ಟೋಕಿಯೊ ಒಲಂಪಿಕ್ಸ್ : ಮತ್ತೆ 16 ಮಂದಿಗೆ ಕೊರೋನಾ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ,ಜು.28-ಜಪಾನ್‍ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಂಪಿಕ್ಸ್‍ನಲ್ಲಿ ಮತ್ತೆ 16 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೊಸ ಸೋಂಕಿತರಲ್ಲಿ ಯಾವುದೆ ದೇಶದ ಕ್ರೀಡಾಪಟು ಇಲ್ಲ ಎನ್ನುವುದು ಸಾಮಾಧನಕರದ ಸಂಗತಿ. 16 ಸೋಂಕಿತರಿಂದ ಇದುವರೆಗೂ 169 ಮಂದಿಗೆ ಕೊರೊನಾ ಕಾಣಿಸಿಕೊಂಡಂತಾಗಿದೆ.

ಕಳೆದ ಮೂರು ದಿನಗಳಿಂದ ಕ್ರೀಡಾ ಪಟುಗಳಲ್ಲಿ ಸೋಂಕು ಕಾಣಿಸಿಕೊಳ್ಳುತಿತ್ತು. ಆದರೆ, ಇದೇ ಮೊದಲ ಭಾರಿಗೆ ಯಾವುದೆ ಕ್ರೀಡಾಪಟುವಿಗೂ ಸೋಂಕು ಕಾಣಿಸಿಕೊಂಡಿಲ್ಲ. ಈ ಭಾರಿ ಒಲಂಪಿಕ್ಸ್ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಾಲ್ವರು ಹಾಗೂ ಇಬ್ಬರು ಮಾಧ್ಯಮ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

Facebook Comments