ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-12-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :ಭಗವಂತನಲ್ಲಿ ಸ್ವಾರ್ಥ ವನ್ನು ಬಯಸದಿದ್ದರೆ ಅಥವಾ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಹೊರಟರೆ ಅಂತಹವರಿಗೆ ದೇವರು ಬೇಡ ಬೇಡವೆಂದರೂ ಎಲ್ಲವನ್ನೂ ಕೊಡುತ್ತಾನೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಭಾನುವಾರ , 06.12.2020
ಸೂರ್ಯ ಉದಯ ಬೆ.06.29/ ಸೂರ್ಯ ಅಸ್ತ ಸಂ.05.53
ಚಂದ್ರ ಉದಯ ರಾ.11.12 / ಚಂದ್ರ ಅಸ್ತ ಬೆ.11.20
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠೀ (ರಾ.07.45)
ನಕ್ಷತ್ರ: ಆಶ್ಲೇಷಾ (ಮ.02.46) ಯೋಗ: ಇಂದ್ರ-ವೈಧೃತಿ (ಬೆ.08.13-ನಾ.ಬೆ.06.28)
ಕರಣ: ಗರಜೆ-ವಣಿಜ್ (ಬೆ.08.02-ರಾ.07.45) ಮಳೆ ನಕ್ಷತ್ರ: ಜ್ಯೇಷ್ಠಾ ಮಾಸ: ವೃಶ್ಚಿಕ, ತೇದಿ: 21

# ರಾಶಿ ಭವಿಷ್ಯ : 
ಮೇಷ: ಕೆಲಸ-ಕಾರ್ಯ ಮುಂದುವರಿ ಸಲು ಸೂಕ್ತ ಸಲಹೆಗಳನ್ನು ಹಿರಿಯರಿಂದ ಪಡೆಯಿರಿ
ವೃಷಭ: ದೂರದ ಅತಿಥಿಗಳ ಆಗಮನದಿಂದ ಖರ್ಚು- ವೆಚ್ಚಗಳು ಅಧಿಕವಾಗಲಿವೆ
ಮಿಥುನ: ವಿದ್ಯಾರ್ಥಿಗಳ ಪ್ರಯತ್ನಬಲದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ
ಕಟಕ: ಅನಿರೀಕ್ಷಿತವಾದ ಬೆಳವಣಿಗೆಯೊಂದರಲ್ಲಿ ಅಸಾಧ್ಯ ಸ್ನೇಹ ಕುದುರುವುದು

ಸಿಂಹ: ವೃತ್ತಿರಂಗದಲ್ಲಿ ಹೆಚ್ಚಿನ ಚೇತರಿಕೆ ಇಲ್ಲವಾದರೂ ಯಥಾಪ್ರಕಾರ ನಡೆದುಹೋಗಲಿದೆ
ಕನ್ಯಾ: ಕೆಲವೊಮ್ಮೆ ಧನಾ ಗಮನದಿಂದ ಕಾರ್ಯಸಿದ್ಧಿ. ಶುಭವಾರ್ತೆ ಕೇಳುವಿರಿ
ತುಲಾ: ದಾಂಪತ್ಯದಲ್ಲಿ ಹೊಂದಾಣಿಕೆ ಮನೋಭಾವ ಅತೀ ಅಗತ್ಯ
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿ ಗಳೊಂದಿಗೆ ನಿಷ್ಠುರರಾಗುವ ಸಂದರ್ಭ ಬರಬಹುದು

ಧನುಸ್ಸು: ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾಗಲಿದೆ
ಮಕರ: ಆಧ್ಯಾತ್ಮದತ್ತ ಒಲವು ಮೂಡಬಹುದು
ಕುಂಭ: ಚಂದದ ಮಾತುಗಳಿಗೆ ಮರುಳಾಗದಿರಿ
ಮೀನ:ಸಂಗಾತಿಯೊಂದಿಗೆ ಮನಸ್ತಾಪ ಏರ್ಪಡಬಹುದು

Facebook Comments