ಒಲಿಂಪಿಕ್ಸ್ ಪದಕ ಪಟ್ಟಿ : ನಂ.1 ಸ್ಥಾನದಲ್ಲಿ ಚೀನಾ, 41ನೇ ಸ್ಥಾನಕ್ಕೆ ಕುಸಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಜು.28- ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ತೋರುತ್ತಾ ಪದಕಗಳನ್ನು ಸೂರೆಗೊಳ್ಳುತ್ತಿರುವ ಚೀನಾದ ಅಥ್ಲೀಟ್‍ಗಳು ಪಾಯಿಂಟ್ಸ್ ಪಟ್ಟಿಯಲ್ಲಿ ತಮ್ಮ ದೇಶವನ್ನು ಟಾಪ್ ಆಗಿಸುವಲ್ಲಿ ಯಶಸ್ವಿಯಾಗಿದ್ದರೆ, ಭಾರತ ತಂಡವು 41ನೆ ಸ್ಥಾನಕ್ಕೆ ಕುಸಿದಿದೆ. ಚೀನಾದ ಅಥ್ಲೀಟ್‍ಗಳು ಇದುವರೆಗೂ 11 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳೊದಿಗೆ ಒಟ್ಟು 24 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗಿದ್ದರೆ, ಜಪಾನ್ ತಂಡವು 11 ಚಿನ್ನ, 4 ಬೆಳ್ಳಿ, 5 ಕಂಚು ಸೇರಿ 20 ಪದಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ, ಅಮೆರಿಕಾ ಅಥ್ಲೀಟ್‍ಗಳು ಪದಕ ಸೂರೆಗೊಳ್ಳು ವಲ್ಲಿ ನಿರತರಾಗಿದ್ದು ಆ ದೇಶದ ಆಟಗಾರರು ಇದುವರೆಗೂ 10 ಚಿನ್ನ, 11 ರಜತ, 9 ಕಂಚಿನ ಪದಕಗಳೊಂದಿಗೆ ಒಟ್ಟು 30 ಪದಕಗಳನ್ನು ತಮ್ಮದಾಗಿಸಿಕೊಂಡಿದೆ.

ನಾಲ್ಕನೇ ಸ್ಥಾನದಲ್ಲಿ ರಷ್ಯಾ 19 ಪದಕ ( 7ಚಿನ್ನ, 8 ರಜತ, 4 ಕಂಚು), 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ 15 ಪದಕ (6 ಚಿನ್ನ, 1 ಬೆಳ್ಳಿ, 8 ಕಂಚು), 6ನೇ ಸ್ಥಾನದಲ್ಲಿ ಇಂಗ್ಲೆಂಡ್ 15 ಪದಕ ( 5 ಚಿನ್ನ, 6 ರಜತ, 4 ಕಂಚು), 7ನೇ ಸ್ಥಾನದಲ್ಲಿ ಕೊರಿಯಾ 10 ಪದಕ (3 ಸ್ವರ್ಣ, 2 ಬೆಳ್ಳಿ, 5 ಕಂಚು), 8ನೇ ಸ್ಥಾನದಲ್ಲಿ ಫ್ರಾನ್ಸ್ 8 ಪದಕ (3 ಚಿನ್ನ, 2 ರಜತ, 3 ಕಂಚು), 9ನೇ ಸ್ಥಾನದಲ್ಲಿ ನೆದರ್‍ಲ್ಯಾಂಡ್ 9 ಪದಕ (2 ಚಿನ್ನ, 5 ಬೆಳ್ಳಿ, 2 ಕಂಚು) ಹಾಗೂ 10 ನೇ ಸ್ಥಾನದಲ್ಲಿ ಕೆನಡಾ 9 ಪದಕ ( 2 ಸ್ವರ್ಣ, 3 ಬೆಳ್ಳಿ, 4 ಕಂಚು) ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ 41ನೆ ಸ್ಥಾನದಲ್ಲಿರುವ ಭಾರತದ ಪರ ವೇಟ್ ಲಿಫ್ಟಿಂಗ್‍ನಲ್ಲಿ ಮಣಿಪುರದ ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಉಳಿದ ಆಟಗಾರರು ಪ್ರಶಸ್ತಿ ಸುತ್ತನ್ನು ಪ್ರವೇಶಿಸುವಲ್ಲಿ ಎಡವಿದ್ದಾರೆ.

# ಮುಂದುವರೆದ ಬಿಲ್ಲುಗಾರರ ವೈಫಲ್ಯ, ನಿರಾಸೆ ಮೂಡಿಸಿದ ತರುಣ್ ದೀಪ್ ರೈ
ಟೋಕಿಯೋ, ಜು. 28- ಒಲಿಂಪಿಕ್ಸ್‍ನ 6ನೇ ದಿನವೂ ಭಾರತಕ್ಕೆ ನಿರಾಸೆಯಾಗಿದೆ, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಗೆಲುವು ಸಾಧಿಸಿ ಅಭಿಮಾನಿಗಳನ್ನು ಸಂಭ್ರಮಗೊಳಿಸಿದ್ದರೆ, ಇಂದು ನಡೆದ ಮಹಿಳೆಯರ ಹಾಕಿ, ಆರ್ಚರಿ, ಹಾಯಿದೋಣಿ ವಿಭಾಗಗಳಲ್ಲಿ ಭಾರತದ ಪಟುಗಳು ಸೋಲುವ ಮೂಲಕ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಆರಂಭಗೊಂಡಾಗಿನಿಂದಲೂ ಕಳಪೆ ಪ್ರದರ್ಶನ ತೋರುತ್ತಾ ಬರುತ್ತಿರುವ ಆರ್ಚರಿಗಳ ವೈಫಲ್ಯ ಇಂದು ಕೂಡ ಮುಂದುವರೆದಿದೆ. ಇಂದು ನಡೆದ ಬಿಲ್ಲುಗಾರರ ಪುರುಷರ ವಿಭಾಗದಲ್ಲಿ ತರುಣ್ ದೀಪ್ ರೈ ಸೋಲುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇಂದು ಬೆಳಗ್ಗೆ ನಡೆದ ಮೊದಲ ಸಿಂಗಲ್ಸ್ ವಿಭಾಗದಲ್ಲಿ ಭಾರತದ ತರುಣ್‍ದೀಪ್ ರೈ ಅವರು ಉಕ್ರೇನ್‍ನ ಬಿಲ್ಲುಗಾರನ ವಿರುದ್ಧ 6-4 ರಿಂದ ಗೆಲುವು ಸಾಧಿಸುವ ಮೂಲಕ ರೌಂಡ್ 16ಕ್ಕೆ ಪ್ರವೇಶ ಪಡೆದಿದ್ದರು. ಆದರೆ ಮೊದಲ ಸುತ್ತಿನಲ್ಲಿ ತೋರಿದ ಪರಾಕ್ರಮವನ್ನೇ ಮತ್ತೆ ಪ್ರದರ್ಶಿಸುವಲ್ಲಿ ಎಡವಿದ ತರುಣ್‍ದೀಪ್ ರೈ 16ನೆ ಸುತ್ತಿನಲ್ಲಿ ಇಟಲಿಯ ಅರ್ಚರಿ ಶ್ಯಾನಿ ವಿರುದ್ಧ 4-6 ರಿಂದ ಸೋಲುವ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಪಯಣವನ್ನು ಅಂತ್ಯಗೊಳಿಸಿದ್ದಾರೆ.

ಇದಕ್ಕೂ ಮುನ್ನ ಟೋಕಿಯೋ ವಿಭಾಗದಲ್ಲಿ ನಡೆದ ಪುರುಷ, ಮಹಿಳಾ ಮಿಶ್ರಿತ ಅರ್ಚರಿ, ಮೂವರು ಪುರುಷರ ಆರ್ಚರಿ ವಿಭಾಗಗಳಲ್ಲೂ ಭಾರತದ ಬಿಲ್ಲುಗಾರರು ಕಳಪೆ ಪ್ರದರ್ಶನ ತೋರಿಸಿ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದ್ದಾರೆ.

# ಫೈನಲ್‍ಗೇರುವಲ್ಲಿ ವಿಫಲರಾದ ಅರ್ಜುನ್ ಲಾಲ್, ಅರವಿಂದ್ ಸಿಂಗ್

ಟೋಕಿಯೋ, ಜು 28- ರೋಯಿಂಗ್(ಹಾಯಿ ದೋಣಿ) ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದ ಅರ್ಜುನ್ ಲಾಲ್ ಹಾಗೂ ಅರವಿಂದ್ ಸಿಂಗ್ ಅವರು ಸೆಮಿಫೈನಲ್‍ನಲ್ಲಿ ಅಂತಿಮ ಸ್ಥಾನಿಗಳಾಗುವ ಮೂಲಕ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದ್ದಾರೆ. ಡಬಲ್ ಸ್ಕಲ್ಸ್‍ನ ಎ ವಿಭಾಗದಲ್ಲಿ ಸ್ಥಾನ ಪಡೆದಿದ್ದ ಅರ್ಜುನ್ ಹಾಗೂ ಅರವಿಂದ್ 6ನೆ ಯವರಾಗಿ ಗುರಿ ಮುಟ್ಟಿದ್ದರಿಂದ ಫೈನಲ್ ಪ್ರವೇಶ ಪಡೆಯುವಲ್ಲಿ ಎಡವಿದ್ದಾರೆ. ಫೈನಲ್‍ನಲ್ಲಿ ಒಟ್ಟು 6 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಬಿ ಗುಂಪಿನಲ್ಲಿ ಅಗ್ರ ಮೂರು ಸ್ಥಾನ ಪಡೆಯುವವರು ಫೈನಲ್‍ಗೆ ಅರ್ಹತೆ ಪಡೆಯಲಿದ್ದಾರೆ.

ಹಾಯಿದೋಣಿಯ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಐರ್ಲೆಂಡ್‍ನ ಜೋಡಿಗಳಾದ ಫಿನ್‍ಟನ್ ಮೆಕ್‍ಗ್ರಾತಿ ಹಾಗೂ ಪೌಲ್ ಎಡೊನೊವಾನ್ ಅವರು ಕೇವಲ 6:05.33 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದರೆ, ದ್ವಿತೀಯ ಸ್ಥಾನಿಯಾದ ಇಟಲಿಯ ಸ್ಟೇಫಾನೋ ಒಪೆÇ್ಪ ಮತ್ತು ಪಿಟ್ರೋ ರುಟಾ ಜೋಡಿ 6:07.70 ನಿಮಿಷ ಹಾಗೂ ಬೆಲ್ಜಿಯಂನ ನೆಲ್ಸ್ ವಾನ್ ಜಂದ್‍ವೇಗೆ ಹಾಗೂ ಟಿಮ್ ಬ್ರನ್ಸ್ ಜೋಡಿಯು 6:13.07 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಫೈನಲ್‍ಗೆ ಅರ್ಹತೆ ಗಿಟ್ಟಿಸಿದರು.

ಭಾರತದ ಅರ್ಜುನ್ ಲಾಲ್‍ಜತ್ ಮತ್ತು ಅರವಿಂದ್‍ಸಿಂಗ್ ಅವರು 6:51.36 ನಿಮಿಷಗಳಲ್ಲಿ ಗೆಲುವಿನ ಗೆರೆ ಮುಟ್ಟಿದರೂ ಭಾರತದ ಪರ ಒಲಿಂಪಿಕ್ಸ್‍ನ ಸೆಮಿಫೈನಲ್‍ಗೇರಿದ ಮೊದಲ ಹಾಯಿದೋಣಿ ಆಟಗಾರರು ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮುನ್ನ 2012ರಲ್ಲಿ ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಭಾರತದ ಮಂಜಿತ್ ಸಿಂಗ್ ಹಾಗೂ ಸಂದೀಪ್ ಕುಮಾರ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ 18ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

Facebook Comments