ಇಂದಿನ ಪಂಚಾಗ ಮತ್ತು ರಾಶಿಫಲ (14-09-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪರಮೇಶ್ವರನನ್ನು ಆಶ್ರಯಿಸಿಯೂ ವಾಸುಕಿ ಗಾಳಿಯನ್ನೇ ಆಹಾರವನ್ನಾಗಿ ಹೊಂದಿದ್ದಾನೆ. ಮಹಾತ್ಮರ ಸ್ಥಾನವನ್ನು ಪಡೆದರೂ ಸಹ ತನ್ನ ತನ್ನ ಅದೃಷ್ಟಕ್ಕನುಸಾರವಾದ ಫಲವೇ ದೊರಕುವುದು.  -ಸುಭಾಷಿತಸುಧಾನಿಧಿ

# ಪಂಚಾಂಗ : ಶನಿವಾರ, 14.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.22
ಚಂದ್ರ ಉದಯ ಸಂ.06.43/ ಚಂದ್ರ ಅಸ್ತ ರಾ.06.53
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ
(ಬೆ.10.03) ನಕ್ಷತ್ರ: ಪೂರ್ವಾಭಾದ್ರ (ರಾ.10.55) ಯೋಗ: ಶೂಲ (ರಾ.09.25) ಕರಣ: ಭವ-ಬಾಲವ
(ಬೆ.10.03-ರಾ.11.15) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಸಿಂಹ ತೇದಿ: 29

# ರಾಶಿ ಭವಿಷ್ಯ
ಮೇಷ: ಕೆಲವು ರೀತಿಯಲ್ಲಿ ಅಡೆತಡೆಗಳಿದ್ದರೂ ಕಾರ್ಯಸಾಧನೆಯಾಗಲಿದೆ. ಚಿಂತಿಸದಿರಿ
ವೃಷಭ: ದಾಂಪತ್ಯದ ಸಮಸ್ಯೆಗಳನ್ನು ವೈಯಕ್ತಿಕ ವಾಗಿ ಹೊಂದಾಣಿಕೆಯಿಂದ ಸರಿಪಡಿಸಿಕೊಳ್ಳಿ
ಮಿಥುನ: ಮಡದಿ-ಮಕ್ಕಳ ಮೇಲೆ ವಿನಾಕಾರಣ ಕೋಪಗೊಳ್ಳದಿರಿ
ಕಟಕ: ಸಾಂಸಾರಿಕವಾಗಿ ಕುಟುಂಬ ದವರ ಸಹಾಯಕ್ಕಾಗಿ ಓಡಾಟ
ಸಿಂಹ: ನ್ಯಾಯಾಲಯದ ಕೆಲಸ-ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ
ಕನ್ಯಾ: ವೈಯಕ್ತಿಕ ಖರ್ಚು- ವೆಚ್ಚಗಳಲ್ಲಿ ಮಿತಿ ಇರಲಿ
ತುಲಾ: ಕೌಟುಂಬಿಕ ಕೆಲಸ-ಕಾರ್ಯಗಳಲ್ಲಿ ಒತ್ತಡ
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಆಸಕ್ತಿ
ಧನುಸ್ಸು: ದಾಂಪತ್ಯ ಜೀವನದಲ್ಲಿ ಸಮಾಧಾನ ಸಿಗಲಿದೆ
ಮಕರ: ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ
ಕುಂಭ: ರಾಜಕೀಯ ವರ್ಗದವರಿಗೆ ಮುನ್ನಡೆ
ಮೀನ: ಆಗಾಗ ಆರ್ಥಿಕ ಸ್ಥಿತಿಯಲ್ಲಿ ಕಿರಿಕಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments