ಇಂದಿನ ರಾಶಿ ಭವಿಷ್ಯ (31-08-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುಖ-ಸಂಪದ ನೀ ಗೈದ ಕರ್ಮದ ಫಲವಾದರೆ ದುಃಖ-ದುಮ್ಮಾನವೂ ನಿನ್ನ ಕರ್ಮದ ಫಲವಲ್ಲವೇ..? ನಲಿವಿರಲಿ ಭಗವಂತನ ನೆನೆಯದೇ ಬೀಗುವ ಮನುಜನೇ ನೋವಿರಲಿ ಭಗವಂತನ ನೀನಲಿಯುವುದೇಕೆ ? -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 31.08.2020
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಸಂ.05.28 / ಚಂದ್ರ ಅಸ್ತ ರಾ.05.15
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ:ತ್ರಯೋದಶಿ (ಬೆ.08.49) / ನಕ್ಷತ್ರ: ಶ್ರವಣ (ಮ.03.04)
ಯೋಗ: ಶೋಭನ (ಮ.01.22) / ಕರಣ: ತೈತಿಲ-ಗರಜೆ (ಬೆ.08.49-ರಾ.09.11)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 15

# ರಾಶಿ ಭವಿಷ್ಯ
ಮೇಷ: ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವಿರಿ, ಮುಖ್ಯ ವಿಷಯ ಗಳಲ್ಲಿ ಪ್ರಗತಿ ಸಾಧಿಸುವಿರಿ,  ಮಕ್ಕಳ ಆರೋಗ್ಯ ದಲ್ಲಿ ಏರುಪೇರಾಗಲಿದೆ, ಖರ್ಚು ಹೆಚ್ಚುವುದು, ಕೆಲವರಿಗೆ ಆಭರಣದಿಂದ ಲಾಭವಿದೆ

ವೃಷಭ: ಮಿತ್ರರಿಂದ ತೊಂದರೆಯಾಗಲಿದೆ,ಉನ್ನತ ಅಧಿಕಾರಿಗಳಿಂದ ತೊಂದರೆಯಾಗುವ ಸೂಚನೆಗಳಿವೆ, ದೂರದ ಬಂಧುಗಳನ್ನು ಭೇಟಿ ಮಾಡು ವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ

ಮಿಥುನ: ಸಹೋದರಿಯರಿಂದ ಕಲಹವಾಗಬಹುದು, ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ, ಅವಿವಾಹಿತರಿಗೆ ವಿವಾಹ ಯೋಗವಿದೆ, ಹೆಂಡತಿ ಜತೆ ಜಗಳ ಸಂಭವಿಸ ಬಹುದು, ಎಚ್ಚರಿಕೆಯಿಂದಿರುವುದು ಒಳಿತು

ಕಟಕ: ಸಮಾಜ ಸೇವಕರಿಗೆ ಕೆಟ್ಟ ಹೆಸರು ಬರ ಬಹುದು. ಆರೋಗ್ಯ ವಿಷಮಿಸುತ್ತದೆ, ಅತಿಯಾದ ಕೋಪ ದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ, ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ

ಸಿಂಹ: ಗೃಹದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ,ಅಧಿಕಾರಿಗಳಿಂದ ಅತೃಪ್ತಿ ಉಂಟಾಗಲಿದೆ, ಹೆಂಡತಿ ಮನೆಯ ವರ ಕೆಲಸಗಳನ್ನು ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ

ಕನ್ಯಾ: ಬಂಧು-ಬಾಂಧವರಿಂದ ವಿರೋಧ ಎದುರಿಸಬೇಕಾಗುತ್ತದೆ, ಪತ್ನಿ ಹಾಗೂ ಮಕ್ಕಳು ಅನಾರೋಗ್ಯ ದಿಂದ ನೆಮ್ಮದಿ, ಕಳೆದುಕೊಳ್ಳುವ ಸೂಚನೆಗಳಿವೆ, ಹೃದಯದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ, ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ, ಹೆಂಡತಿ-ಮಕ್ಕಳ ಆರೋಗ್ಯದ ಕಡೆ ಗಮನವಿ ರಲಿ, ನಿಮ್ಮ ಆರೋಗ್ಯ ಉತ್ತಮವಾಗಿರುವುದು

