ಇಂದಿನ ಪಂಚಾಗ ಮತ್ತು ರಾಶಿಫಲ (04-11-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣದ ವಿಚಾರದಲ್ಲಿ ಹೇಳುವುದಾದರೆ ಕೊಡಬೇಕು, ಅನುಭವಿಸಬೇಕು. ಆದರೆ ಸುಮ್ಮನೆ ಕೂಡಿಡಬಾರದು. ಜೇನುಗಳು ಕೂಡಿಟ್ಟ ಪದಾರ್ಥವನ್ನು ಇತರರು ಅಪಹರಿಸುವರೆಂಬುದನ್ನು ಕಾಣು. –ಪಂಚತಂತ್ರ

# ಪಂಚಾಂಗ : ಸೋಮವಾರ 04.11.2019
ಸೂರ್ಯ ಉದಯ ಬೆ.06.10/ ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ಮ.12.39  / ಚಂದ್ರ ಅಸ್ತ ರಾ.12.23
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ, ಶುಕ್ಲ ಪಕ್ಷ / ತಿಥಿ: ಅಷ್ಟಮಿ (ರಾ.04.57)
ನಕ್ಷತ್ರ: ಶ್ರವಣ (ರಾ.03.23) / ಯೋಗ:ಶೂಲ (ಬೆ.06.29) / ಕರಣ: ಭದ್ರೆ-ಭವ (ಮ.03.53-ರಾ.04.57)
ಮಳೆ ನಕ್ಷತ್ರ: ಸ್ವಾತಿ  / ಮಾಸ: ತುಲಾ / ತೇದಿ: 18

ಮೇಷ: ಮೇಲಧಿಕಾರಿಗಳು ಮಹತ್ತರ ಕೆಲಸಗಳಿಗೆ ನಿಮ್ಮಿಂದ ಸಲಹೆ-ಸೂಚನೆಗಳನ್ನು ಬಯಸುವರು
ವೃಷಭ: ನಿಮ್ಮಲ್ಲಿನ ವಿದ್ವತ್ತು, ಜಾಣ್ಮೆ ಸಾಮಾಜಿಕ ವಾಗಿ ಗೌರವಿಸಲ್ಪಡುವುದು. ಅದೃಷ್ಟದ ದಿನ
ಮಿಥುನ: ಮಕ್ಕಳು ಕೀರ್ತಿ ತರುವ ಪ್ರಯತ್ನ ಮಾಡುವರು
ಕಟಕ: ಸ್ನೇಹಿತರೊಂದಿಗೆ ವಿನಾ ಕಾರಣ ಜಗಳಕ್ಕೆ ಇಳಿಯದಿರಿ
ಸಿಂಹ: ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಉತ್ತಮ
ಕನ್ಯಾ: ಹಿರಿಯರ ಹಿತನುಡಿ ಗಳಿಂದ ಅನುಕೂಲವಾಗಲಿದೆ
ತುಲಾ: ಮುಂಗೋಪವನ್ನು ಹತೋಟಿಗೆ ತಂದು ಕೊಂಡಲ್ಲಿ ಮಹತ್ತರವಾದುದನ್ನು ಸಾಧಿಸಲು ಸಹಕಾರಿಯಾಗಲಿದೆ
ವೃಶ್ಚಿಕ: ಉದ್ಯೋಗ ರಂಗದಲ್ಲಿ ಉತ್ತಮ ಸಾಧನೆ
ಧನುಸ್ಸು: ಆರ್ಥಿಕವಾಗಿ ಉತ್ತಮ ಫಲ ಸಿಗಲಿದೆ
ಮಕರ: ದಿನನಿತ್ಯದ ಕೆಲಸಗಳು ಇದ್ದೇ ಇರುತ್ತವೆ
ಕುಂಭ: ಸಹೋದರಿಯರಿಂದ ಸಂತೋಷ
ಮೀನ: ಆರೋಗ್ಯದಲ್ಲಿ ಉತ್ತಮ ಫಲ ನಿರೀಕ್ಷೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments