಿ, ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ, ಅವಿವಾಹಿತರಿಗೆ ವಿವಾಹ ಯೋಗವಿದೆ, ಹೆಂಡತಿ ಜತೆ ಜಗಳ ಸಂಭವಿಸ ಬಹುದು, ಎಚ್ಚರಿಕೆಯಿಂದಿರುವುದು ಒಳಿತು

# ಧನುಸ್ಸು: ನ್ಯಾಯಾಲಯದಿಂದ ತೊಂದರೆಯಾಗಲಿದೆ, ಪತ್ನಿ ಹಾಗೂ ಮಕ್ಕಳು ಅನಾರೋಗ್ಯ ದಿಂದ ನೆಮ್ಮದಿ, ಕಳೆದುಕೊಳ್ಳುವ ಸೂಚನೆಗಳಿವೆ, ಹೃದಯದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ, ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ, ಹೆಂಡತಿ-ಮಕ್ಕಳ ಆರೋಗ್ಯದ ಕಡೆ ಗಮನವಿ ರಲಿ, ನಿಮ್ಮ ಆರೋಗ್ಯ ಉತ್ತಮವಾಗಿರುವುದು

# ಮಕರ: ಪ್ರೇಮಿಗಳಿಗೆ ಅವಮಾನವಾಗುವ ಸಂಭವವಿದೆ, ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ, ಗುರು ದೈವ ಭಕ್ತಿ ಮತ್ತು ಆರಾಧನೆಯಿಂದ ನಿಮಗೆ ಶುಭವಾಗುವುದು

# ಕುಂಭ: ಸರ್ಕಾರಿ ಕೆಲಸಗಾರರಿಗೆ ತೊಂದರೆ, ಅತಿಯಾದ ಕೋಪ ದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ, ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ

# ಮೀನ: ಶತ್ರುಗಳು ದೂರ ಸರಿಯುವರು, ಅಧಿಕಾರಿಗಳಿಂದ ಅತೃಪ್ತಿ ಉಂಟಾಗಲಿದೆ, ಹೆಂಡತಿ ಮನೆಯ ವರ ಕೆಲಸಗಳನ್ನು ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ

Facebook Comments

Sri Raghav

Admin