ಇಂದಿನ ಪಂಚಾಗ ಮತ್ತು ರಾಶಿಫಲ (10-01-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸೂರ್ಯನು ಉದಯಿಸಿದನೆಂದು ಜನರು ಆನಂದಿಸುತ್ತಾರೆ. ಅಸ್ತಮಿಸಿದನೆಂದೂ ಆನಂದಿಸುತ್ತಾರೆ. ತಮ್ಮ ಆಯಸ್ಸು ಕ್ಷಯಿಸಿ ಹೋಗುತ್ತದೆಯೆಂಬುದನ್ನು ಮಾತ್ರ ಅವರು ಗಮನಿಸುವುದಿಲ್ಲ. -ರಾಮಾಯಣ

Rashi-Bhavishya--01

# ಪಂಚಾಂಗ :ಗುರುವಾರ 10.01.2019
ಸೂರ್ಯ ಉದಯ ಬೆ.06.44/ ಸೂರ್ಯ ಅಸ್ತ ಸಂ.06.09
ಚಂದ್ರ ಉದಯ ಬೆ.09.43 / ಚಂದ್ರ ಅಸ್ತ ರಾ.09.41
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಪುಷ್ಯ ಮಾಸ
ಶುಕ್ಲ ಪಕ್ಷ/ ತಿಥಿ : ಚತುರ್ಥಿ (ಸಾ.05.22)
ನಕ್ಷತ್ರ:ಶತಭಿಷಾ (ರಾ.05.54)/ ಯೋಗ: ವ್ಯತೀಪಾತ (ನಾ.ಬೆ.06.29)
ಕರಣ: ಭದ್ರೆ-ಭವ (ಸಾ.05.22-ನಾ.ಬೆ.06.41)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನುಸ್ಸು / ತೇದಿ: 26

# ರಾಶಿ ಭವಿಷ್ಯ
ಮೇಷ: ಎದುರಾಳಿಗಳಿಂದ ಹಲವಾರು ಸಮಸ್ಯೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ
ವೃಷಭ: ಹಣಕಾಸಿನ ಸಮಸ್ಯೆ ಎದುರಾಗಲಿದೆ
ಮಿಥುನ: ಮಿತ್ರರು, ಬಂಧುಗಳು ದೂರವಾಗುವರು
ಕಟಕ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ಸಿಂಹ: ಬಂಧುಗಳ ಕುತಂತ್ರ ದಿಂದ ಶುಭ ಕಾರ್ಯಗಳನ್ನು ಮುಂದೂಡಬೇಕಾಗುತ್ತದೆ
ಕನ್ಯಾ: ಪತ್ನಿಯ ಆರೋಗ್ಯದಲ್ಲಿ ತುಸು ಬದಲಾವಣೆಯಾಗಲಿದೆ
ತುಲಾ: ವಾದ-ವಿವಾದಗಳಿಂದ ದೂರವಿರುವುದು ಉತ್ತಮ. ಹೊಸ ಮಿತ್ರರು ದೊರಕುವರು
ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ
ಧನುಸ್ಸು: ಅಶ್ರದ್ಧೆ, ಅಜಾಗರೂಕತೆಯಿಂದ ಕೆಲಸದಲ್ಲಿ ತೀವ್ರ ಹಿನ್ನಡೆಯಾಗಬಹುದು
ಮಕರ: ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತದೆ
ಕುಂಭ: ದುರ್ಜನರ ಸಹವಾಸ ಮಾಡದಿರಿ
ಮೀನ: ಅತ್ತೆ-ಮಾವಂದಿರ ಸಹಾಯ ಪಡೆಯುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