ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (06-09-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ಗುರುವೆಂದರೆ ಅರಿವು, ಜ್ಞಾನನಿಧಿ, ಜ್ಞಾನ ಪ್ರಪಂಚಕ್ಕೆ ಗುರುವೇ ಜೀವಾಳ, ಅಂತೆಯೇ ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರೇ ಸರ್ವಸ್ವ. ಶಿಕ್ಷಣವೆಂದರೆ ಕೇವಲ ಪಠ್ಯವಿಷಯವಲ್ಲ,
ಅದು ಚಾರಿತ್ರ್ಯದ ನಿರ್ಮಾಣ. ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿಸುವ ಶಿಕ್ಷಕರು ತಮ್ಮ ಜ್ಞಾನ, ನಡೆ, ನುಡಿಗಳಿಂದಲೇ ಗುರು ಎಂಬ ಗೌರವಕ್ಕೆ ಪಾತ್ರರಾಗಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ , 06.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ರಾ.09.18 / ಚಂದ್ರ ಅಸ್ತ ಬೆ.09.25
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಚತುರ್ಥಿ (ರಾ.07.07) / ನಕ್ಷತ್ರ: ಅಶ್ವಿನಿ (ರಾ.05.24)
ಯೋಗ: ವೃದ್ಧಿ, (ಮ.03.36) / ಕರಣ: ಭವ-ಬಾಲವ (ಬೆ.05.52-ರಾ.07.07)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 21

# ರಾಶಿ ಭವಿಷ್ಯ
ಮೇಷ: ತಂದೆಯ ಆರೋಗ್ಯ ವಿಷಮಿಸುತ್ತದೆ
ವೃಷಭ: ಕುಟುಂಬ ಸಮೇತ ಕುಲದೇವತಾ ದರ್ಶನ ಮಾಡುವಿರಿ. ಪ್ರಸಿದ್ಧಿ ಹೊಂದುವಿರಿ
ಮಿಥುನ: ಭೂ ವ್ಯವಹಾರದಲ್ಲಿ ನಷ್ಟ. ಕುಟುಂಬ ದಲ್ಲಿ ಆಗಾಗ ಕಲಹಗಳು ಕಂಡುಬರುತ್ತವೆ
ಕಟಕ: ಸಾಲದ ಸುಳಿಯಲ್ಲಿ ಸಿಲುಕಿ ಹೆಚ್ಚು ತೊಂದರೆ ಅನುಭವಿಸುವಿರಿ
ಸಿಂಹ: ವ್ಯವಹಾರಗಳಲ್ಲಿ ಹಣ ಕಳೆದುಕೊಳ್ಳುವಿರಿ
ಕನ್ಯಾ: ಸಜ್ಜನರ ಸಹವಾಸ ಮಾಡುವಿರಿ

ತುಲಾ: ಒಪ್ಪಂದಗಳನ್ನು ಮುಂದೂಡುವುದು ಒಳ್ಳೆಯದು
ವೃಶ್ಚಿಕ: ದೂರದೇಶದಿಂದ ಶುಭ ವಾರ್ತೆ ಬರುತ್ತದೆ.
ಧನುಸ್ಸು: ವಾದ-ವಿವಾದ ಮಾಡದಿರಿ
ಮಕರ: ವೃತ್ತಿಯಲ್ಲಿ ಜಯ ಸಿಗಲಿದೆ
ಕುಂಭ: ಅನಾರೋಗ್ಯ ಪೀಡಿತರಾಗಬಹುದು
ಮೀನ: ಸ್ನೇಹಿತರಿಂದ ಹೆಚ್ಚು ಲಾಭವಿದೆ

 

Facebook Comments