ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (04-09-2020-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಯಾರ ಹೃದಯವು ಕರುಣೆಯಿಂದ ತುಂಬಿದೆಯೋ ಅವರು ಮಾತ್ರ ದುಃಖಿತರ ಸೇವೆ ಮಾಡಬಲ್ಲರು. ನತದೃಷ್ಟರನ್ನು ಮೇಲೆತ್ತುವ ಕೈಂಕರ್ಯದಲ್ಲಿ ತೊಡಗಿಕೊಳ್ಳುವರು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ , 04.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ರಾ.08.05 / ಚಂದ್ರ ಅಸ್ತ ಬೆ.07.40
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ದ್ವಿತೀಯಾ (ಮ.02.24)/ ನಕ್ಷತ್ರ: ಉತ್ತರಾಭಾದ್ರ (ರಾ.11.28)
ಯೋಗ: ಶೂಲ, (ಮ.01.52) / ಕರಣ: ಗರಜೆ-ವಣಿಜ್ (ಮ.02.24-ರಾ.03.30)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 19

# ರಾಶಿ ಭವಿಷ್ಯ
ಮೇಷ: ವೃತ್ತಿಯಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಮೆಚ್ಚಿ ಬಡ್ತಿ ಕೊಡುವ ಸಾಧ್ಯತೆಗಳಿವೆ
ವೃಷಭ: ಕುಟುಂಬದಲ್ಲಿದ್ದ ವಿವಾದ ಶಮನವಾಗಲಿದೆ
ಮಿಥುನ: ವ್ಯಾಪಾರದಲ್ಲಿ ಏರಿಳಿತಗಳು ಸಾಮಾನ್ಯವಾಗಿರುತ್ತವೆ. ಧೈರ್ಯ ಗುಂದದಿರಿ
ಕಟಕ: ಮನಃಶಾಂತಿಗಾಗಿ ದೇವರ ದರ್ಶನ ಮಾಡುವಿರಿ
ಸಿಂಹ: ಅಗಲಿ ಹೋದ ಬಂಧುಗಳು, ಮಿತ್ರರು ಕೂಡಿಕೊಳ್ಳುತ್ತಾರೆ
ಕನ್ಯಾ: ಆರೋಗ್ಯ ಸಾಧಾರಣ ವಾಗಿರುವುದು
ತುಲಾ: ಆರ್ಥಿಕ ಪರಿಸ್ಥಿತಿ ಲಾಭದಾಯಕವಾಗಿರುವುದಿಲ್ಲ
ವೃಶ್ಚಿಕ: ಸಮಾಜ ಸೇವಕರಿಗೆ ಹಿತಶತ್ರುಗಳ ಕಾಟ
ಧನುಸ್ಸು: ರಾಜಕೀಯ ವ್ಯಕ್ತಿಗಳಿಂದ ಸಹಾಯ ಸಿಗಲಿದೆ
ಮಕರ: ದಾಂಪತ್ಯ ಜೀವನ ಮಧುರವಾಗಿರುತ್ತದೆ
ಕುಂಭ: ಶತ್ರುಗಳಿಂದ ತೊಂದರೆಯಾಗುವುದು
ಮೀನ: ನಿಮ್ಮ ಆಸೆಗಳು ಈಡೇರುವ ಸಮಯ

 

Facebook Comments