ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ನಮ್ಮ ಮಾತಿನಿಂದ ಎದುರಿಗಿರುವವರಿಗೆ ಗೌರವ ಸಿಕ್ಕರೆ ಅದರಿಂದ ತಮ್ಮ ಆತ್ಮಗೌರವವೇ ಹೆಚ್ಚುತ್ತದೆ. ಆದ್ದರಿಂದ ಮಾತು ಮಂತ್ರವಾಗಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 26.11.2020
ಸೂರ್ಯ ಉದಯ ಬೆ.06.23/ ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಮ.03.18 / ಚಂದ್ರ ಅಸ್ತ ರಾ.03.48
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ (ದಿನಪೂರ್ತಿ)
ನಕ್ಷತ್ರ: ರೇವತಿ (ರಾ.09.20) ಯೋಗ: ಸಿದ್ಧಿ (ಬೆ.07.34) ಕರಣ: ಭವ  (ಸಾ.06.29)
ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 11

# ರಾಶಿ ಭವಿಷ್ಯ : 
ಮೇಷ: ಬಂಧು-ಮಿತ್ರರ ಆಗಮನದಿಂದ ಕುಟುಂಬ ದಲ್ಲಿ ಸಂತಸ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ
ವೃಷಭ: ನಿಮ್ಮ ವಿಶ್ವಾಸದ ದುರುಪಯೋಗವಾಗಲಿದೆ
ಮಿಥುನ: ಕೆಲವೊಂದು ಘಟನೆಗಳು ಮನಸ್ಸಿಗೆ ಕಿರಿಕಿರಿ ತರಲಿವೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ
ಕಟಕ: ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ

ಸಿಂಹ: ನಿರುದ್ಯೋಗಿಗಳಿಗೆ ಸದ್ಯದಲ್ಲೇ ಉದ್ಯೋಗ ದೊರೆಯಲಿದೆ
ಕನ್ಯಾ: ಗುರು-ಹಿರಿಯರ ಆದರ ಸಮಾಧಾನ ತರಲಿದೆ
ತುಲಾ: ನೆರೆಹೊರೆಯವ ರೊಂದಿಗೆ ಸೌಹಾರ್ದಯುತ ವಾತಾವರಣ ಇರುವುದು
ವೃಶ್ಚಿಕ: ವಿಶೇಷವಾದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ

ಧನುಸ್ಸು: ವ್ಯಾಪಾರ-ವ್ಯವಹಾರಗಳಲ್ಲಿ ತುಸು ಚೇತರಿಕೆ
ಮಕರ: ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು
ಕುಂಭ: ದೂರ ಸಂಚಾರ ಮಾಡುವಿರಿ
ಮೀನ: ನಿಮ್ಮ ಕೆಲವು ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಉತ್ತಮ ಆರೋಗ್ಯ

Facebook Comments