ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (30-09-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ಮನುಷ್ಯ ತನ್ನ ಕರ್ಮಫಲವನ್ನು ತಾನೇ ಅನುಭವಿಸಬೇಕು. ಅವನು ಮಾಡಿದ ಕರ್ಮಫಲವು ಆತನ ಬೆನ್ನನ್ನೇ ಹತ್ತುತ್ತದೆ. ಆದ್ದರಿಂದ ಮನುಷ್ಯ ಧರ್ಮಮಾರ್ಗದಲ್ಲಿ ನಡೆದು ತ್ಯಾಗ, ಸೇವೆ ಮುಂತಾದ ಸತ್ಕಾರ್ಯಗಳನ್ನು ಮಾಡಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

ಪಂಚಾಂಗ : ಬುಧವಾರ, 30.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.10
ಚಂದ್ರ ಉದಯ ಬೆ.05.29 / ಚಂದ್ರ ಅಸ್ತ ರಾ.05.37
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ (ರಾ.12.26) / ನಕ್ಷತ್ರ: ಪೂರ್ವಾಭಾದ್ರ (ರಾ.03.15) /ಯೋಗ: ಗಂಡ (ರಾ.07.49) / ಕರಣ: ಗರಜೆ-ವಣಿಜ್ (ಬೆ.11.28-ರಾ.12.26) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ತೇದಿ: 14

ಮೇಷ: ಸಹೋದ್ಯೋಗಿಗಳು, ಸಂಬಂಕ ರೊಂದಿಗೆ ಆನಂದದಿಂದ ಕಾಲ ಕಳೆಯುವಿರಿ
ವೃಷಭ: ಗುರಿ ತಲುಪುವುದೇ ಮುಖ್ಯವಲ್ಲ, ಹೇಗೆ ತಲುಪುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ
ಮಿಥುನ: ನಿಮ್ಮ ಪ್ರತಿಭೆಗೆ ತಕ್ಕ ಅವಕಾಶ ಸಿಗುವುದು
ಕಟಕ: ಧನಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಿ
ಸಿಂಹ: ಜಾಸ್ತಿ ಯೋಚಿಸಲು ತೊಡಗಿದರೆ ಎಲ್ಲವೂ ಗೋಜಲಾಗಿ ಕಾಣಬಹುದು

ಕನ್ಯಾ: ದಾರಿ ತಪ್ಪಿಸುವವರ ಸಲಹೆ ಗಿಂತ ಸ್ವಂತ ನಿರ್ಧಾರವೇ ಮುಖ್ಯ
ತುಲಾ: ಆತುರದ ನಿರ್ಧಾರ ದಿಂದ ಏನೂ ಮಾಡಲಾಗದು
ವೃಶ್ಚಿಕ: ಪ್ರೇಮಿಗಳ ನಡುವಿನ ವೈಮನಸ್ಸು ಮರೆಯಾಗಲಿದೆ
ಧನುಸ್ಸು: ಅತ್ಯಂತ ನೆಮ್ಮದಿಯ ದಿನ

ಮಕರ: ಇಂದು ಶತ್ರುಗಳ ಕಾಟ ಇರುವುದಿಲ್ಲ
ಕುಂಭ: ಸಾಕಷ್ಟು ಸಹನೆ ಇರುತ್ತದೆ
ಮೀನ: ಇಚ್ಛಿಸಿದ ಕಾರ್ಯ ಸಾಸದೆ ಬಿಡುವುದಿಲ್ಲ

Facebook Comments

Sri Raghav

Admin