ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ರಾಷ್ಟ್ರ ಪ್ರೇಮವು ಅಮೂಲ್ಯವಾದುದು. ಇದರ ಸೋಗಿನಲ್ಲಿ ಸ್ವಾರ್ಥ ಸಾಧನೆಗೆ ತೊಡಗಬಾರದು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಶನಿವಾರ , 28.11.2020
ಸೂರ್ಯ ಉದಯ ಬೆ.06.24/ ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಸಂ.04.32 / ಚಂದ್ರ ಅಸ್ತ ರಾ.05.21
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ
(ಬೆ.10.22) ನಕ್ಷತ್ರ: ಭರಣಿ (ರಾ.03.19) ಯೋಗ: ವರೀಯಾನ್ (ಬೆ.09.22)
ಕರಣ: ತೈತಿಲ-ಗರಜೆ (ಬೆ.10.22-ರಾ.11.37) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 13

# ರಾಶಿ ಭವಿಷ್ಯ : 
ಮೇಷ: ಆರ್ಥಿಕ ಸ್ಥಿತಿ ಏರುಪೇರಾಗುತ್ತಲೇ ಇರುತ್ತದೆ. ಆರೋಗ್ಯದ ಕಡೆ ಗಮನವಿರಲಿ
ವೃಷಭ: ಧನಾಗಮನದಿಂದ ಕಾರ್ಯಸಿದ್ಧಿ ಇದ್ದರೂ ಹಿಡಿತ ಇರಲಿ. ಜಾಣ್ಮೆಯಿಂದ ವರ್ತಿಸಿ
ಮಿಥುನ: ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಬೆಳಗಲಿದೆ
ಕಟಕ: ವೃತ್ತಿರಂಗದಲ್ಲಿ ಗೊಂದಲ ಗಳ ಬಗ್ಗೆ ಜಾಗ್ರತೆ ವಹಿಸಿ

ಸಿಂಹ: ಸಮಸ್ಯೆಗಳು ಕಂಡು ಬಂದರೂ ಕ್ಷಣ ಮಾತ್ರದಲ್ಲಿ ಬಗೆಹರಿಯಲಿದೆ
ಕನ್ಯಾ: ಸಾಂಸಾರಿಕ ಸಮಸ್ಯೆ ಗಳನ್ನು ವೈಯಕ್ತಿಕವಾಗಿ ನಿವಾರಿಸಿಕೊಳ್ಳುವುದು ಉತ್ತಮ
ತುಲಾ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಅವಕಾಶ ಸಮಾಧಾನ ತರಲಿದೆ. ಆರೋಗ್ಯ ಸುಧಾರಿಸುತ್ತದೆ
ವೃಶ್ಚಿಕ: ಮನೋದೌರ್ಬಲ್ಯವನ್ನು ಸಂಪೂರ್ಣ ವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳಿತು

ಧನುಸ್ಸು: ಕೆಲಸಗಳು ಮಂದಗತಿಯಲ್ಲಿ ನಡೆಯಲಿವೆ
ಮಕರ: ಕಲಿಕೆಗೆ ನಿರಂತರ ಅವಕಾಶಗಳಿವೆ
ಕುಂಭ: ಆತ್ಮವಿಶ್ವಾಸದಿಂದ ಮುಂದುವರಿಯಿರಿ
ಮೀನ: ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾಗಲಿದೆ

Facebook Comments