ಇಂದಿನ ಪಂಚಾಗ ಮತ್ತು ರಾಶಿಫಲ (16-09-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಭಿಕ್ಷಾನ್ನವೇ ಆಹಾರ. ಆ ನೀರಸವಾದ ಆಹಾರವೂ ಒಂದು ಹೊತ್ತು. ಭೂಮಿಯೇ ಹಾಸಿಗೆ. ತನ್ನ ದೇಹದ ಅಂಗಾಂಗಗಳೇ ಸೇವಕರು. ನೂರು ಚೂರುಗಳಿಂದ ಕೂಡಿದ ಹಳೆಯ ಕಂತೆಯೇ ಬಟ್ಟೆ. ಅಯ್ಯೋ! ಹಾಗಾದರೂ ಮನಸ್ಸು ವಿಷಯಸುಖಗಳ ಆಸೆಯನ್ನು ಬಿಡುವುದಿಲ್ಲ.  -ವೈರಾಗ್ಯಶತಕ

# ಪಂಚಾಂಗ : ಸೋಮವಾರ, 16.09.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.20
ಚಂದ್ರ ಉದಯ ರಾ.07.57 / ಚಂದ್ರ ಅಸ್ತ ಬೆ.07.39
ವಿಕಾರಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ
(ಮ.02.26) ನಕ್ಷತ್ರ: ರೇವತಿ (ರಾ.04.22) ಯೋಗ: ವೃದ್ಧಿ (ರಾ.10.53) ಕರಣ: ಗರಜೆ-ವಣಿಜ್
(ಮ.02.36-ರಾ.03.36) ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಸಿಂಹ ತೇದಿ: 31

# ರಾಶಿ ಭವಿಷ್ಯ
ಮೇಷ: ನಿಮಗೆ ಬೇಡವಾದ ಘಟನೆಗಳು ಜರುಗುವುದ ರಿಂದ ಮಾನಸಿಕ ತಲ್ಲಣ ಉಂಟಾಗುವುದು
ವೃಷಭ: ಕಾರ್ಯ ಒತ್ತಡಗಳಿಂದ ದೇಹಾಯಾಸ
ಮಿಥುನ: ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ ಇರುತ್ತದೆ. ದೂರ ಪ್ರಯಾಣ ಮಾಡದಿರಿ
ಕಟಕ: ವ್ಯಾಪಾರ-ವ್ಯವಹಾರ ಗಳಲ್ಲಿ ಅಧಿಕ ಲಾಭವಿರುತ್ತದೆ
ಸಿಂಹ: ಅವಿವಾಹಿತರಿಗೆ ವೈವಾ ಹಿಕ ಪ್ರಸ್ತಾವಗಳು ಬರಲಿವೆ
ಕನ್ಯಾ: ಕಿರಿಕಿರಿ ಇದ್ದರೂ ಸುಧಾರಿಸಿ ಕೊಂಡು ಹೋಗುವುದು ಒಳಿತು
ತುಲಾ: ವಿದ್ಯಾರ್ಥಿಗಳಿಗೆ ಅಧಿಕ ಪ್ರಯತ್ನಬಲ ಬೇಕು
ವೃಶ್ಚಿಕ: ಆರ್ಥಿಕವಾಗಿ ಆಗಾಗ ಹಿನ್ನಡೆಯಾಗುವ ಸಾಧ್ಯತೆಯಿದೆ
ಧನುಸ್ಸು: ವೃತ್ತಿ ರಂಗದಲ್ಲಿ ಮನಸ್ಸಿಗೆ ಸಮಾಧಾನ
ಮಕರ: ಭೂ ಖರೀದಿಗೆ ನಿರೀಕ್ಷಿತ ಅಭಿವೃದ್ಧಿ ಇದ್ದರೂ ಹೆಚ್ಚಿನ ಜಾಗ್ರತೆ ಬೇಕು
ಕುಂಭ: ಮಿತ್ರರ ಸಲಹೆಗಳು ಉಪಯುಕ್ತವಾಗಲಿವೆ
ಮೀನ: ಶೀತ, ಕಫ ಬಾಧೆಗಳಿಂದ ಅನಾರೋಗ್ಯ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments