ಸೂಪರ್ ಓವರ್‌ಗೆ 3-3ರ ಸೂತ್ರ ಅಳವಡಿಸಬೇಕು : ಟಾಮ್

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಫೆ.2- ಟ್ವೆಂಟಿ-20 ಪಂದ್ಯಗಳು ಟೈಯಾದರೆ ಅನುಸರಿಸುವ ಸೂಪರ್ ಓವರ್‍ಗೆ 3-3 ರ ಸೂತ್ರವನ್ನು ಅಳವಡಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೋಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇತ್ತೀಚೆಗೆ ಎಲ್ಲ ತಂಡಗಳಲ್ಲೂ ಯುವ ಆಟಗಾರರು ಹೆಚ್ಚಾಗಿ ಸ್ಥಾನ ಪಡೆದಿರುವುದರಿಂದ ಹೊಡಿ ಬಡಿ ಪಂದ್ಯವಾಗಿರುವ 20-20 ಪಂದ್ಯಗಳು ಬಹುತೇಕ ಡ್ರಾ ಗೊಂಡಿದೆ. ತದ ನಂತರ ಸೂಪರ್ ಓವರ್‍ನ ಮೊರೆ ಹೋಗಿ ಗೆಲುವು ಕಾಣಬೇಕಾಗಿದೆ.

ಇತ್ತೀಚೆಗೆ 4 ದಿನಗಳ ಅಂತರದಲ್ಲಿ 3 ಪಂದ್ಯಗಳು ಸೂಪರ್ ಓವರ್ ಮೂಲಕ ಗೆಲುವು ಕಂಡಿದೆ. ಸೂಪರ್ ಓವರ್‍ನಲ್ಲಿ 3 ಬ್ಯಾಟ್ಸ್‍ಮನ್‍ಗಳು ಮೈದಾನಕ್ಕೆ ಇಳಿಯುವಂತೆ ಇಬ್ಬರು ಬೌಲರ್‍ಗಳಿಗೆ ಬೌಲ್ ಮಾಡುವ ಅವಕಾಶ ನೀಡಬೇಕೆಂದು ಹೇಳಿದರು. ಸೂಪರ್ ಓವರ್‍ನಲ್ಲಿ ಕೇವಲ 6 ಎಸೆತಗಳಿರುವುದರಿಂದ ಬೌಲರ್ ಮೊದಲ ಮೂರು ಎಸೆತಗಳಲ್ಲಿ ರನ್‍ಗಳನ್ನು ಬಿಟ್ಟುಕೊಟ್ಟರೆ ವಿಚಲಿತರಾಗುತ್ತಾರೆ ಅವರ ಒತ್ತಡವನ್ನು ನಿವಾರಿಸುವ ಸಲುವಾಗಿ ಮತ್ತೊಬ್ಬ ಬೌಲರ್‍ಗೆ ಬೌಲ್ ಮಾಡುವ ಅವಕಾಶವನ್ನು ಕಲ್ಪಿಸಬೇಕೆಂದು ಮೋಡಿ ಕೋರಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ಹಾಗೂ ಭಾರತ ನಡುವೆ ನಡೆದ 2 ಪಂದ್ಯಗಳು ಸೂಪರ್ ಓವರ್ ಮೂಲಕ ನಿರ್ಣಯವಾಗಿದ್ದರೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಪಂದ್ಯದ ಗತಿಯನ್ನು ಸೂಪರ್ ಓವರ್ ನಿರ್ಣಯಿಸಿತ್ತು. ಈ ಪಂದ್ಯಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಗೆಲುವು ಸಾಧಿಸಿದ್ದವು.

Facebook Comments