ಇಂದಿನ ಪಂಚಾಗ ಮತ್ತು ರಾಶಿಫಲ (14-10-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪುಣ್ಯವಾದ ಕಾಡಿನಲ್ಲಿ ವಾಸ, ಜಿಂಕೆಗಳೊಡನೆ ಸಹವಾಸ, ಹಣ್ಣುಗಳಿಂದ ಪವಿತ್ರವಾದ ಬಾಳು, ಪ್ರತಿನಿತ್ಯವೂ ಕಲ್ಲುಗಳೇ ಹಾಸಿಗೆಗಳು, ಶಿವನಲ್ಲಿ ಭಕ್ತಿಯನ್ನಿಟ್ಟವರಿಗೆ ಮತ್ತು ಶಾಂತ ಹೃದಯರಿಗೆ ಕಾಡೂ, ಮನೆ ಎರಡೂ ಒಂದೇ.  -ವೈರಾಗ್ಯಶತಕ

# ಪಂಚಾಂಗ : ಸೋಮವಾರ 14.10.2019
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.02
ಚಂದ್ರ ಉದಯ ರಾ.06.35 / ಚಂದ್ರ ಅಸ್ತ ಬೆ.06.23
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ /
ತಿಥಿ: ಪ್ರತಿಪತ್ (ರಾ.04.21) ನಕ್ಷತ್ರ: ರೇವತಿ (ಬೆ.10.20) ಯೋಗ: ಹರ್ಷಣ (ರಾ.04.58) ಕರಣ: ಬಾಲವ-ಕೌಲವ
(ಮ.03.32-ರಾ.04.21) ಮಳೆ ನಕ್ಷತ್ರ: ಹಸ್ತ ಮಾಸ: ಕನ್ಯಾ ತೇದಿ: 28

# ರಾಶಿ ಭವಿಷ್ಯ
ಮೇಷ: ತಾಯಿ ಅಥವಾ ಕುಟುಂಬದ ಇತರೆ ಸದಸ್ಯರ ಆರೋಗ್ಯದ ಚಿಂತೆಯಾಗುವುದು
ವೃಷಭ: ಆಗಾಗ್ಗೆ ಕಲಹಗಳನ್ನು ಎದುರಿಸಬೇಕಾಗುತ್ತದೆ
ಮಿಥುನ: ಸಂಕಷ್ಟಗಳನ್ನು ಎದುರಿಸುವ ಕಲೆಗಾರಿಕೆ ಯನ್ನು ನಿಮಗೆ ಹೇಳಿಕೊಡಬೇಕಾಗಿಲ್ಲ
ಕಟಕ: ವಿಚಾರ ಮಾಡದೆ ಸಾಹಸ ಕಾರ್ಯಗಳಿಗೆ ಕೈ ಹಾಕುವುದು ಶುಭಕರವಲ್ಲ
ಸಿಂಹ: ಬಹುವಿಧ ಪ್ರತಿಭೆ ಅನಾವರಣಗೊಳ್ಳುವುದು
ಕನ್ಯಾ: ನಿಮ್ಮ ನಿರೀಕ್ಷೆಯಂತೆಯೇ ಕೆಲಸ-ಕಾರ್ಯಗಳು ನಡೆಯು ವುದರಿಂದ ಮನಸ್ಸಿಗೆ ಸಮಾಧಾನ
ತುಲಾ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ
ವೃಶ್ಚಿಕ: ಗುರುಗಳ ಆಶೀರ್ವಾದ ಪಡೆಯುವಿರಿ
ಧನುಸ್ಸು: ವಿದೇಶದಿಂದ ಬರುವ ಸುದ್ದಿ ಸಂತಸ ತರಲಿದೆ
ಮಕರ: ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ
ಕುಂಭ: ಗೆಳೆಯರು ನಿಮ್ಮ ಕಾರ್ಯವನ್ನು ಕೊಂಡಾಡುವರು
ಮೀನ: ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments