ಇಂದಿನ ರಾಶಿ ಭವಿಷ್ಯ (01-09-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿನ್ನ ನೀನರಿತರೆ ನಿನ್ನೆಲ್ಲಾ ಹೊರೆಯ ಭಗವಂತನೇ ಹೊರುವ  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 01.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಸಂ.06.11 / ಚಂದ್ರ ಅಸ್ತ ನಾಳೆ ಬೆಳಗ್ಗೆ 06-05
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಚತುರ್ದಶಿ (ಬೆ.09.39) / ನಕ್ಷತ್ರ: ಧನಿಷ್ಠ (ಸಾ.04-38)
ಯೋಗ: ಅತಿಗಂಡ (ಮ.01.04) / ಕರಣ:ವಣಿಜ್-ಭದ್ರೆ (ಬೆ.09.39-ರಾ.10.13)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 16

# ರಾಶಿ ಭವಿಷ್ಯ
ಮೇಷ: ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.ಉದ್ವಿಗ್ನರಾಗದೆ ಸಮಚಿತ್ತದಿಂದ ವರ್ತಿಸಿ.
ವೃಷಭ: ಆತ್ಮೀಯರನ್ನು ಭೇಟಿ ಮಾಡುವಿರಿ, ಹಣಕಾಸಿನ ಬಗ್ಗೆ ಹೆಚ್ಚಿನ ಜÁಗ್ರತೆ ವಹಿಸಿ, ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ.
ಮಿಥುನ: ಶಾರೀರಿಕ ಅಸ್ವಸ್ಥತೆಯ ಜೊತೆಗೆ ಮಾನಸಿಕ ಚಿಂತೆಯೂ ಹೆಚ್ಚಲಿದೆ. ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ಸಿಗಲಿದೆ.
ಕಟಕ: ವ್ಯಾಪಾರದಲ್ಲಿ ಲಾಭ. ಆರೋಗ್ಯ ಕೊಂಚ ಏರುಪೇರಾಗಲಿದೆ. ಮನಸ್ಸು ವ್ಯಗ್ರವಾಗುವ ಸಾಧ್ಯತೆ ಇದೆ.
ಸಿಂಹ: ಹಿರಿಯ ಅಧಿಕಾರಿಗಳು ಪ್ರಸನ್ನರಾಗಿ ಎ¯್ಲÁ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಆರೋಗ್ಯ ಸುಧಾರಿಸಲಿದೆ.
ಕನ್ಯಾ: ವ್ಯವಹಾರಿಕ, ಸಾಮಾಜಿಕ ಕಾರ್ಯಗಳಿಗಾಗಿ ಓಡಾಟ. ಧನಾತ್ಮಕ ಆಲೋಚನೆಗಳಿಂದ ಕೆಲಸದಲ್ಲಿ ಯಶಸ್ಸು.
ತುಲಾ: ಸಹೋದರರೊಂದಿಗೆ ಸಮಸ್ಯೆಗಳ ಹಂಚಿಕೊಳ್ಳಿ. ಆತ್ಮೀಯರ ಆಗಮನದಿಂದ ಮನಃಶಾಂತಿ ದೊರೆಯಲಿದೆ.
ವೃಶ್ಚಿಕ: ಧನಾಗಮನ, ಆರೋಗ್ಯದಲ್ಲಿ ವ್ಯತ್ಯಯ.
ಧನುಸ್ಸು: ಹೊಸ ಕೆಲಸ ಮಾಡಲು ಉತ್ಸಾಹ-ಹುಮ್ಮಸ್ಸು, ಸ್ನೇಹಿತರಿಂದ ಸಹಾಯಹಸ್ತ ಲಭಿಸಲಿದೆ.
ಮಕರ: ದೃಢ ನಿರ್ಣಯ, ಆತ್ಮವಿಶ್ವಾಸದಿಂದ ಕೆಲಸಕಾರ್ಯ ಸುಗಮವಾಗಲಿದೆ.ಆರ್ಥಿಕ ಸದೃಢತೆಯಿಂದ ಮನಸ್ಸಿಗೆ ಹರ್ಷ.
ಕುಂಭ: ಸ್ವಾದಿಷ್ಟ ಭೋಜನ ಹಾಗೂ ಹೊಸ ವಸ್ತ್ರ ಕೊಳ್ಳುವ ಯೋಗವಿದೆ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸದಿರಿ.
ಮೀನ: ಆತ್ಮವಿಶ್ವಾಸದ ಕೊರತೆಯಿಂದಾಗಿ ಎದುರಾಳಿಗಳ ಮೇಲುಗೈ ನೂತನ ಉದ್ಯೋಗದ ಹುಡುಕಾಟದಲ್ಲಿ ಯಶಸ್ಸು.

 

Facebook Comments