ತುಲಾ : ಸ್ತ್ರೀಯರಿಂದ ನಿಮಗೆ ಗೌರವ ಪ್ರಾಪ್ತಿಯಾಗಬಹುದು, ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ, ಗುರು ದೈವ ಭಕ್ತಿ ಮತ್ತು ಆರಾಧನೆಯಿಂದ ನಿಮಗೆ ಶುಭವಾಗುವುದು

ವೃಶ್ಚಿಕ : ನಿಮ್ಮವರೇ ನಿಮ್ಮ ವಿರುದ್ಧ ಮಸಲತ್ತು ಮಾಡುವರು, ದಾಂಪತ್ಯದಲ್ಲಿ ನಿರಾಸೆ ಉಂಂಟಾಗಲಿದೆ, ದುಷ್ಟರ ಸಹವಾಸ ದಿಂದ ದೂರವಿರುವಿರಿ, ಹೆಂಡತಿ-ಮಕ್ಕಳು ಸಂಕಷ್ಟಕ್ಕೆ ಸಿಲುಕುವರು, ದೂರ ಪ್ರಯಾಣ ಮಾಡದಿರಿ

ಧನುಸ್ಸು: ನ್ಯಾಯಾಲಯದಲ್ಲಿ ಅಪಜಯವಾಗಬಹುದು, ಅಜೀರ್ಣ ವ್ಯಾಧಿ, ಜ್ವರದ ಬಾಧೆ ನಿಮ್ಮನ್ನು ಕಾಡಬಹುದು ಎಚ್ಚರಿಕೆಯಿಂದಿರಿ, ಶುಭ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ, ಮನೆಯಲ್ಲಿ ದೇವತಾ ಕಾರ್ಯಗಳು ಜರುಗುವುವು

ಮಕರ : ಪ್ರತಿಯೊಂದು ವ್ಯವಹಾರಗಳನ್ನು ತಾಳ್ಮೆ ಮತ್ತು ಸಮಾಧಾನದಿಂದ ಮಾಡಬೇಕು, ಮಗನೊಡನೆ ಜಗಳ ಸಂಭವಿಸಬಹುದು, ಧೈರ್ಯವಿದ್ದರೂ ಹಣದ ಕೊರತೆ ಎದುರಿಸುವ ಸಂದರ್ಭಗಳು ಎದುರಾಗಲಿವೆ, ಸರ್ಕಾರಿ ಕೆಲಸದಲ್ಲಿ ಜಯ ಸಿಗಲಿದೆ

ಕುಂಭ : ಸಾಲಗಾರರಿಂದ ಮುಕ್ತಿ ದೊರೆಯುತ್ತದೆ, ಮನೆಯಲ್ಲಿ ಅಶಾಂತಿ ವಾತಾವರಣ ಮೂಡುವುದು, ಬಂಧುಗಳ ಭೇಟಿ ಯಿಂದ ಕಲಹ ಉಂಟಾಗಲಿದೆ, ಕೆಲಸ-ಕಾರ್ಯ ಗಳನ್ನು ಒತ್ತಡದಿಂದ ಮಾಡ ಬೇಕಾದ ಪರಿಸ್ಥಿತಿ ಬರಲಿದೆ

ಮೀನ : ಆಗಾಗ್ಗೆ ಮಾನಸಿಕ ಕಿರಿಕಿರಿ ಇರುತ್ತದೆ. ಬರಹಗಾರರು, ಮುದ್ರಕರು, ಪ್ರಕಾಶಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ, ಗೌರವ, ಕೀರ್ತಿ ಲಭಿಸಲಿದೆ, ಕೋರ್ಟ್ ವ್ಯವಹಾರದಲ್ಲಿ ಜಯ ಸಾಧಿಸುವಿರಿ

 

Facebook Comments

Sri Raghav

Admin