ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸದಾ ದೇವರ ಧ್ಯಾನದಲ್ಲೇ ಇದ್ದು, ಅಪರೂಪದ ಮಾನವ ಜನ್ಮಕ್ಕೆ ಬಂದು ಮಾಡಬೇಕಾದು ದನ್ನು ಮಾಡದೆ ಇದ್ದರೆ ಅದನ್ನು ಭಗವಂತ ಒಪ್ಪುವುದಿಲ್ಲ. ಹಾಗಾಗಿಯೇ ನಮ್ಮ ಹಿರಿಯರು ಕಾಯಕವೇ ಕೈಲಾಸ, ಕರ್ತವ್ಯವೇ ದೇವರು ಎಂದಿದ್ದಾರೆ. ಶುದ್ಧ, ನಿಸ್ವಾರ್ಥ, ನಿರ್ಮಲ ಮನಸ್ಸಿನಿಂದ ಪರೋಪಕಾರಕ್ಕಾಗಿ ಮಾಡುವ ಕಾರ್ಯಗಳೆಲ್ಲ ಆ ದೇವರ ಧ್ಯಾನಗಳೇ ಆಗಿವೆ. ಆ ದೃಷ್ಟಿಯಿಂದ ಮಾಡುವ ಜಪ, ತಪ, ಧ್ಯಾನಗಳ ಹಿಂದಿರುವ ಮನಸ್ಸು ಪರಿಶುದ್ಧವಾಗಿರಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ, 27.11.2020
ಸೂರ್ಯ ಉದಯ ಬೆ.06.23/ ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಮ.03.54 / ಚಂದ್ರ ಅಸ್ತ ರಾ.04.33
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ (ಬೆ.07.47)
ನಕ್ಷತ್ರ: ಅಶ್ವಿನಿ (ರಾ.12.23) ಯೋಗ: ವ್ಯತೀಪಾತ (ಬೆ.08.29) ಕರಣ: ಬಾಲವ-ಕೌಲವ
(ಬೆ.07.47-ರಾ.09.05) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 12

# ರಾಶಿ ಭವಿಷ್ಯ : 
ಮೇಷ: ಆತ್ಮೀಯರು ಒತ್ತಡ ತರುವ ಸಾಧ್ಯತೆ ಇದೆ
ವೃಷಭ: ಬಂಧು-ಮಿತ್ರರೊಡನೆ ಭೋಜನ ಮಾಡುವಿರಿ
ಮಿಥುನ: ಕಾಂಟ್ರಾಕ್ಟ್ ವೃತ್ತಿಯವರಿಗೆ ಅಕ ಲಾಭವಿದ್ದರೂ ಹಣಕಾಸಿನ ವಿಚಾರದಲ್ಲಿ ವಂಚನೆ ನಡೆಯಬಹುದು
ಕಟಕ: ಕೌಟುಂಬಿಕವಾಗಿ ನೆಮ್ಮದಿಯ ದಿನ

ಸಿಂಹ: ಅನಗತ್ಯ ಸುಳ್ಳು ಆಪಾದನೆಗೆ ಗುರಿಯಾಗದಿರಿ
ಕನ್ಯಾ: ಯಾವುದೇ ವಿಚಾರದಲ್ಲಿ ದುಡುಕದೆ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ
ತುಲಾ: ವೃತ್ತಿ ನಿರತರಿಗೆ ಆಗಾಗ ಅಡೆತಡೆಗಳಿರುತ್ತವೆ
ವೃಶ್ಚಿಕ: ನಿರುದ್ಯೋಗಿಗಳ ಪ್ರಯತ್ನಬಲ ಸಫಲವಾಗಲಿದೆ

ಧನುಸ್ಸು: ಸಾಂಸಾರಿಕವಾಗಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ವೈಯಕ್ತಿಕ ಸಮಸ್ಯೆಗಳು ಕಾಡಲಿವೆ
ಮಕರ: ಉದ್ಯೋಗಸ್ಥರಿಗೆ ಉದ್ಯೋಗ ಬದಲಾವಣೆಯ ಸಾಧ್ಯತೆಗಳಿರುತ್ತವೆ
ಕುಂಭ: ವೃತ್ತಿರಂಗದಲ್ಲಿ ಸಮಸ್ಯೆಗಳು ನಿವಾರಣೆ ಯಾಗಲಿವೆ. ಕಾರ್ಯರಂಗದಲ್ಲಿ ವರ್ಚಸ್ಸು ಹೆಚ್ಚಲಿದೆ
ಮೀನ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆಯಾದರೂ ಸಮಾಧಾನ ಇರುವುದಿಲ್ಲ

Facebook Comments