ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (30-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಾಪಂಚಿಕ ಸಂಪತ್ತಿನ ದಾಹ ಹೆಚ್ಚಿದಷ್ಟೂ ಮನುಷ್ಯ ಕ್ರೂರಿ ಆಗುತ್ತಾನೆ. ಪಾರಮಾರ್ಥಿಕ ಸಂಪತ್ತು ಹೆಚ್ಚಿದಂತೆ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 30.11.2020
ಸೂರ್ಯ ಉದಯ ಬೆ.06.24 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಸಂ.04.32 / ಚಂದ್ರ ಅಸ್ತ ರಾ.05.21
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ
ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ (ಮ.03.00) / ನಕ್ಷತ್ರ: ರೋಹಿಣಿ (ದಿನಪೂರ್ತಿ) / ಯೋಗ: ಶಿವ (ಬೆ.10.45) / ಕರಣ: ಭವ-ಬಾಲವ (ಮ.03.00-ರಾ.03.59) / ಮಳೆ ನಕ್ಷತ್ರ: ಅನೂರಾಧ / ಮಾಸ: ವೃಶ್ಚಿಕ, ತೇದಿ: 14

# ರಾಶಿಭವಿಷ್ಯ :

ಮೇಷ: ವಿವಾಹಾಪೇಕ್ಷಿಗಳಿಗೆ ಒಳ್ಳೆಯ ಸಂಬಂಧ ಗಳು ಕೂಡಿ ಬರಲಿವೆ. ಮನಸ್ಸಿಗೆ ಶಾಂತಿ ಸಿಗಲಿದೆ
ವೃಷಭ: ಆರೋಗ್ಯದಲ್ಲಿ ಹಿಂದಿಗಿಂತ ಚೇತರಿಕೆ, ಉತ್ಸಾಹ ಇರುತ್ತದೆ. ಕಿರು ಸಂಚಾರದಿಂದ ಕಾರ್ಯಸಿದ್ಧಿ
ಮಿಥುನ: ಗುರು-ಹಿರಿಯರ ಆಶೀರ್ವಾದ ಪಡೆಯಿರಿ
ಕಟಕ: ಸ್ವಯಂ ಉದ್ಯೋಗಕ್ಕೆ ಅವಕಾಶಗಳು ಒದಗಿಬರಲಿವೆ
ಸಿಂಹ: ಅರ್ಹ ಫಲಾನುಭವಿ ಗಳಿಗೆ ಸರ್ಕಾರದ ವತಿಯಿಂದ ಹಣದ ಸಹಾಯ ಸಿಗಲಿದೆ
ಕನ್ಯಾ: ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಪ್ರಯತ್ನವಿರಲಿ

ತುಲಾ: ಮನೆಯ ಹೆಂಗಸರಿಗೆ ಅನಾವಶ್ಯಕವಾಗಿ ಆತಂಕ, ದುಗುಡ ಕಾಡಲಿದೆ
ವೃಶ್ಚಿಕ: ಆರ್ಥಿಕವಾಗಿ ಅತೃಪ್ತಿಯ ಮನೋಭಾವ ತೋರಿಬರುತ್ತದೆ
ಧನುಸ್ಸು: ಕೃಷಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ, ನೆಮ್ಮದಿ ಇರುತ್ತದೆ. ಧನ ಸಂಗ್ರಹವಾಗಲಿದೆ
ಮಕರ: ಉದ್ಯೋಗಸ್ಥರು ಮೇಲಕಾರಿಗಳ ಕೃಪೆಗೆ ಪಾತ್ರರಾದಾರು. ವಾಹನ ಖರೀದಿಗೆ ಸಕಾಲ
ಕುಂಭ: ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸ ಬೇಕಾಗುತ್ತದೆ. ಅಪೇಕ್ಷಿತ ಕಾರ್ಯಗಳಲ್ಲಿ ವಿಳಂಬ
ಮೀನ: ಕಚೇರಿಯಲ್ಲಿ ಕಾರ್ಯ ಒತ್ತಡಗಳಿರುತ್ತವೆ

Facebook Comments

Sri Raghav

Admin