ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಇಂದು ಜನರು ನಾಗರಿಕತೆಯ ವೈಭವದಿಂದ ಎಷ್ಟೆಲ್ಲ ಮರೆಯುತ್ತಿದ್ದಾರೋ ಇವರಿಗೆಲ್ಲಾ ಅನ್ನ ಕೊಡುತ್ತಿ ರುವವರು ಯಾರು ಎಂದು ಯೋಚನೆ ಮಾಡಬೇಕು. ಹಿಂದೆ ಹಿರಿಯರು ತಾವು ಊಟ ಮಾಡಬೇಕಿದ್ದರೆ ಮೊದಲು ಅನ್ನಕ್ಕೆ ನಮಸ್ಕಾರ ಮಾಡಿ, ಅನ್ನದಾತ ಸುಖೀಭವ- ಅನ್ನ ನೀಡುವ ರೈತನೇ ನೀನು ಸುಖವಾಗಿರು ಎಂದು ಹಾರೈಸುತ್ತಿದ್ದರು. ಆದ್ದರಿಂದ ಮೊದಲು ನಾವು ಅನ್ನ ನೀಡುವ ಅನ್ನದಾತನಿಗೆ ಒಳಿತನ್ನು ಬಯಸಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 24.11.2020
ಸೂರ್ಯ ಉದಯ ಬೆ.06.22/ ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.02.07 / ಚಂದ್ರ ಅಸ್ತ ರಾ.02.17
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ (ರಾ.02.43)
ನಕ್ಷತ್ರ: ಪೂರ್ವಾಭಾದ್ರಾ (ಮ.03.32) ಯೋಗ: ವಜ್ರ (ದಿನಪೂರ್ತಿ)
ಕರಣ: ತೈತಿಲ-ಗರಜೆ (ಮ.01.35-ರಾ.02.33) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 09

 

# ರಾಶಿ ಭವಿಷ್ಯ : 
ಮೇಷ: ಖರ್ಚು-ವೆಚ್ಚಗಳ ಬಗ್ಗೆ ಗಮನ ಹರಿಸಿ
ವೃಷಭ: ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿವೆ. ಹತ್ತಿರದ ಬಂಧುಗಳ ಬಗ್ಗೆ ಜಾಗ್ರತೆ
ಮಿಥುನ: ದೇಹಾರೋಗ್ಯದಲ್ಲಿ ಏರುಪೇರಾಗಲಿದೆ
ಕಟಕ: ಆರ್ಥಿಕ ಅಡಚಣೆ ಕಡಿಮೆಯಾಗಲಿದೆ

ಸಿಂಹ: ಧಾರ್ಮಿಕ ಶುಭ ಕಾರ್ಯ ಗಳಿಗೆ ಅನುಕೂಲವಾಗಲಿದೆ
ಕನ್ಯಾ: ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಅಗತ್ಯವಿರುತ್ತದೆ
ತುಲಾ: ವ್ಯಾಪಾರ-ವ್ಯವಹಾರ ಗಳಲ್ಲಿ ಕಷ್ಟ-ನಷ್ಟವಾಗಲಿದೆ
ವೃಶ್ಚಿಕ: ಸರ್ಕಾರಿ ಇಲಾಖೆ ಗಳಲ್ಲಿ ಹಗರಣಗಳು ಕಂಡುಬರುತ್ತವೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ

ಧನುಸ್ಸು: ನಿರುದ್ಯೋಗಿಗಳ ಪ್ರಯತ್ನಬಲ ಸಾರ್ಥಕ ವಾಗಲಿದೆ. ಉದ್ಯೋಗದಲ್ಲಿ ಮುನ್ನಡೆ ಇರುತ್ತದೆ
ಮಕರ: ಸಾಂಸಾರಿಕವಾಗಿ ಸಂತೋಷದ ಘಟನೆಗಳು ನಡೆಯಲಿವೆ. ಶುಭವಾರ್ತೆ ಕೇಳುವಿರಿ
ಕುಂಭ: ಕಾನೂನು ಕ್ರಮಗಳನ್ನೆದುರಿಸುವ ಸಂದರ್ಭಗಳು ಒದಗಿಬರುತ್ತವೆ. ಜಾಗ್ರತೆ ವಹಿಸಿ
ಮೀನ: ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ

Facebook Comments