ಇಂದಿನ ಪಂಚಾಗ ಮತ್ತು ರಾಶಿಫಲ (19-10-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರು ವಿಧಿವಶದಿಂದ ದುರ್ಬುದ್ಧಿಗಳಾಗಿ, ಎಲ್ಲಾ ಅಮಂಗಳಗಳನ್ನು ದೂರ ಮಾಡುವ ಭಗವಂತನಿಂದ ವಿಮುಖರಾಗಿ, ಕಾಮದಿಂದುಂಟಾಗುವ ಸುಖಲೇಶಮಾತ್ರಕ್ಕಾಗಿ ಲೋಭದಿಂದ ಕೂಡಿದ ಮನಸ್ಸುಳ್ಳವರಾಗಿರುವರೋ, ಅವರು ಯಾವಾಗಲೂ ಅಶುಭವನ್ನೇ ಮಾಡುತ್ತಾರೆ. ಅವರು ದೀನರು.

# ಪಂಚಾಂಗ : ಶನಿವಾರ , 19.10.2019
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.05.59
ಚಂದ್ರ ಉದಯ ರಾ.10.21 / ಚಂದ್ರ ಅಸ್ತ ಬೆ.10.38
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ಪಂಚಮಿ (ಬೆ.07.44) ನಕ್ಷತ್ರ: ಮೃಗಶಿರಾ (ಸಾ.05.52) ಯೋಗ: ಪರಿಘ (ರಾ.02.09)
ಕರಣ: ತೈತಿಲ-ಗರಜೆ (ಬೆ.07.44-ರಾ.07.41) ಮಳೆ ನಕ್ಷತ್ರ: ಹಸ್ತ ಮಾಸ: ತುಲಾ ತೇದಿ: 02

# ರಾಶಿ ಭವಿಷ್ಯ
ಮೇಷ: ವಿನಾಕಾರಣ ಬೇರೆಯವರ ತಪ್ಪಿಗೆ ಹೊಣೆಗಾರರಾಗುವ ಸಾಧ್ಯತೆ ಇದೆ
ವೃಷಭ: ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗಲಿದೆ
ಮಿಥುನ: ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ
ಕಟಕ: ಗಣ್ಯರ ಭೇಟಿಗಾಗಿ ಸಮಯ ಸಿಗಲಿದೆ
ಸಿಂಹ: ಶತ್ರುಗಳು ನಿಮ್ಮ ವಿಚಾರ ಧಾರೆಯನ್ನು ಗೌರವಿಸುವರು
ಕನ್ಯಾ: ಹಿರಿಯರ ಆರೋಗ್ಯ ಉತ್ತಮವಾಗಿರುವುದು
ತುಲಾ: ಬಾಕಿ ಇದ್ದ ಕೆಲಸಗಳನ್ನು ಪೂರ್ತಿಗೊಳಿಸುವಿರಿ
ವೃಶ್ಚಿಕ: ಖಾದ್ಯ ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ
ಧನುಸ್ಸು: ಶಾಪಿಂಗ್‍ನಲ್ಲಿ ಅಗತ್ಯ ವಸ್ತುಗಳನ್ನು ಮಕ್ಕಳಿಗಾಗಿ ಕೊಳ್ಳುವಿರಿ. ಶುಭಕರವಾದ ದಿನ
ಮಕರ: ಮಿತ್ರರಿಂದ ವ್ಯಾಪಾರಕ್ಕೆ ಸಹಾಯ ಸಿಗಲಿದೆ
ಕುಂಭ: ಮಗನ ಓದಿನ ಕಡೆಗೆ ಗಮನವಿರಲಿ
ಮೀನ: ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments