ಇಂದಿನ ಪಂಚಾಗ ಮತ್ತು ರಾಶಿಫಲ (18-10-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣವನ್ನು ಬೇಡತಕ್ಕವನು ದೈನ್ಯವನ್ನು ತೋರಿಸುತ್ತಾನೆ. ಹಣವು ದೊರಕಿದ ಮೇಲೆ ಗರ್ವವೂ ಅತೃಪ್ತಿಯೂ ಉಂಟಾಗುತ್ತವೆ. ಹಣವನ್ನು ಕಳೆದುಕೊಂಡ ಮೇಲೆ ಶೋಕಿಸುತ್ತಾನೆ ನಿಸ್ಪೃಹನಾದವನು ಸುಖಿಯಾಗಿ ಇರುತ್ತಾನೆ. –ರಾಮಾಯಣ

# ಪಂಚಾಂಗ : ಶುಕ್ರವಾರ, 18.10.2019
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.05.59
ಚಂದ್ರ ಉದಯ ಸ.8.40 / ಚಂದ್ರ ಅಸ್ತ ಬೆ.8.50
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ಚತುರ್ಥಿ (ಬೆ.07.29) ನಕ್ಷತ್ರ: ರೋಹಿಣಿ (ರಾ.4.59) ಯೋಗ: ವ್ಯತೀಯಾನ್ (ರಾತ್ರಿ 3.22)
ಕರಣ: ಬಾಲವ-ಕೌಲವ (ರಾತ್ರಿ ಬೆ.7.29 ರಾ. 7. 40) ಮಳೆ ನಕ್ಷತ್ರ : ಹಸ್ತ  ಮಾಸ: ತುಲಾ ತೇದಿ: 1

# ರಾಶಿ ಭವಿಷ್ಯ
ಮೇಷ: ರಾಜಕೀಯ ರಂಗದಲ್ಲಿ ಗೊಂದಲ ಕಾಡಲಿವೆ.
ವೃಷಭ: ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ
ಮಿಥುನ: ಮಾನಸಿಕ ಕ್ಷೋಬೆಗಳು ಬೆಂಬಿಡದೆ ಕಾಡುವುದು
ಕಟಕ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಕೆಲಸ ಸುಗಮವಾಗಿ ನೆರವೇರುವುದು
ಸಿಂಹ: ಉದ್ಯೋಗ ನಿಮಿತ್ತ ದೂರ ಪ್ರಯಾಣದಿಂದ ಆರೋಗ್ಯದಲ್ಲಿ ಕಿರಿಕಿರಿ
ಕನ್ಯಾ: ಹಿರಿಯರ ಪ್ರಶಂಸೆಗಳು ದೊರಕುವುದು
ತುಲಾ: ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ
ವೃಶ್ಚಿಕ: ಆರೋಗ್ಯದ ಕಡೆ ಗಮನ ಹರಿಸುವಿರಿ
ಧನುಸ್ಸು: ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ
ಮಕರ: ಆರ್ಥಿಕವಾಗಿ ಬಲಗೊಳ್ಳುವಿರಿ
ಕುಂಭ: ಕೌಟುಂಬಿಕ ಎಲ್ಲ ವಿಧಗಳಲ್ಲೂ ನೆಮ್ಮದಿ
ಮೀನ: ಸರ್ಕಾರಿ ನೌಕರರಿಗೆ ಬೆಂಬಿಡದ ಕೆಲಸ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments