ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (09-09-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಮ್ಮ ತೋಳ್ಬಲವನ್ನು ಮೀರಿದ, ಮನೋಬಲವನ್ನು ಮೀರಿದ, ಬುದ್ಧಿಬಲವನ್ನು ಮೀರಿದ ಒಂದು ಮಹಾಶಕ್ತಿ ಇದೆ. ಆ ಅವ್ಯಕ್ತ ಶಕ್ತಿಯನ್ನು ದೇವರೆಂದು ಕರೆಯುತ್ತಾರೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಬುಧವಾರ , 09.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.25
ಚಂದ್ರ ಉದಯ ರಾ.11.19 / ಚಂದ್ರ ಅಸ್ತ ಬೆ.11.33
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಸಪ್ತಮಿ, (ರಾ.02.06)/ ನಕ್ಷತ್ರ: ಕೃತ್ತಿಕಾ (ಬೆ.11.15)
ಯೋಗ: ಹರ್ಷಣ (ಸಾ.06.16) / ಕರಣ: ಭವ (ಮ.01.08-ರಾ.02.06)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 24

# ರಾಶಿ ಭವಿಷ್ಯ
ಮೇಷ: ಗೃಹದಲ್ಲಿ ಶುಭ ಸಮಾರಂಭಗಳು ಜರು ಗುವ ಸಾಧ್ಯತೆಗಳಿವೆ. ಪ್ರೀತಿಯಲ್ಲಿ ಜಯ ಕಾಣುವಿರಿ
ವೃಷಭ: ಸಂಬಂಧಿಗಳು ಇಲ್ಲವೆ ಮಗನೊಡನೆ ಜಗಳ ಸಂಭವಿಸಬಹುದು. ಎಚ್ಚರಿಕೆಯಿಂದಿರಿ
ಮಿಥುನ: ಸ್ಥಿರಾಸ್ತಿಯಿಂದ ಹೆಚ್ಚು ಲಾಭವಿದೆ

ಕಟಕ: ದುಷ್ಟರಿಂದ ಕೆಟ್ಟ ಕೆಲಸಕ್ಕೆ ಬೋಧನೆಯಾಗಲಿದೆ
ಸಿಂಹ: ಕೆಲವು ವಿಚಾರದಲ್ಲಿ ಚಿಂತೆ ನಿಮ್ಮನ್ನು ಕಾಡಬಹುದು
ಕನ್ಯಾ: ನಿಮ್ಮದು ಚಂಚಲ ಮನಸ್ಸು. ಕೆಟ್ಟ ಮಾತುಗಳನ್ನಾಡುವಿರಿ
ತುಲಾ: ರಕ್ತ ಹೀನತೆಯವರು ವೈದ್ಯರ ಸಲಹೆ ಪಡೆಯಿರಿ
ವೃಶ್ಚಿಕ: ಸರ್ಕಾರಿ ನೌಕರರಿಗೆ ತೊಂದರೆಯಾಗಲಿದೆ

ಧನುಸ್ಸು: ಆಪ್ತ ಸ್ನೇಹಿತರಿಂದ ಲಾಭವಿದೆ
ಮಕರ: ಹೆಚ್ಚಿನ ಗೌರವ ದೊರೆಯುವುದು
ಕುಂಭ: ಧನಹಾನಿ ಆಗಬಹುದು
ಮೀನ: ಅವಶ್ಯಕ ವಸ್ತುಗಳಿಂದ ಸಂತೋಷ

 

Facebook Comments