ಒಲಿಂಪಿಕ್ಸ್ ಕ್ರೀಡಾಪಟುಗಳ ಜೊತೆ ತೆರಳಲುನನಗೂ ಅನುಮತಿ ನೀಡಿ : ಕೇರಳ ಕ್ರೀಡಾ ಸಚಿವ
ತಿರುವನಂತಪುರಂ, ಜು.13- ಕೇರಳ ರಾಜ್ಯದಿಂದ ಒಲಂಪಿಕ್ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಖುದ್ದು ಟೋಕಿಯೋಗೆ ತೆರಳಲು ಅನುಮತಿ ನೀಡುವಂತೆ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ವಿಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ತಾವು ಜಪಾನ್ಗೆ ತೆರಳಲು ಸಿದ್ಧವಿದ್ದು, ಅದಕ್ಕೆ ಬೇಕಾದ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಆಸಕ್ತಿದಾಯಕ ವಿಷಯವೆಂದರೆ ಈ ವರ್ಷದ ಮೇ ತಿಂಗಳಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಪಿಣರಾಯಿವಿಜಯನ್ ಸಂಪುಟದ ಸದಸ್ಯರ ಪೈಕಿ ವಿ.ಅಬ್ದುರಹಿಮಾನ್ವಿಲ್ ಮೊದಲ ಬಾರಿಗೆ ವಿದೇಶಿ ಪ್ರಯಾಣ ಕೈಗೊಳ್ಳಲು ಮುಂದಾಗಿದ್ದಾರೆ.
ಒಲಂಪಿಕ್ನಲ್ಲಿ ಭಾಗವಹಿಸಲು ತಮಗೆ ಭಾರತೀಯ ಒಲಂಪಿಕ್ ಸಂಸ್ಥೆಯಿಂದ ಆಹ್ವಾನ ಬಂದಿದೆ. ಒಂದು ವೇಳೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಅಧಿಕೃತವಾಗಿ ಒಲಂಪಿಕ್ನಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ. ಕೇರಳ ರಾಜ್ಯದಿಂದ ಪಿ.ಆರ್.ಶ್ರೀಜೇಸ್, ಸಜ್ಜನ್ ಪ್ರಕಾಶ್, ಎಂ.ಶ್ರೀಶಂಕರ್, ಕೆ.ಟಿ.ಇರ್ಫಾನ್, ಎಂ.ಪಿ.ಜಬ್ಬಿರ್, ಮೊಹಮ್ಮದ್ ಅನಸ್, ಅಮೋಜ್ ಜಾಕಬ್, ನಿರ್ಮಲ್ನೋಹ ಟಾಮ್, ಅಲೆಕ್ಸ್ ಅಂಥೋಣಿ ಅವರು ಒಲಂಪಿಕ್ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.