ಇಂದಿನ ಪಂಚಾಗ ಮತ್ತು ರಾಶಿಫಲ (12-09-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಾನು, ನನ್ನದು ಎಂಬ ಅಭಿಮಾನ ದಿಂದುಂಟಾದ ಕಾಮ, ದುರಾಸೆ ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ, ದುಃಖವಾಗಲೀ ಸಮವೆನಿಸುತ್ತದೆ.  –ಭಾಗವತ

# ಪಂಚಾಂಗ : ಗುರುವಾರ, 12.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.23
ಚಂದ್ರ ಉದಯ ಸಂ.05.27/ ಚಂದ್ರ ಅಸ್ತ ರಾ.05.21
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ ದಿನಪೂರ್ತಿ)
ನಕ್ಷತ್ರ: ಧನಿಷ್ಠ (ಸಾ.04.58) ಯೋಗ: ಸೌಭಾಗ್ಯ (ರಾ.07.33) ಕರಣ: ಗರಜೆ (ಸಾ.06.21)
ಮಳೆ ನಕ್ಷತ್ರ: ಪೂರ್ವಫಲ್ಗುಣಿ ಮಾಸ: ಸಿಂಹ ತೇದಿ: 27

# ರಾಶಿ ಭವಿಷ್ಯ
ಮೇಷ: ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಉತ್ತಮ ಅವಕಾಶಗಳು ಸಿಗಲಿವೆ
ವೃಷಭ: ವ್ಯವಹಾರದಲ್ಲಿ ಬಂಡವಾಳ ಹೂಡಿಕೆಗೆ ಸಕಾಲ
ಮಿಥುನ: ದಾಯಾದಿಗಳ ಕಿರುಕುಳ ಅತಿರೇಕವಾಗಲಿದೆ
ಕಟಕ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶದಿಂದ ಸಂತಸ
ಸಿಂಹ: ಅನಿರೀಕ್ಷಿತ ಬೆಳವಣಿಗೆ ಯೊಂದರಲ್ಲಿ ಅಸಾಧ್ಯವಾದ ಸ್ನೇಹ ಕುದುರುವುದು
ಕನ್ಯಾ: ನೆನೆಗುದಿಗೆ ಬಿದ್ದಿದ್ದ ಕೆಲಸ- ಕಾರ್ಯಗಳು ಮುಗಿಯಲಿವೆ
ತುಲಾ: ದೇಹಾರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ
ವೃಶ್ಚಿಕ: ಸಾಂಸಾರಿಕವಾಗಿ ಹೆಂಡತಿಯ ಸಹಕಾರ ಉತ್ತಮವಿರುತ್ತದೆ
ಧನುಸ್ಸು: ಕೆಲವೊಮ್ಮೆ ಧನಾಗಮನದಿಂದ ಕಾರ್ಯಸಿದ್ಧಿ
ಮಕರ: ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ
ಕುಂಭ: ಉದ್ಯೋಗಿಗಳಿಗೆ ಆಗಾಗ ಒತ್ತಡ ಹೆಚ್ಚಲಿವೆ
ಮೀನ: ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಒಪ್ಪಿಕೊಳ್ಳುವುದು ಅಗತ್ಯ. ವಾಹನ ಖರೀದಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments