ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-11-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಲ್ಲಿನಿಂದ ಹೊಡೆದ ಗಾಯ ಸ್ವಲ್ಪ ದಿನಗಳಲ್ಲಿ ಹೋಗಬಹುದು. ಆದರೆ, ಮನುಷ್ಯನು ಮಾತಲ್ಲಿ ಹೊಡೆದ ಗಾಯ ಜೀವನ ಇರುವವರೆಗೆ ಹೋಗದು.

#ಪಂಚಾಂಗ : 29-11-2021, ಸೋಮವಾರ
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಕೃಷ್ಣ ಪಕ್ಷ
ತಿಥಿ: ದಶಮಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಅನೂರಾಧ

#ಸೂರ್ಯೋದಯ ಬೆ.06.25 / ಸೂರ್ಯಾಸ್ತ 05.51
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

#ಇಂದಿನ ಭವಿಷ್ಯ
ಮೇಷ: ಬರುವ ಜವಾಬ್ದಾರಿಗಳನ್ನು ನಿರ್ವಹಿಸು ವುದು ಸವಾಲಾಗಿ ಪರಿಣಮಿಸಬಹುದು.
ವೃಷಭ: ನಿಮ್ಮ ಮಾತು ಹಾಗೂ ಸೋದರ ಸಂಬಂಗಳೇ ನಿಮಗೆ ಸಮಸ್ಯೆಯಾಗಬಹುದು.
ಮಿಥುನ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ.

ಕಟಕ: ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ. ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ.
ಸಿಂಹ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದಕ್ಕೆ ಹೆಜ್ಜೆ ಇಡಿ.
ಕನ್ಯಾ: ಅಂದುಕೊಳ್ಳದ ರೀತಿ ಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ನಾನಾ ಬಗೆಯ ಚಿಂತೆ- ಬೇಸರ, ಅನಾರೋಗ್ಯ ಕಾಡುತ್ತದೆ.

ತುಲಾ: ಪೌರೋಹಿತ್ಯ- ಜ್ಯೋತಿಷ್ಯ ವೃತ್ತಿಯಲ್ಲಿರುವವರಿಗೆ ಹಣದ ಹರಿವು ಉತ್ತಮ ವಾಗಿರುತ್ತದೆ. ಉದ್ಯೋಗ ಬದಲಾವಣೆಗೆ ಅವಕಾಶಗಳಿವೆ.
ವೃಶ್ಚಿಕ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆ ಆಗಲೇಬೇಕಿದೆ. ಯಾವುದೇ ಕೆಲಸ ವನ್ನು ಕೈಗೆತ್ತಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಿ.
ಧನುಸ್ಸು: ಹಣ ಹೇಗೆ ವಿನಿಯೋಗವಾಗಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.

ಮಕರ: ನಿಮ್ಮದಲ್ಲದ ವಿಷಯಗಳಿಗೆ ತಲೆ ಹಾಕದಿರಿ. ನೆಮ್ಮದಿ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಕುಂಭ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ ಬೇಕಾಗುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ.
ಮೀನ: ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರವಿರಿ.

Facebook Comments

Sri Raghav

Admin