ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-12-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ದೇವರಲ್ಲಿ ಭಕ್ತಿಯಿಂದ ನಡೆದುಕೊಂಡರೂ ನನಗೆ ಏನೂ ಇಲ್ಲವೆಂದು ದುಃಖಿಸಬಾರದು. ಪುಣ್ಯ ಸಂಪಾದನೆ ಮಾಡಿಕೊಂಡರೆ ಮುಂದೆ ಭಗವಂತ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಗುರುವಾರ, 03.12.2020
ಸೂರ್ಯ ಉದಯ ಬೆ.06.27/ ಸೂರ್ಯ ಅಸ್ತ ಸಂ.05.52
ಚಂದ್ರ ಉದಯ ರಾ.08.25 / ಚಂದ್ರ ಅಸ್ತ ಬೆ.08.48
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ
(ರಾ.07.27) ನಕ್ಷತ್ರ: ಆರಿದ್ರ (ಮ.12.21) ಯೋಗ: ಶುಭ (ಬೆ.11.01)
ಕರಣ: ಭದ್ರೆ-ಭವ (ಬೆ.06.58-ರಾ.07.27) ಮಳೆ ನಕ್ಷತ್ರ: ಜ್ಯೇಷ್ಠಾ ಮಾಸ: ವೃಶ್ಚಿಕ, ತೇದಿ: 18

# ರಾಶಿ ಭವಿಷ್ಯ : 
ಮೇಷ: ನೆರೆಹೊರೆಯವರಲ್ಲಿ ನಿಮ್ಮ ಬಗೆಗಿನ ಗೌರವಾ ದರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುವುದು
ವೃಷಭ: ಕಾರ್ಯರಂಗದಲ್ಲಿ ಹಠಮಾರಿತನ ಮಾಡದಿರಿ. ಉದ್ವೇಗಗಳಿಗೆ ಕಾರಣರಾಗದಿರಿ
ಮಿಥುನ: ಪರರಿಗೆ ಉಪಕಾರ ಮಾಡುವ ಬುದ್ಧಿ ನಿಮ್ಮಲ್ಲಿ ಸದಾ ಜಾಗೃತವಾಗಿರುವುದು
ಕಟಕ: ಸ್ವಯಂ ವೈದ್ಯಕೀಯ ಮಾಡಿಕೊಳ್ಳದೆ ಸೂಕ್ತ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಿ

ಸಿಂಹ: ರಾಜಕೀಯ ವರ್ಗ ದವರಿಗೆ ಹಣ ನೀರಿನಂತೆ ಖರ್ಚಾಗಿ ಹೋಗಲಿದೆ
ಕನ್ಯಾ: ದಾಯಾದಿಗಳ ಕಿರಿಕಿರಿ ಆಗಾಗ ಅಸಮಾಧಾನಕ್ಕೆ ಕಾರಣವಾಗಲಿದೆ
ತುಲಾ: ದೂರ ಸಂಚಾರದಿಂದ ಆರೋಗ್ಯ ಕ್ಷೀಣಿಸಲಿದೆ. ಮನಸ್ಸಿಗೆ ಸಮಾಧಾನ ಇರುವುದಿಲ್ಲ
ವೃಶ್ಚಿಕ: ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ

ಧನುಸ್ಸು: ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಅಡ್ಡಿ- ಆತಂಕಗಳಿರುತ್ತವೆ. ಯಾವುದಕ್ಕೂ ದುಡುಕದಿರಿ
ಮಕರ: ಅನಿರೀಕ್ಷಿತ ಧನಾಗಮನವಾಗಲಿದೆ
ಕುಂಭ: ಗುರು-ಹಿರಿಯರ ಸಹಕಾರ ಸಿಗಲಿದೆ
ಮೀನ: ಆರ್ಥಿಕವಾಗಿ ಉನ್ನತಿ ಇರುತ್ತದೆ

Facebook Comments