ಇಂದಿನ ಪಂಚಾಂಗ ಮತ್ತು ರಾಶಿಫಲ (19-01-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಲೋಕದ ಜನಗಳಿಗೆ ಧರ್ಮವಾವುದು? ಭೂತದಯೆ. ಸೌಖ್ಯವಾವುದು? ರೋಗವಿಲ್ಲದಿರುವಿಕೆ. ಸ್ನೇಹವಾವುದು? ಸದ್ಭಾವ. ಪಾಂಡಿತ್ಯವಾವುದು? ವಿವೇಕದಿಂದ ವಿಮರ್ಶಿಸುವುದು. –ಹಿತೋಪದೇಶ

# ಪಂಚಾಂಗ : ಭಾನುವಾರ, 19.01.2020
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ರಾ.02.31 / ಚಂದ್ರ ಅಸ್ತ ಬೆ.01.34
ವಿಕಾರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು, / ಪುಷ್ಯ ಮಾಸ / ಕೃಷ್ಣ ಪಕ್ಷ /
ತಿಥಿ: ದಶಮಿ (ರಾ.02.52) ನಕ್ಷತ್ರ: ವಿಶಾಖ (ರಾ.11.41) ಯೋಗ: ಶೂಲ (ಬೆ.10.02) ಕರಣ: ವಣಿಜ್-ಭದ್ರೆ (ಮ.03.23-ರಾ.02.52)
ಮಳೆ ನಕ್ಷತ್ರ: ಉತ್ತರಾಷಾಢ  ಮಾಸ: ಮಕರತೇದಿ: 05

# ರಾಶಿ ಭವಿಷ್ಯ
ಮೇಷ: ಬ್ರಾಹ್ಮಣರಿಗೆ ದಾನ-ಧರ್ಮ ಮಾಡುವಿರಿ
ವೃಷಭ: ಸತ್ಯ ಹೇಳುವ ಅವಕಾಶಗಳು ಹೆಚ್ಚಾಗಿವೆ
ಮಿಥುನ: ಹಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
ಕಟಕ: ಕಣ್ಣಿನ ತೊಂದರೆ ಕಂಡುಬರುವುದು
ಸಿಂಹ: ಶತ್ರುಗಳನ್ನು ಜಯಿಸುವಿರಿ
ಕನ್ಯಾ: ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ
ತುಲಾ: ತೊಂದರೆಗಳ ಸುಳಿ ಯಲ್ಲಿ ಸಿಲುಕುವ ಸಾಧ್ಯತೆಗಳಿವೆ
ವೃಶ್ಚಿಕ: ದುಷ್ಟರ ಸಹವಾಸ ದಿಂದ ದೂರವಿರಿ
ಧನುಸ್ಸು: ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರದ ನೆಲೆ ದೊರಕಿ ಹರ್ಷ ಉಂಟಾಗಲಿದೆ
ಮಕರ: ಆಪ್ತರಲ್ಲಿದ್ದ ಭಿನ್ನಾಭಿ ಪ್ರಾಯ ತಿಳಿಗೊಳ್ಳಲಿದೆ. ದೈವ ಕಾರ್ಯಗಳಲ್ಲಿ ಆಸಕ್ತಿ. ಹಿಡಿದ ಕೆಲಸ ಸಾಧಿಸುವವರೆಗೆ ಬಿಡುವುದಿಲ್ಲ
ಕುಂಭ: ಸಮಾಜದಲ್ಲಿ ಗೌರವಕ್ಕೆ ಭಾಜನರಾಗುವಿರಿ
ಮೀನ: ವೈವಾಹಿಕ ಮಾತುಕತೆಯಲ್ಲಿ ಮುನ್ನಡೆ. ದೂರದ ಬಂಧುಗಳ ಆಗಮನವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments