ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-12-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ನಶ್ವರವಾದ ಸಂಪತ್ತಿಗಿಂತ ಶಾಶ್ವತವಾಗಿರುವ ಗೆಳೆತನ ಮುಖ್ಯ. ಸಂಪತ್ತು ಬೇಡವೆಂದಲ್ಲ. ಬದುಕಿಗೆ ಅದು ಬೇಕೇ ಬೇಕು. ಆದರೆ ನಿನ್ನ ಸಂಪತ್ತನ್ನು ಅಪಹರಿಸಿದಂತೆ ಗೆಳೆತನವನ್ನು ಯಾರೂ ಅಪಹರಿಸಲಾರರು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಬುಧವಾರ, 02.12.2020
ಸೂರ್ಯ ಉದಯ ಬೆ.06.27/ ಸೂರ್ಯ ಅಸ್ತ ಸಂ.05.52
ಚಂದ್ರ ಉದಯ ಸಂ.05.52 / ಚಂದ್ರ ಅಸ್ತ ಬೆ.07.55
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ
(ಸಾ.06.22) ನಕ್ಷತ್ರ: ಮೃಗಶಿರ (ಬೆ.10.38) ಯೋಗ: ಸಾಧ್ಯ (ಬೆ.11.14) ಕರಣ: ಗರಜೆ
(ಸಾ.06.22) ಮಳೆ ನಕ್ಷತ್ರ: ಜ್ಯೇಷ್ಠಾ ಮಾಸ: ವೃಶ್ಚಿಕ, ತೇದಿ: 17

# ರಾಶಿ ಭವಿಷ್ಯ : 
ಮೇಷ: ಸಾಂಸಾರಿಕ ಸಮಸ್ಯೆಗಳಿಗೆ ನಿಮ್ಮ ಪ್ರಯತ್ನ ಬಲದಿಂದ ಪರಿಹಾರ ಸಿಗುವ ಸಾಧ್ಯತೆಗಳಿವೆ
ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯ ಒತ್ತಡ. ಸ್ವಲ್ಪ ದೇಹಾಲಸ್ಯವಾದರೂ ಅದು ತಾತ್ಕಾಲಿಕ
ಮಿಥುನ: ಕೆಲಸ-ಕಾರ್ಯಗಳು ಸರಾಗವಾಗಿ ನಿಮ್ಮಿಚ್ಛೆ ಯಂತೆ ನಡೆದು ಹೋಗಲಿವೆ
ಕಟಕ: ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯ

ಸಿಂಹ: ಸ್ಪರ್ಧೆಯ ಒತ್ತಡ ನಿಮ್ಮನ್ನು ಹೈರಾಣು ಮಾಡುವುದು
ಕನ್ಯಾ: ವಿಳಂಬಗತಿಯಲ್ಲಿ ಕೆಲಸ-ಕಾರ್ಯಗಳು ನಡೆದರೂ ಪೂರ್ಣಗೊಳ್ಳಲಿವೆ
ತುಲಾ: ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ
ವೃಶ್ಚಿಕ: ದಾಯಾದಿಗಳು ನಿಮ್ಮ ಹಣವನ್ನು ಲಪಟಾಯಿಸುವ ಸಾಧ್ಯತೆಗಳು ಹೆಚ್ಚಾಗಿವೆ

ಧನುಸ್ಸು: ಆರ್ಥಿಕ ಕ್ಷೇತ್ರದಲ್ಲಿ ನಿಮ್ಮ ನಿರೀಕ್ಷೆಗೆ ಮೀರಿದ ಅಭಿವೃದ್ಧಿ ಗೋಚರಕ್ಕೆ ಬರಲಿದೆ
ಮಕರ: ಹಿರಿಯರ ಸಲಹೆ-ಸೂಚನೆಗಳಿಂದ ಕೆಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳು ಸಿಗಲಿವೆ.
ಕುಂಭ: ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
ಮೀನ: ಹಲವರು ನಿಮ್ಮ ಸಹಕಾರ ಬಯಸುವರು

Facebook Comments