ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (31-10-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಶ್ರೀ ಗುರು ಕರುಣೆ ಇಲ್ಲದೆ ಜ್ಞಾನವಾಗಲಿ, ಮುಕ್ತಿಯಾಗಲೀ ದೊರೆಯುವುದಕ್ಕೆ ಸಾಧ್ಯವಾಗುವುದಿಲ್ಲ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಶನಿವಾರ , 31.10.2020
ಸೂರ್ಯ ಉದಯ ಬೆ.06.13 / ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ಸಂ.05.24/ ಚಂದ್ರ ಅಸ್ತ ನಾ.ಬೆ.06.37
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ನಿಜ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ (ರಾ.08.19)
ನಕ್ಷತ್ರ: ಅಶ್ವಿನಿ (ಸಾ.05.58) ಯೋಗ: ಸಿದ್ಧಿ (ರಾ.04.26) ಕರಣ: ಭದ್ರೆ-ಭವ(ಬೆ.07.03-ರಾ.08.19)
ಮಳೆ ನಕ್ಷತ್ರ: ವಿಶಾಖ ಮಾಸ: ಕನ್ಯಾ, ತೇದಿ: 15

ಮೇಷ: ವೃತ್ತಿರಂಗದಲ್ಲಿ ಬಾಹ್ಯ ನೆರವು ಸಿಗಲಿದೆ
ವೃಷಭ: ಪತ್ನಿಯೊಂದಿಗೆ ಅನವಶ್ಯಕ ಭಿನ್ನಾ ಭಿಪ್ರಾಯ ಉಂಟಾಗಿ ಕಲಹಕ್ಕೆ ಕಾರಣರಾಗದಿರಿ
ಮಿಥುನ: ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯ
ಕಟಕ: ನಿರುದ್ಯೋಗಿಗಳಿಗೆ ಅನಗತ್ಯ ಅಲೆದಾಟ
ಸಿಂಹ: ಕಾರ್ಯರಂಗದಲ್ಲಿ ಒತ್ತಡದಿಂದ ಕೆಲಸಗಳನ್ನು ನಿರ್ವಹಿಸಬೇಕಾದೀತು
ಕನ್ಯಾ: ದೇವತಾ ಕಾರ್ಯಗಳು ಸಮಾಧಾನ ತರಲಿವೆ
ತುಲಾ: ಬಂಧು-ಬಳಗದವರ ಪ್ರೀತಿ-ವಿಶ್ವಾಸದಿಂದ ಕಾರ್ಯ ಸಾಧನೆಗೆ ಸಹಕಾರ ಸಿಗಲಿದೆ
ವೃಶ್ಚಿಕ: ದಾಯಾದಿಗಳು ನಿಮ್ಮ ಬಗ್ಗೆ ಮತ್ಸರ ಬುದ್ಧಿ ತೋರಿಸಿಯಾರು
ಧನುಸ್ಸು:ವ್ಯಾಪಾರ-ವ್ಯವಹಾರಗಳು ಚೇತರಿಕೆ ತಂದರೂ ಹೂಡಿಕೆಗಳ ಬಗ್ಗೆ ಜಾಗ್ರತೆ ವಹಿಸಬೇಕು
ಮಕರ: ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುವುದರಿಂದ ನೆಮ್ಮದಿ ಇರಲಿದೆ
ಕುಂಭ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ತಂದರೂ ಅವಕಾಶ ಸದುಪಯೋಗಿಸಿಕೊಂಡರೆ ಒಳಿತು
ಮೀನ: ದೇವತಾ ಕಾರ್ಯಗಳಿಗೆ ಖರ್ಚು ಮಾಡುವಿರಿ

Facebook Comments