ಇಂದಿನ ಪಂಚಾಗ ಮತ್ತು ರಾಶಿ ಭವಿಷ್ಯ (30-08-2020, ಭಾನುವಾರ )

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ  : ಪ್ರೀತಿ, ದಯೆಗಳು ಹೃದಯದಲ್ಲಿದ್ದರಷ್ಟೇ ಸಾಲದು, ಅವು ಕ್ರಿಯಾತ್ಮಕವಾಗಿರಬೇಕು. ದುಃಖಿತರಿಗೆ ಹಾಗೂ ನೊಂದವರಿಗೆ ನೆರವಾಗಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ, 30.08.2020
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಸಂ.04.40 / ಚಂದ್ರ ಅಸ್ತ ರಾ.04.22
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ /
ತಿಥಿ: ತ್ರಯೋದಶಿ (ಬೆ.08.22) / ನಕ್ಷತ್ರ: ಉತ್ತರಾಷಾಢ (ಮ.01.52) / ಯೋಗ: ಸೌಭಾಗ್ಯ (ಮ.01.57) / ಕರಣ: ಬಾಲವ-ಕೌಲವ (ಬೆ.08.22-ರಾ.08.33) / ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 14

ಮೇಷ: ನೀವು ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ ಸಾಸುವಿರಿ. ಕೀರ್ತಿ, ಗೌರವ ಲಭಿಸುವುದು, ಮಗನೊಡನೆ ಜಗಳ ಸಂಭವಿಸಬಹುದು, ಧೈರ್ಯವಿದ್ದರೂ ಹಣದ ಕೊರತೆ ಎದುರಿಸುವ ಸಂದರ್ಭಗಳು ಎದುರಾಗಲಿವೆ, ಸರ್ಕಾರಿ ಕೆಲಸದಲ್ಲಿ ಜಯ ಸಿಗಲಿದೆ

# ವೃಷಭ: ಪಾಲುಗಾರಿಕೆಯಲ್ಲಿ ಎಚ್ಚರಿಕೆಯಿಂದಿರಿ, ಅಧಿಕಾರಿಗಳಿಂದ ಅತೃಪ್ತಿ ಉಂಟಾಗಲಿದೆ, ಹೆಂಡತಿ ಮನೆಯ ವರ ಕೆಲಸಗಳನ್ನು ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ

# ಮಿಥುನ: ಶುಭವಾರ್ತೆಯನ್ನು ಕೇಳುವಿರಿ, ಮನೆಯಲ್ಲಿ ಅಶಾಂತಿ ವಾತಾವರಣ ಮೂಡುವುದು, ಬಂಧುಗಳ ಭೇಟಿ ಯಿಂದ ಕಲಹ ಉಂಟಾಗಲಿದೆ, ಕೆಲಸ-ಕಾರ್ಯ ಗಳನ್ನು ಒತ್ತಡದಿಂದ ಮಾಡ ಬೇಕಾದ ಪರಿಸ್ಥಿತಿ ಬರಲಿದೆ

# ಕಟಕ: ದೂರ ದೇಶ ಪ್ರಯಾಣ ಮಾಡುವಿರಿ, ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ, ಗುರು ದೈವ ಭಕ್ತಿ ಮತ್ತು ಆರಾಧನೆಯಿಂದ ನಿಮಗೆ ಶುಭವಾಗುವುದು

# ಸಿಂಹ: ಸರ್ವ ಕಾರ್ಯ ಗಳಲ್ಲೂ ಜಯ ಲಭಿಸುವುದು, ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ, ಅವಿವಾಹಿತರಿಗೆ ವಿವಾಹ ಯೋಗವಿದೆ, ಹೆಂಡತಿ ಜತೆ ಜಗಳ ಸಂಭವಿಸ ಬಹುದು, ಎಚ್ಚರಿಕೆಯಿಂದಿರುವುದು ಒಳಿತು

# ಕನ್ಯಾ: ಪಿತ್ರಾರ್ಜಿತ ಆಸ್ತಿ ಕೈ ಸೇರುವ ಯೋಗವಿದೆ, ಅತಿಯಾದ ಕೋಪ ದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ, ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ

# ತುಲಾ: ಹೊಸ ಒಪ್ಪಂದ ಗಳಿಂದ ಅನುಕೂಲವಾಗುತ್ತದೆ, ಪತ್ನಿ ಹಾಗೂ ಮಕ್ಕಳು ಅನಾರೋಗ್ಯ ದಿಂದ ನೆಮ್ಮದಿ, ಕಳೆದುಕೊಳ್ಳುವ ಸೂಚನೆಗಳಿವೆ, ಹೃದಯದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ, ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ, ಹೆಂಡತಿ-ಮಕ್ಕಳ ಆರೋಗ್ಯದ ಕಡೆ ಗಮನವಿ ರಲಿ, ನಿಮ್ಮ ಆರೋಗ್ಯ ಉತ್ತಮವಾಗಿರುವುದು

# ವೃಶ್ಚಿಕ: ಕೆಲವರಿಗೆ ಉದ್ಯೋಗ ದಲ್ಲಿ ಬಡ್ತಿ ದೊರೆಯಲಿದೆ, ಅಜೀರ್ಣ ವ್ಯಾಧಿ, ಜ್ವರದ ಬಾಧೆ ನಿಮ್ಮನ್ನು ಕಾಡಬಹುದು ಎಚ್ಚರಿಕೆಯಿಂದಿರಿ, ಶುಭ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ, ಮನೆಯಲ್ಲಿ ದೇವತಾ ಕಾರ್ಯಗಳು ಜರುಗುವುವು

# ಧನುಸ್ಸು: ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಿರಿ, ದಾಂಪತ್ಯದಲ್ಲಿ ನಿರಾಸೆ ಉಂಂಟಾಗಲಿದೆ, ದುಷ್ಟರ ಸಹವಾಸ ದಿಂದ ದೂರವಿರುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ

# ಮಕರ: ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ, ಬರಹಗಾರರು, ಮುದ್ರಕರು, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ, ಗೌರವ, ಕೀರ್ತಿ ಲಭಿಸಲಿದೆ, ಕೋರ್ಟ್ ವ್ಯವಹಾರದಲ್ಲಿ ಜಯ ಸಾಧಿಸುವಿರಿ

# ಕುಂಭ: ಮಂಗಳ ಕಾರ್ಯಗಳು ನಡೆಯುತ್ತವೆ, ಮುಖ್ಯ ವಿಷಯ ಗಳಲ್ಲಿ ಪ್ರಗತಿ ಸಾಧಿಸುವಿರಿ,  ಮಕ್ಕಳ ಆರೋಗ್ಯ ದಲ್ಲಿ ಏರುಪೇರಾಗಲಿದೆ, ಖರ್ಚು ಹೆಚ್ಚುವುದು, ಕೆಲವರಿಗೆ ಆಭರಣದಿಂದ ಲಾಭವಿದೆ

# ಮೀನ: ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ, ಹಲವಾರು ಸಾಧನೆಗಳನ್ನು ಮಾಡುವಿರಿ. ಉನ್ನತ ಅಧಿಕಾರಿಗಳಿಂದ ತೊಂದರೆಯಾಗುವ ಸೂಚನೆಗಳಿವೆ, ದೂರದ ಬಂಧುಗಳನ್ನು ಭೇಟಿ ಮಾಡು ವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ

Facebook Comments

Sri Raghav

Admin