ಇಂದಿನ ಪಂಚಾಂಗ ಮತ್ತು ರಾಶಿಫಲ (18-01-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಲೋಕದ ಜನಗಳಿಗೆ ಧರ್ಮವಾವುದು? ಭೂತದಯೆ. ಸೌಖ್ಯವಾವುದು? ರೋಗವಿಲ್ಲದಿರುವಿಕೆ. ಸ್ನೇಹವಾವುದು? ಸದ್ಭಾವ. ಪಾಂಡಿತ್ಯವಾವುದು? ವಿವೇಕದಿಂದ ವಿಮರ್ಶಿಸುವುದು. –ಹಿತೋಪದೇಶ

# ಪಂಚಾಂಗ : ಶನಿವಾರ, 18.01.2020
ಸೂರ್ಯ ಉದಯ ಬೆ.06.45 / ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ರಾ.01.35 / ಚಂದ್ರ ಅಸ್ತ ಬೆ.12.48
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಪುಷ್ಯ ಮಾಸ / ಕೃಷ್ಣ ಪಕ್ಷ /
ತಿಥಿ: ನವಮಿ (ರಾ.04.01) ನಕ್ಷತ್ರ: ಸ್ವಾತಿ (ರಾ.12.16) ಯೋಗ: ಧೃತಿ (ಮ.12.25) ಕರಣ: ತೈತಿಲ-ಗರಜೆ
(ಸಾ.04.45-ರಾ.04.01) ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರ ತೇದಿ: 04

# ರಾಶಿ ಭವಿಷ್ಯ
ಮೇಷ: ಪುಸ್ತಕ ವ್ಯಾಪಾರಿಗಳಿಗೆ ಲಾಭದಾಯಕ ದಿನ
ವೃಷಭ: ವಿದೇಶ ಪ್ರಯಾಣದಿಂದ ಶುಭವಾಗುವುದಿಲ್ಲ
ಮಿಥುನ: ಸಾಲದ ಸುಳಿಯಲ್ಲಿ ಸಿಲುಕುವಿರಿ
ಕಟಕ: ಉದ್ಯೋಗಸ್ಥರಿಗೆ ನೆಮ್ಮದಿ ಕಡಿಮೆ
ಸಿಂಹ: ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು
ಕನ್ಯಾ: ನ್ಯಾಯಾಲಯದಲ್ಲಿನ ತೀರ್ಪು ಮುಂದೆ ಹೋಗಬಹುದು
ತುಲಾ: ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು
ವೃಶ್ಚಿಕ: ವ್ಯಾಪಾರ- ವ್ಯವಹಾರದಲ್ಲಿ ಎಚ್ಚರಿಕೆ ಇರಲಿ
ಧನುಸ್ಸು: ಶತ್ರುಗಳು ನಿಮ್ಮನ್ನು ತೊಂದರೆಗೆ ಗುರಿಪಡಿಸಲು ಕಾಯುತ್ತಿರುವರು
ಮಕರ: ಗುರುಗಳ ಅನುಗ್ರಹದಿಂದ ಸಮಸ್ಯೆ ನಿವಾರಣೆಯಾಗಲಿದೆ
ಕುಂಭ: ಬಂಧು-ಮಿತ್ರರಲ್ಲಿ ಸಾಮರಸ್ಯವಿರುತ್ತದೆ. ಒಳ್ಳೆಯ ಶುಭ್ರ ವಸ್ತ್ರಗಳನ್ನು ಧರಿಸುವಿರಿ
ಮೀನ: ಬಂಧು-ಮಿತ್ರರಲ್ಲಿ ಜಾಗ್ರತೆಯಿಂದ ವ್ಯವಹರಿಸಿ. ಹಣ ಹೆಚ್ಚಿಗೆ ಖರ್ಚಾಗುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments