ಇಂದಿನ ಪಂಚಾಗ ಮತ್ತು ರಾಶಿಫಲ (14-01-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಾಲಿನಿಂದ ಒದೆಯಲ್ಪಟ್ಟರೂ ಬಲವಾದ ಕೋಲಿನಿಂದ ಹೊಡೆಯಲ್ಪಟ್ಟರೂ ಹಾವು ಯಾರನ್ನು ತನ್ನ ಹಲ್ಲಿನಿಂದ ಕಚ್ಚುತ್ತದೆಯೋ ಅವನನ್ನೇ ಕೊಲ್ಲುತ್ತದೆ. ಆದರೆ, ಚಾಡಿ ಹೇಳುವ ಕೆಟ್ಟ ಮನುಷ್ಯನ ಧರ್ಮ ಏನೋ ಬಹಳ ವಿಚಿತ್ರವಾಗಿದೆ. ಒಬ್ಬನನ್ನು ಅವನ ಕಿವಿಯಲ್ಲಿ ಕಚ್ಚುತ್ತಾನೆ, ಮತ್ತೊಬ್ಬನನ್ನು ಬಯುಡಸಹಿತ ನಾಶಪಡಿಸುತ್ತಾನೆ. -ಪಂಚತಂತ್ರ

Rashi-Bhavishya--01

# ಪಂಚಾಂಗ :ಸೋಮವಾರ 14.01.2019
ಸೂರ್ಯ ಉದಯ ಬೆ.06.45 ಸೂರ್ಯ ಅಸ್ತ ಸಂ.06.11
ಚಂದ್ರ ಉದಯ ಮ.12.18 / ಚಂದ್ರ ಅಸ್ತ ರಾ.12.50
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಪುಷ್ಯ ಮಾಸ
ಶುಕ್ಲ ಪಕ್ಷ/ ತಿಥಿ :  ಅಷ್ಟಮಿ (ರಾ.12.38)
ನಕ್ಷತ್ರ: ರೇವತಿ (ಮ.12.52) / ಯೋಗ: ಶಿವ (ಬೆ.07.30)
ಕರಣ: ಭದ್ರೆ-ಭವ (ಮ.12.16-ರಾ.12.38)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಮಕರ / ತೇದಿ: 01

# ರಾಶಿ ಭವಿಷ್ಯ
ಮೇಷ: ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ
ವೃಷಭ: ವಿದೇಶ ಪ್ರಯಾಣ ಮಾಡುವ ಯೋಗವಿದೆ
ಮಿಥುನ: ಮಕ್ಕಳಿಂದ ಮಾನಸಿಕ ಹಿಂಸೆ ಅನುಭ ವಿಸುವಿರಿ. ನಿಮಗೆ ಯಾರೂ ಸಾಲ ಕೊಡುವುದಿಲ್ಲ
ಕಟಕ: ಹಣದ ಕೊರತೆ ಕಂಡುಬರುವುದಿಲ್ಲ
ಸಿಂಹ: ಕುಟುಂಬದಲ್ಲಿ ನಿಮ್ಮ ಮಾತನ್ನು ಯಾರೂ ಕೇಳುವುದಿಲ್ಲ
ಕನ್ಯಾ: ಸಂಘ-ಸಂಸ್ಥೆಗಳಲ್ಲಿ ಘನತೆ-ಗೌರವ ಹೆಚ್ಚುವುದು
ತುಲಾ: ಸಾಧು-ಸತ್ಪುರುಷರ ಸೇವೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಕೈ ಬಿಟ್ಟು ಹೋಗುವ ಸಂದರ್ಭಗಳು ಬರುವುವು
ಧನುಸ್ಸು: ರಾಜಕಾರಣಿಗಳಿಗೆ ಉತ್ತಮ ದಿನ
ಮಕರ: ಹಿತಶತ್ರುಗಳ ಬಗ್ಗೆ ಹೆಚ್ಚು ಎಚ್ಚರದಿಂದಿರಿ
ಕುಂಭ: ಸಮಾಜ ಸೇವೆಯಿಂದ ಪ್ರತಿಷ್ಠೆ ದೊರಕುತ್ತದೆ
ಮೀನ: ಹಿರಿಯರ ಆಶೀರ್ವಾದ ಪಡೆದು ಶುಭ ಕಾರ್ಯ ಪ್ರಾರಂಭಿಸಿ. ಮಕ್ಕಳಿಂದ ಸುಖವಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments