ಕೋವಿಡ್ ಹೊರತಾಗಿಯೂ ಒಲಿಂಪಿಕ್ಸ್ ಅಬಾಧಿತ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ,ಸೆ.8- ಮುಂದಿನ ವರ್ಷ ಟೋಕಿಯೊದಲ್ಲಿ 32ನೇ ಒಲಿಂಪಿಯಾಡ್ ಪಂದ್ಯಗಳನ್ನು ಆಯೋಜಿಸಲು ಐಒಸಿ ಸಂಪೂರ್ಣ ಬದ್ಧವಾಗಿದೆ ಎಂದು ಸಂಘಟನಾ ಸಮಿತಿ ವಕ್ತಾರ ಮಾಸಾ ಟಕಯಾ ಇಂದು ಹೇಳಿದ್ದಾರೆ.

ನಾಳೆ ನಡೆಯಲಿರುವ ಐಒಸಿ ಕಾರ್ಯ ನಿರ್ವಾಹಕ ಮಂಡಳಿ ಸಭೆಯಲ್ಲಿ ಪಂದ್ಯಗಳನ್ನು ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಸೂಚನೆಗಳನ್ನು ಪಡೆದು ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಟೋಕಿಯೊದಲ್ಲಿ 11,000 ಒಲಿಂಪಿಕ್ ಕ್ರೀಡಾಪಟುಗಳು ಮತ್ತು 4,400 ಪ್ಯಾರಾಲಿಂಪಿಯನ್ನರಿದ್ದಾರೆ. ಸಾವಿರಾರು ಸಿಬ್ಬಂದಿಗಳು ಮತ್ತು ತಾಂತ್ರಿಕ ಅಧಿಕಾರಿಗಳು ಇದ್ದಾರೆ. ಇವರೆಲ್ಲರ ಸುರಕ್ಷತೆ ಬಗ್ಗೆ ಸಂಘಟಕರು ಮತ್ತು ಐಒಸಿ ಸೂಕ್ತ ಕ್ರಮ ಕೈಗೊಳ್ಳಲ್ಲಿದೆ ಎಂದು ತಿಳಿಸಿದ್ದಾರೆ.

ನಾವು ತೆಗೆದುಕೊಳ್ಳುವ ದೃಢವಾದ ಕ್ರಮಗಳನ್ನು ರೂಪಿಸಲು ಪ್ರಾರಂಭಿಸಿದ್ದೇವೆ. ಸಂಭಾವ್ಯ ಸಂಪರ್ಕ ತಡೆಯನ್ನು ಎದುರಿಸಲು ಫಲಕಗಳು, ಕ್ರೀಡಾಪಟುಗಳನ್ನು ಜಪಾನ್‍ಗೆ ಸೇರಿಸುವುದು, ಕೋವಿಡ್ ಪರೀಕ್ಷೆ, ಸ್ಥಳಗಳನ್ನು ಸುರಕ್ಷಿತವಾಗಿಡಲು ಕ್ರಮಗಳು, ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತದೆಯೇ ಮತ್ತು ಜಪಾನಿಯೇತರ ಅಭಿಮಾನಿಗಳನ್ನೂ ಸಹ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

Facebook Comments