ಇಂದಿನ ಪಂಚಾಗ ಮತ್ತು ರಾಶಿಫಲ (24-10-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೆಟ್ಟವನ ಮನಸ್ಸು ಸಂಪತ್ತಿದ್ದಾಗ ಕರ್ಕಶ, ಆಪತ್ತು ಬಂದಾಗ ಕೋಮಲ. ತಣ್ಣಗಿರುವಾಗ ಕಬ್ಬಿಣ ಕಠೋರ, ಬಿಸಿಯಾದಾಗ ಮೃದು.  –ದೃಷ್ಟಾಂತಕಲಿಕಾ

# ಪಂಚಾಂಗ :ಗುರುವಾರ, 24.10.2019
ಸೂರ್ಯ ಉದಯ ಬೆ.06.11/ ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ರಾ.03.15 / ಚಂದ್ರ ಅಸ್ತ ಸಂ.03.08
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ಏಕಾದಶಿ (ರಾ.10.19) ನಕ್ಷತ್ರ: ಮಖ (ಮ.01.18) ಯೋಗ: ಶುಕ್ಲ (ಮ.01.36) ಕರಣ: ಭವ-ಬಾಲವ
(ಬೆ.11.47-ರಾ.10.19) ಮಳೆ ನಕ್ಷತ್ರ: ಸ್ವಾತಿ  (ಪ್ರ.ಸಾ.06.00) ಮಾಸ: ತುಲಾ, ತೇದಿ: 07

# ರಾಶಿ ಭವಿಷ್ಯ
ಮೇಷ: ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳಿ
ವೃಷಭ: ತಂಕವಿಲ್ಲದೆ ಕೆಲಸ-ಕಾರ್ಯಗಳು ಸಾಗುವುವು. ವ್ಯಾಪಾರದಲ್ಲಿ ಲಾಭ ಸಿಗಲಿದೆ
ಮಿಥುನ: ನಿಮ್ಮ ಕರ್ತವ್ಯಪರತೆಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು
ಕಟಕ: ರಾಜಕೀಯಕ್ಕೆ ಪ್ರವೇಶಿ ಸಲು ಪ್ರೋತ್ಸಾಹ ಸಿಗಲಿದೆ
ಸಿಂಹ: ಮಧ್ಯವರ್ತಿ ಕೆಲಸ ನಿರ್ವಾಹಕರಿಗೆ ಜಯ ಸಿಗಲಿದೆ
ಕನ್ಯಾ: ಕೆಲಸ ನಿಮಿತ್ತ ದೂರದ ಊರಿಗೆ ಮಗನ ಪ್ರಯಾಣ
ತುಲಾ: ಅರ್ಧಕ್ಕೆ ನಿಂತಿದ್ದ ಬರವಣಿಗೆ ಕೆಲಸ ಮುಂದುವರಿಯಲಿದೆ
ವೃಶ್ಚಿಕ: ಮನೆಯ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ
ಧನುಸ್ಸು: ನಿಮ್ಮ ಮೇಲಿನ ಆಪಾದನೆಗಳೆಲ್ಲವೂ ಸುಳ್ಳಾಗಿ ಪ್ರಾಮಾಣಿಕತೆ ಮೆರೆಯುವಿರಿ
ಮಕರ: ಬಂಡವಾಳ ಹೂಡಿಕೆಗೆ ಪ್ರಶಸ್ತ ಸಮಯ
ಕುಂಭ: ಕುಟುಂಬದ ಕಡೆಗಣನೆ ಸರಿಯಲ್ಲ
ಮೀನ: ಗೃಹ ಬಳಕೆ ವಸ್ತುಗಳ ಖರೀದಿಗೆ ಸಕಾಲ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments