ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-11-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಅನೇಕ ಜನ್ಮಗಳಲ್ಲಿ ಪುಣ್ಯವನ್ನು ಸಂಪಾದನೆ ಮಾಡಿ ಭಗವಂತನ ಬ್ಯಾಂಕಿನಲ್ಲಿಟ್ಟಿದ್ದರೆ ಮುಂದಿನ ಜನ್ಮದಲ್ಲಿ ಅದರಿಂದ ಸುಖವನ್ನು ಅನುಭವಿಸಬಹುದು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಭಾನುವಾರ, 29.11.2020
ಸೂರ್ಯ ಉದಯ ಬೆ.06.25/ ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಸಂ.05.12 / ಚಂದ್ರ ಅಸ್ತ ಸಂ.05.21
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ
(ಮ.12.48) ನಕ್ಷತ್ರ: ಕೃತ್ತಿಕ (ನಾ.ಬೆ.06.03) ಯೋಗ: ಪರಿಘ (ಬೆ.10.09)
ಕರಣ: ವಣಿಜ್-ಭದ್ರೆ (ಮ.12.48-ರಾ.01.56) ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ, ತೇದಿ: 14

# ರಾಶಿ ಭವಿಷ್ಯ : 
ಮೇಷ: ಹೊಸ ಸಾಹಸಕ್ಕೆ ಕೈ ಹಾಕಲು ನಿಮ್ಮದೇ ಆದ ನಿಲುವನ್ನು ನೀವು ಬಿಟ್ಟುಕೊಡದಿರಿ
ವೃಷಭ: ಮಾತಿನ ಜಾಣ್ಮೆಯಿಂದ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮರುಳು ಮಾಡಲು ಆಗುವುದಿಲ್ಲ
ಮಿಥುನ: ವೈವಾಹಿಕ ಭಾಗ್ಯಕ್ಕಾಗಿ ಹಲವಾರು ಅವಕಾಶಗಳು ಒದಗಿ ಬರಲಿವೆ
ಕಟಕ: ಸರ್ಕಾರಿ ಕೆಲಸ- ಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆಯಲಿವೆ

ಸಿಂಹ: ವಿದ್ಯಾರ್ಥಿಗಳು ದುಶ್ಚಟ ಗಳಿಂದ ದೂರವಿರಬೇಕು
ಕನ್ಯಾ: ದೈವಾನುಗ್ರಹದಿಂದ ನಿರೀಕ್ಷಿಸಿದ ಲಾಭಾಂಶ ಕಂಡು ಬರು ತ್ತದೆ. ಯಾವುದಕ್ಕೂ ದುಡುಕದಿರಿ
ತುಲಾ: ವ್ಯಾಪಾರ-ವ್ಯವಹಾರ ಗಳಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಮನೆ ವೈದ್ಯರ ಸಲಹೆ ಸ್ವೀಕರಿಸಿ
ವೃಶ್ಚಿಕ: ಮನೋದೌರ್ಬಲ್ಯವನ್ನು ಸಂಪೂರ್ಣ ವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳಿತು

ಧನುಸ್ಸು: ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
ಮಕರ: ಆತ್ಮೀಯರ ಆರೋಗ್ಯದ ಬಗ್ಗೆ ಚಿಂತೆ
ಕುಂಭ: ನೂತನ ವ್ಯಾಪಾರದಲ್ಲಿ ಜಾಗ್ರತೆಯಿರಲಿ
ಮೀನ: ಸ್ಪರ್ಧೆಯಲ್ಲಿ ತೇರ್ಗಡೆ ಆಗುವಿರಿ

Facebook Comments